ಬೈಂದೂರು: ಆಗಸ್ಟ್ 3ರಂದು “ಕೆಸರಲ್ಲೊಂದಿನ ಗಮ್ಮತ್” ಕಾರ್ಯಕ್ರಮ

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಬೈಂದೂರು ನೇತ್ರತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ “ಕೆಸರಲ್ಲೊಂದಿನ ಗಮ್ಮತ್”ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರನ್ನು ಒಂದೇ ಸೂರಿನಡಿ ಸೇರಿಸಿ, ಹೆಸರೇ ತಿಳಿಸುವಂತೆ ಗಡ್ಜ್ ಗಮ್ಮತ್ ಮಾಡುವ ಪರಿಕಲ್ಪನೆ ಆಯೋಜಕರದ್ದಾಗಿದೆ.
ಇದೇ ಬರುವ ಆಗಸ್ಟ್ 3 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನೈಲಾಡಿ ಬೈಲ್ ಹಾಗೂ ಜೆ.ಎನ್.ಆರ್ ಹಾಲ್, ಯಡ್ತರೆ ಬೈಂದೂರಿನ ಬಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕೆಸರುಗೆದ್ದೆ ಆಟೋಟ ಸೇರಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಯಾವ್ಯಾವ ಸ್ಪರ್ಧೆಗಳಿವೆ?
ಒಂದೆರಡಲ್ಲ ಹತ್ತಾರ ಬಗೆಯ ಆಟೋಟಗಳನ್ನು ಏರ್ಪಡಿಸಲಾಗಿದ್ದು ಈ ಕೆಳಗಿನಂತಿವೆ.
ಪುರುಷರಿಗೆ :
ಹಗ್ಗಜಗ್ಗಾಟ,ವಾಲಿಬಾಲ್,ಕಬಡ್ಡಿ,ಕೆಸರ್ ಗೆದ್ದಿ ಓಟ,ಅಡಿಕೆ ಹಾಳ್ಯಂಗ್ ಎಳುದ್,ತೆಂಗಿನ ಚ್ವಾಂಗಿ ಮಾದರಿ ತಯಾರ್ಸುದ್, ಬೀಸ್‌ಬಲಿ ರೌಂಡ್ ಬೀಸುದ್, ಚಿಟ್ ಬಿಲ್ ಶೂಟಿಂಗ್, ಚನ್ನೆಮಣಿ ಆಟ,ಅಪ್ಪ-ಮಗು ಉಪ್ಪುಮೂಟೆ, ಸಾಂಪ್ರದಾಯಿಕ ಗೀತೆ ಗಾಯನ, ರಸಪ್ರಶ್ನೆ.
ಮಹಿಳೆಯರಿಗೆ :
ಹಗ್ಗಜಗ್ಗಾಟ, ಥ್ರೋ ಬಾಲ್, ಕೆಸರ್ ಗೆದ್ದಿ ಓಟ, ಮಡ್ಲ್ ನೇಯುದ್, ಅಡಿಕೆ ಹಾಳ್ಯಂಗ್ ಎಳುದ್, ಕೊಟ್ಟಿ ಸೆಡುದ್, ಹೂಮಾಲಿ ಕಟ್ಟುದ್, ಗುಡ್ನ ಆಟ, ರಸಪ್ರಶ್ನೆ, ಚನ್ನೆಮಣಿ ಆಟ, ಅಮ್ಮ-ಮಗು ಉಪ್ಪುಮೂಟೆ, ಸಾಂಪ್ರದಾಯಿಕ ಗೀತೆ ಗಾಯನ, ತೆಂಗಿನ ಚ್ಚಾಂಗಿ ಮಾದರಿ ತಯಾರ್ಸುದ್.
ಮಕ್ಕಳಿಗೆ :
ಕೆಸರ್ ಗೆದ್ದಿ ಓಟ, ಬೆನ್ ಚೆಂಡ್ ಆಟ, ಲಿಂಬು ಚಮಚ ಓಟ, ಗೂಟಕ್ಕೆ ಸುತ್ತಿ ಓಡುದ್, ಅಡಿಕೆ ಹಾಳ್ಯಂಗ್ ಎಳುದ್, ತೆಂಗಿನ ಚ್ವಾಂಗಿ ಮಾದರಿ ತಯಾರ್ಸುದ್, ಚಿತ್ರಕಲೆ, ಛದ್ಮವೇಷ, ರಸಪ್ರಶ್ನೆ, ಭಾಷಣ (ವಿಷಯ: ಕುಂದಾಪ್ರ ಕನ್ನಡ ಗಾದೆ ವಿಸ್ತರಣೆ).
ಇನ್ನು ಬೈಂದೂರು ವಿಧಾನಸಭಾ ವ್ಯಾಪ್ತಿಯ ಎಲ್ಲಾ ನಾಗರಿಕರಿಗೂ ಭಾಗವಹಿಸಲು ಅವಕಾಶವಿದ್ದು ಆಗಸ್ಟ್ 3ರ ಬೆಳಿಗ್ಗೆ 9 ಗಂಟೆಯೊಳಗೆ ಆಸಕ್ತರು ನೊಂದಾಯಿಸಬಹುದಾಗಿದೆ.
