ಬೈಂದೂರು: ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಬೈಂದೂರು ದಸರಾ-2023ಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಬೈಂದೂರು ದಸರಾ ಮಹೋತ್ಸವಕ್ಕೆ ಅಪ್ಪಣ್ಣ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು ಸಾದ್ಯವಿಲ್ಲ,ಮದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖಃ ಸಮೃದ್ದಿ ದೊರೆಯುತ್ತದೆ ಎಂದರು.
ಭವ್ಯ ಮೆರವಣಿಗೆ ಮೂಲಕ ಶಾರದಾ ಮೂರ್ತಿಯನ್ನು ಕರೆತರಲಾಯಿತು. ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಲಾಯಿತು.
ಗೌರವಾಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ ಯಡ್ತರೆ, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ನಾಗರಾಜ ಗಾಣಿಗ, ಪ್ರಭಾಕರ ಶೆಟ್ಟಿ ನೆಲ್ಯಾಡಿ, ನಾಗರಾಜ ಶೆಟ್ಟಿ ನಾಕಟ್ಟೆ, ಗಣೇಶ ಪೂಜಾರಿ,ಆನಂದ ಶೆಟ್ಟಿ,ಪ್ರಶಾಂತ ಪೂಜಾರಿ,ಗೋಪಾಲ ಗಾಣಿಗ ಬಂಕೇಶ್ವರ,ಮಹೇಶ್ ಆಚಾರ್,ನಿತಿನ್ ಬೈಂದೂರು,ರಾಘವೇಂದ್ರ ಪೂಜಾರಿ,ಉಮೇಶ ದೇವಾಡಿಗ,ರವೀಂದ್ರ ಶೆಟ್ಟಿ ಆರ್ಮಕ್ಕಿ ಮೊದಲಾದವರು ಹಾಜರಿದ್ದರು.
ಸುವರ್ಣ ಮಹೋತ್ಸವ ಶಾರದೋತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ ವಂದಿಸಿದರು.