ಕೇಂಬ್ರಿಡ್ಜ್ ಶಾಲೆಯ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; ನೂರು ಶೇಕಡಾ ಫಲಿತಾಂಶ, ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ
ಮಂಗಳೂರಿನ ಪಾಲ್ದಾನೆಯ ಕೇಂಬ್ರಿಡ್ಜ್ ಶಾಲೆಯ ಸಿಬಿಎಸ್ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಶೇ.100 ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.
ಹಾಜರಾದ ಒಟ್ಟು 109 ವಿದ್ಯಾರ್ಥಿಗಳಲ್ಲಿ 82 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿ. ಸನ್ನಿಧಿ ಕಾಮತ್ 96.2% ಫಲಿತಾಂಶ ಪಡೆದಿದ್ದು ಪ್ರಥಮ ಸ್ಥಾನ, ನೀಲಾಂಜನ ತಾಲಿತ್ತಾಯ 96 ಶೇಕಡಾ ಫಲಿತಾಂಶ ಪಡೆದು ದ್ವಿತೀಯ ಸ್ಥಾನ, ತಾಶ್ವಿ ಶೆಟ್ಟಿ, 95.6% ಫಲಿತಾಂಶ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅವ್ನಿ ಶೆಟ್ಟಿ ಮೊಹಮ್ಮದ್ ಝಹೀನ ಅವರು ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದ್ದು, ಶಿಥಿಲ್ ಸಾಲಿಯನ್ ಕನ್ನಡದಲ್ಲಿ ನೂರಕ್ಕೆ ನೂರು ಅಂಕವನ್ನು ಪಡೆದುಕೊಂಡಿದ್ದಾರೆ.
ಮಾಹಿತಿ ತಂತ್ರಜ್ಞಾನದಲ್ಲಿ ಶೋನ್ ಡಿಯೋನ್ ಸಿಕ್ವೇರಾ ಹಾಗೂ ವಿ. ಸನ್ನಿಧಿ ಕಾಮತ್ ಅವರು ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.


















