Home ಕರಾವಳಿ Archive by category ಮಂಗಳೂರು (Page 25)

Mangaluru : ಅ.27 ರಿಂದ ಅ.30 – ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ

ಬ್ರಾಂಡೆಡ್ ರೆಡಿಮೇಡ್ ವಸ್ತ್ರ ಪ್ರಿಯರಿಗೆ ಶುಭ ಸುದ್ದಿ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ 4 ದಿನಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ ನಡೆಯುತ್ತಿದೆ. ಅ.27 ರಿಂದ ಅ.30ರವರೆಗೆ ಆಯೋಜಿಸಿದ್ದು, ವಿವಿಧ ಶೈಲಿಯ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ

ಮಂಗಳೂರು: ಖಾಸಗಿ ಬಸ್ ಢಿಕ್ಕಿ: ಒಂದು ಜಾನುವಾರು ಸ್ಥಳದಲ್ಲೇ ಮೃತ್ಯು, ಉಳಿದ ಜಾನುವಾರುಗಳಿಗೆ ಗಾಯ

ಮಂಗಳೂರು: ಕುಂದಾಪುರದಿಂದ ಮೈಸೂರ್-ಮಂಡ್ಯ ತೆರಳುವ ದುರ್ಗಾಂಬಾ ಮೋಟಾರ್ಸ್ ಬಸ್ ಚಾಲಕನ ಧಾವಂತಕ್ಕೆ ಒಂದು ಹಸು ಸಾವನ್ನಪ್ಪಿ, ಇನ್ನೊಂದು ಗಂಭೀರ ಗಾಯಗೊಂಡಿರುವ ಘಟನೆ ಕೋಡಿಕಲ್ ಜಂಕ್ಷನ್ನಿನಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಯನ್ನು ತಿಳಿಗೊಳಿಸಿದ್ದಾರೆ.

ದಕ್ಷಿಣ ಕನ್ನಡದ ‘ಮರಳು ಸಮಸ್ಯೆಗೆ ಅಧಿಕಾರಿಗಳೇ ಕಾರಣ …!!

ದಕ್ಷಿಣ ಕನ್ನಡದಲ್ಲಿ ಸೃಷ್ಟಿಯಾದ ಮರಳಿನ ಅಭಾವಕ್ಕೆ ಅಧಿಕಾರಿಗಳೆ ಕಾರಣ ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ. ಈ ಸಮಸ್ಯೆಗೆ 10 ದಿನದೊಳಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‍ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿನ ಸಮಸ್ಯೆ

ಮಂಗಳೂರು: ಸಿಬಿಎಸ್ ಸಿ ದಕ್ಷಿಣ ವಲಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ ಕ್ರೀಡಾಕೂಟ : ಗೊನ್ಝಾಗ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿಗಳು 2023 ರ ಅಕ್ಟೋಬರ್ 19 ರಿಂದ 22 ರವರೆಗೆ ಕರ್ನಾಟಕದ ಕಲಬುರಗಿಯಲ್ನಡೆದ ಸಿಬಿಎಸ್ ಸಿ ದಕ್ಷಿಣ ವಲಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿಸಿದರು. 6 ನೇ ತರಗತಿ ವಿದ್ಯಾರ್ಥಿನಿ ತಸ್ಮಯಿ ಶೆಟ್ಟಿ 1000 ಮೀ ಮತ್ತು 500 ಮೀಟರ್‌ಗಳಲ್ಲಿ 2 ಚಿನ್ನದ ಪದಕಗಳನ್ನೂ, 6ನೇ ತರಗತಿ ವಿದ್ಯಾರ್ಥಿಯುವರಾಜ್ ಡಿ ಕುಂಡರ್ 300 ಮೀ ಮತ್ತು 500 ಮೀಟರ್‌ಗಳಲ್ಲಿ 2 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

ಮಂಗಳೂರು: ಆಚಾರ್ಯ ಮಠದ ವಸಂತ ಮಂಟಪದ ಶಾರದೋತ್ಸವ ಸಂಪನ್ನ

ಮಂಗಳೂರು ಶಾರದೆ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಪೂಜಿಸಲ್ಪಟ್ಟ 101ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಬೃಹತ್ ವಿಸರ್ಜನಾ ಶೋಭಾಯಾತ್ರೆ ವೈಭವದಿಂದ ನಡೆಯಿತು. ಬುಧವಾರ ಸಂಜೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದ್ದು, ರಾತ್ರಿ ಮಹಾಮಂಗಳಾರತಿ ಬಳಿಕ ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ಬಳಿಕ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆ

ಮಂಗಳೂರು|| ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್: ವಿಶೇಷ ಅತಿಥಿಯಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್

