ಬೈಂದೂರು: ತ್ರಾಸಿ ಬೀಚ್‌ನಲ್ಲಿ ಬಾಲ ಪ್ರತಿಭೆ ತನ್ವಿತಾ ಅವರಿಂದ ಯೋಗಾಸನದ ಪ್ರದರ್ಶನ

ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ನಿವಾಸಿ ಪುಷ್ಪಲತಾ ಮತ್ತು ವಸಂತ ಅವರ ದಂಪತಿಗಳ ಪುತ್ರಿ ಬಾಲ ಪ್ರತಿಭೆ ಕು. ತನ್ವಿತಾ ಯೋಗಾಸನದಲ್ಲಿ ಚಿನ್ನ,ಬೆಳ್ಳಿ,ಕಂಚು ಸೇರಿದಂತೆ ಒಟ್ಟು ೬೫ಕ್ಕೂ ಅಧಿಕ ಪ್ರಶಸ್ತಿಗಳನ್ನು ಜಯಿಸುವುದರ ಮೂಲಕ ಯೋಗಾಸನದಲ್ಲಿ ವಿಶಿಷ್ಟವಾದ ಸಾಧನೆ ಮಾಡುತ್ತಿದ್ದಾರೆ. ಇದೀಗ ತ್ರಾಸಿ ಬೀಚ್‌ನಲ್ಲಿ ನಾನಾ ಭಂಗಿಗಳ ಯೋಗಾಸನ ಪ್ರದರ್ಶನ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಬಾಲ ಪ್ರತಿಭೆ ಕು. ತನ್ವಿತಾ ನಟ ದರ್ಶನ ಜತೆ ಕ್ರಾಂತಿ ಸಿನಿಮಾದಲ್ಲಿ ನಟನೆ ಮಾಡುವುದರ ಮುಖೇನ ಚಿತ್ರರಂಗದಲ್ಲಿಯೂ ಗುರುತಿಸಿ ಕೊಂಡಿದ್ದಾರೆ. ರಿಯಾಲಿಟಿ ಶೋ,ಭರತ ನಾಟ್ಯ, ಜಾಹೀರಾತು ವಿಭಾಗದಲ್ಲಿಯೂ ವಿಶೇಷ ರೀತಿಯ ಚಾಪನ್ನು ಮೂಡಿಸಿದ್ದಾರೆ. 10ನೇ ವಯಸ್ಸಿನಲ್ಲಿ ಯೋಗಾಭ್ಯಾಸದಲ್ಲಿ ಗುರುತಿಸಿಕೊಂಡಿರು ಬಹುಮುಖ ಪ್ರತಿಭೆಯನ್ನು ಹೊಂದಿರುವ ಕು. ತನ್ವಿತಾ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಕಲಾಶ್ರೀ ಪ್ರಶಸ್ತಿ,ಅಬ್ದು ಕಲಾಂ ರಾಷ್ಟ್ರ ಸದ್ಭಾವನಾ ಪ್ರಶಸ್ತಿ,ಯೋಗರತ್ನ ಪ್ರಶಸ್ತಿ,ಬಾಲ ಪುರಸ್ಕಾರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದೆ.ಜಿಲ್ಲಾ,ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸರುವ ಕು.ತನ್ವಿತಾ 150ಕ್ಕೂ ಹೆಚ್ಚಿನ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿರುತ್ತಾರೆ. 2018-19 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ವಾರ್ಷಿಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಯೋಗ ಸ್ಪರ್ಧೆಯಲ್ಲಿ ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ.

ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ ಮಾತನಾಡಿ, ಕುಂದಾಪುರ ತಾಲೂಕಿನ ಪುಟ್ಟ ಗ್ರಾಮವಾದ ಕುಂದಬಾರಂದಾಡಿ ನಿವಾಸಿ ಅಂತರಾಷ್ಟ್ರೀಯ ಯೋಗಪಟು ಕು.ತನ್ವಿತಾ ಅವರು ಬಹುಮುಖ ಪ್ರತಿಭೆ ಯೋಗ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಹೆಸರನ್ನು ಮಾಡಿರುವ ಬಾಲಪ್ರತಿಭೆಯನ್ನು ಗುರುತಿಸುವ ಕೆಲಸ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ಮಾಡಬೇಕು. ಯೋಗಾಸನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಲಿ ಎಂದು ಶುಭಹಾರೈಸಿದರು.

ಯೋಗಪಟು ತನ್ವಿತಾ ಅವರ ತಂದೆ ವಸಂತ ಅವರು ಮಾತನಾಡಿ, ಬಾಲ್ಯದಲ್ಲೇ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರಿಂದ ಅವಳ ನೆಚ್ಚಿನ ಕ್ಷೇತ್ರಕ್ಕೆ ಬೆಂಬಲವನ್ನು ನೀಡಿ ಪ್ರೋತ್ಸಾಹಿಸಲಾಗಿದೆ.೫ ತರಗತಿ ಯಿಂದಲೇ ಯೋಗಾದಲ್ಲಿ ತೊಡಗಿರುವ ತನ್ವಿತಾ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾಳೆ. ಯೋಗ ಮಾತ್ರವಲ್ಲದೆ ನೃತ್ಯ,ಯಕ್ಷಗಾನದಲ್ಲಿಯೂ ನಟನೆ ಮಾಡುವುದರ ಮೂಲಕ ತನ್ನ ಪ್ರತಿಭೆಯನ್ನು ಹೊರ ಜಗತ್ತಿಗೆ ತೊರ್ಪಡಿಸಿದ್ದಾಳೆ.ಅವಳ ಸಾಧನೆಗೆ ಸಂಘ ಸಂಸ್ಥೆಗಳು,ಸಮಾಜ ಬಾಂಧವರು ಬೆಂಬಲ ನೀಡಬೇಕೆಂದು ವಿನಂತಿಸಿಕೊಂಡರು.

ಅಂತರಾಷ್ಟ್ರಿಯ ಯೋಗಪಟು ಕು.ತನ್ವಿತಾ ಮಾತನಾಡಿ,ಈಗಾಗಲೇ ಹಲವಾರು ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು,ಜಿಲ್ಲಾ,ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರಿಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದಿನಿ.ರಾಜ್ಯ ಸರಕಾರದಿಂದ ಕಲಾಶ್ರೀ ಪ್ರಶಸ್ತಿ ಕೂಡ ದೊರೆತ್ತಿದೆ.ಯೋಗಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ,ಆಸಕ್ತರಿಗೆ ಯೋಗಾವನ್ನು ಹೇಳಿಕೊಡಬೇಕು ಎನ್ನುವ ಆಸೆ ಇದೆ ಎಂದು ಹೇಳಿದರು.ಐಎಎಸ್ ಓದಿ ಜನರ ಸೇವೆ ಮಾಡುವ ಈಚ್ಚೆಯನ್ನು ವ್ಯಕ್ತಪಡಿಸಿದರು.
ತ್ರಾಸಿ ಬೀಚ್‌ನಲ್ಲಿ ನಾನಾ ಭಂಗಿಗಳ ಯೋಗಾಸನದ ಪ್ರದರ್ಶನವನ್ನು ಮಾಡಲಾಯಿತು.

Related Posts

Leave a Reply

Your email address will not be published.