ಬ್ರಹ್ಮಾವರ : ಬಾರಕೂರು ಕಲ್ಲು ಚಪ್ಪರ ಮತ್ತು ಆಕಾಶವಾಣಿ ವೃತ್ತದ ಬಳಿ ಹೊಸ ತಂತ್ರಜ್ಞಾನದ ಸಿಸಿ ಕ್ಯಾಮರಾ ಅಳವಡಿಕೆ

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಕೂರು ಕಲ್ಲು ಚಪ್ಪರ ಮತ್ತು ಆಕಾಶವಾಣಿ ವೃತ್ತದ ಬಳಿ ದಾನಿಗಳ ನೆರವಿನಿಂದ ಹೊಸ ತಂತ್ರಜಾÐನದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಇತ್ತೀಚೆಗೆ ಬಾರಕೂರಿನಲ್ಲಿ 3 ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮಾರಾಕ್ಕೆ ಬಟ್ಟೆ ಮುಚ್ಚಿ ಅಲ್ಲಿರುವ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿತ್ತು. ಇದೀಗ ಅಳವಡಿಸಿದ್ದ ಸಿಸಿ ಕ್ಯಾಮರಾ
ಹೊಸ ತಂತ್ರಜ್ಞಾನದ್ದಾಗಿದ್ದು ಮಂದ ಬೆಳಕಿನಲ್ಲಿ ಕೂಡಾ ವ್ಯಕ್ತಿ, ವಾಹನಗಳ ಚಲನವಲನ ಕಂಡುಹಿಡಿಯಬಹುದಾಗಿದೆ. ಅಪರಾಧಿಗಳ ಜಾಡನ್ನು ಶೀಘ್ರ ಪತ್ತೆ ಹಚ್ಚಲು ಈ ಸಿಸಿ ಕ್ಯಾಮರಾ ಸಹಕಾರಿಯಾಗಲಿದೆ ಎಂದು ಬ್ರಹ್ಮಾವರ ಠಾಣಾಧಿಕಾರಿ ರಾಜಶೇಖರ ವಂದಲಿ ತಿಳಿಸಿದ್ದಾರೆ.
