ಬೈಂದೂರು: ಸಹಾಯದ ನಿರೀಕ್ಷೆಯಲ್ಲಿ ಚಂದು ಕುಟುಂಬ
ಬೈಂದೂರು ತಾಲೂಕು ಕಚೇರಿಯ ಸಮೀಪದಲ್ಲಿರುವ ದರ್ಖಾಸ್ತು ಕಾಲೋನಿ ನಿವಾಸಿ ಚಂದು ಅವರ ಕುಟುಂಬಕ್ಕೆ ದಿಕ್ಕೇ ತೋಚದಂತಹ ಪರಿಸ್ಥಿತಿ ಇದೆ. ಕಿತ್ತು ತಿನ್ನುವ ಬಡತನದ ನಡುವೆ ಆಧಾರಸ್ಥಂಭವಾಗಿದ್ದ ಹಿರಿ ಮಗ ಪ್ರಕಾಶ್ ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಆರು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ.
ಎರಡು ವರ್ಷಗಳ ಹಿಂದಿನ ಭಾರೀ ಮಳೆಗೆ ಮನೆ ಮೇಲೆ ಮರ ಬಿದ್ದ ಕಾರಣ ಮನೆಯೂ ನಾಶವಾಗಿದೆ. ಇಂದು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಭೇಟಿ ನೀಡಿ ಚಂದು ಅವರ ಮನೆಯ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಕುಟುಂಬದ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಬೈಂದೂರು ಪಟ್ಟಣ ಪಂಚಾಯತ್ ಕಾರ್ಯನಿರ್ವಣಾಧಿಕಾರಿ ನವೀನ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.