ನೆಲ್ಯಾಡಿ: ಕೊಕ್ಕಡ ಮಾಯಿಲಕೋಟೆಯಲ್ಲಿ ಕಳ್ಳತನ
ನೆಲ್ಯಾಡಿ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಾಯಿಲಕೋಟೆ ದೇವಸ್ಥಾನಕ್ಕೆ ನ.10ರಂದು ಮಧ್ಯಾಹ್ನ ಸುಮಾರು 2:30 ಗಂಟೆ ಸಮಯಕ್ಕೆ ಕಳ್ಳತನ ನಡೆದಿದೆ.
ಒಂದು ತಿಂಗಳ ಹಿಂದೆ ಇಲ್ಲಿ ಕಳ್ಳತನ ನಡೆದಿದ್ದು, ಈ ಬಗ್ಗೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದವರ ಬಗ್ಗೆ ಒಂದು ತಿಂಗಳೊಳಗೆ ಸುಳಿವು ಸಿಗುವಂತೆ ಪ್ರಾರ್ಥಿಸಲಾಗಿತ್ತು.
ನ.10ರಂದು ಮಧ್ಯಾಹ್ನದ ವೇಳೆ ಕಳ್ಳರು ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡದಾದ ಶಬ್ದವೊಂದು ಕೇಳಿಸಿದ್ದು ಪರಿಸರದ ಜನರೆಲ್ಲ ಒಟ್ಟಾಗಿ ದೇವಸ್ಥಾನದ ಬಳಿ ತೆರಳಿದಾಗ ಕಳ್ಳ ತಪ್ಪಿಸಿಕೊಳ್ಳಲು ಯತ್ತಿಸುತ್ತಿದ್ದ ಎನ್ನಲಾಗಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಕಳ್ಳನನ್ನು ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.
ಕಳ್ಳತನಕ್ಕೆ ಯತ್ನಿಸಿದ್ದವನನ್ನು ಹುಬ್ಬಳ್ಳಿಯ ಮಂಜುನಾಥ (19. ವ) ಎಂದು ಗುರುತಿಸಲಾಗಿದ್ದು ಈತನ ಜೊತೆಗೆ ಸಹಕರಿಸಲು ಇನ್ನಿತರರು ಇದ್ದಾರೆಯೇ ಎಂಬುದನ್ನು ಮುಂದಿನ ತನಿಖೆಯಲ್ಲಿ ತಿಳಿಯಬೇಕಿದೆ. ಮಾಯಿಲಕೋಟೆಯಲ್ಲಿ ಕಳ್ಳತನ ನಡೆಸುವ ಮೊದಲು ಇಲ್ಲೇ ಸಮೀಪದ ಪುತ್ಯೆ ಎಂಬಲ್ಲಿನ ವ್ಯಕ್ತಿ ಒಬ್ಬರ 35000ರೂ ಬೆಲೆ ಬಾಳುವ ಸೈಕಲನ್ನು ಕದ್ದಿದ್ದ ಎನ್ನಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.