ಬ್ರಹ್ಮಾವರ: ಒಂದು ತಂತಿಯಿಂದ ನಾದ ಹೊರಹೊಮ್ಮಿಸುವ ಕಿಂದರಜೋಗಿ

ದಸರಾ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕರಾವಳಿ ಭಾಗಕ್ಕೆ ಬಂದು ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜನರನ್ನು ಬೆರಗುಗೊಳಿಸುತ್ತಿದ್ದರು. ಇದೀಗ ದಾವಣಗೆರೆ ಮೂಲದ ಭೈರಪ್ಪ ಅವರು ಕರಾವಳಿ ಭಾಗಕ್ಕೆ ಆಗಮಿಸಿದ್ದು, ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜೀವನದ ಮೌಲ್ಯವನ್ನು ಬಿತ್ತರಿಸುವ ಕಾಯಕಕ್ಕೆ ಮುಂದಾಗಿದ್ದಾರೆ.

4 ಅಡಿ ಉದ್ದದ ಬಿದಿರಿನ ದಂಡವೊಂದಕ್ಕೆ 3 ಸ್ಥರದ ಸೋರೆ ಕಾಯಿ ಬುರುಡೆಗೆ ತಂತಿಯೊಂದನ್ನು ಅಳವಡಿಸಿ ಹಾಡು ಹಾಡುವಾಗ ಸ್ವರ ತಂತುಗಳು ತಂತಿ ಮೂಲಕ ಹೊರಹೊಮ್ಮುತ್ತದೆ. ಉತ್ತರ ಕರ್ನಾಟಕದ ಸಂತ ಶಿಶುನಾಳ ಶರೀಫ ಕನಕ ದಾಸರ ಹಲವಾರು ಗಾಯನಗಳನ್ನು ಹಾಡಿ ಜನರು ನೀಡುವ ಹಣದಿಂದಲೇ ಜೀವನ ಸಾಗಿಸುತ್ತಿದ್ದಾರೆ.

ಮರಾಠಿ ಮೂಲದವರಾದ ಭೈರಪ್ಪ ಅವರು ಜೋಗಿ ಜನಾಂಗದವರು, ಉತ್ತರ ಕರ್ನಾಟದಲ್ಲಿ ನೆಲೆಸಿದ್ದು, ಶಿಕ್ಷಣದಿಂದ ವಂಚಿತರಾಗಿರುವ ಇವರು ತಲತಲಾಂತರದಿಂದ ಕಿಂದರಿ ಹಾಡು ಹಾಡಿ ಜೀವನ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published.