ಮಂಗಳೂರಿನ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನ ವಾರದ ವಿಶೇಷ ಮೀಟಿಂಗ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದು, ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನಲ್ಲಿರುವ ಉದ್ಯಮಿಗಳಿಗೆ ಉತ್ಸಾಹ ತುಂಬಿಸಿದರು. ಮಂಗಳೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಉದ್ಯಮಿಗಳಿಗಾಗಿಯೇ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ಆರಂಭವಾಗಿದ್ದು,

ಮಂಗಳೂರು: ದಸರಾದ ಮೆರಗು ಹೆಚ್ಚಿಸಿದ ಕ್ರೈಸ್ತ ಬಾಂಧವರ ಟ್ಯಾಬ್ಲೋ

ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವಚಿಂತನೆಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ ಕುದ್ರೋಳಿ ಶ್ರೀಕ್ಷೇತ್ರದ ದಸರಾ ವಿಶ್ವವಿಖ್ಯಾತ ಮಂಗಳೂರು ದಸರಾವೆಂದೇ ಪ್ರಸಿದ್ಧ. ಈ ದಸರಾ ಶೋಭಾಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕ್ರೈಸ್ತ ಬಾಂಧವರ ಟ್ಯಾಬ್ಲೊ ಮಂಗಳೂರು ದಸರಾ ಮೆರುಗು ಹೆಚ್ಚಿಸಿದೆ. ಜೊತೆಗೆ ಧರ್ಮಧರ್ಮಗಳ ನಡುವಿನ ಬಾಂಧವ್ಯ ವೃದ್ಧಿಸಿದೆ. ಕ್ರೈಸ್ತ ಬಾಂಧವರ ಸ್ತಬ್ಧಚಿತ್ರ ಇದೇ ಮೊದಲ ಬಾರಿಗೆ ಮಂಗಳೂರು ದಸರಾ

ಮಂಗಳೂರು: ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಗಮನಸೆಳೆದ ಮಂತ್ರದೇವತೆ ಟ್ಯಾಬ್ಲೋ

ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ವೈಭವದಿಂದ ನಡೆದಿದ್ದು ಈ ಪೈಕಿ ಅಪ್ಪೆ ಮಂತ್ರದೇವತೆ ಟ್ಯಾಬ್ಲೋ ಜನರ ಗಮನ ಸೆಳೆಯಿತು. ನಗರದ ಪದವು ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 9ನೇ ವರ್ಷದ ಕಾಣಿಕೆಯಾಗಿ ಮಂತ್ರದೇವತೆ ದೈವದ ಸ್ತಬ್ಧಚಿತ್ರ ಮಾಡಲಾಗಿತ್ತು. ಅಪ್ಪೆ ಮಂತ್ರದೇವತೆ ಹೆಸರಿನ ಟ್ಯಾಬ್ಲೋದಲ್ಲಿ ದೈವದ ಅಪಚಾರ ಆಗದಂತೆ, ದೈವಾರಾಧನೆ ಮಹತ್ವ ಸಾರುವ ಯತ್ನ ಮಾಡಲಾಯಿತು. ದೈವರಾಧನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮಂತ್ರದೇವತೆಯ

ಕಡಬ: ಕಾಡಾನೆ ಮತ್ತು ಇತರ ಪ್ರಾಣಿಗಳ ಉಪಟಳ: ಅ.26ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಕಡಬ: ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಆನೆ ಹಾಗೂ ಇತರ ಪ್ರಾಣಿಗಳ ಉಪಟಳ ಮಿತಿ ಮೀರುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಗ್ರಹಿಸಿ ಅ.26ರಂದು ಕಡಬದಲ್ಲಿ ಬೃಹತ್ ಮೆರವಣಿಗೆ ನಡೆಸಿ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಐತ್ತೂರು ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ ತಿಳಿಸಿದ್ದಾರೆ. ಕಡಬದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆನೆ ಉಪಟಳದಿಂದ ಬೇಸತ್ತ ರೈತರು ಒಗ್ಗೂಡಿ

ಬೈಕ್ ಧಾವಂತಕ್ಕೆ ಮಹಿಳೆ ಬಲಿ

ಉಳ್ಳಾಲ: ಮಂಗಳೂರು ದಸರಾ ತೆರಳುತ್ತಿದ್ದ ಬೈಕ್ ಚಾಲಕನ ಧಾವಂತಕ್ಕೆ ರಸ್ತೆ ದಾಟುತ್ತಿದ್ದ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಬಬ್ಬುಕಟ್ಟೆ ಸೋಝಾ ಇಲೆಕ್ಟ್ರಿಕಲ್ಸ್ ಎದುರುಗಡೆ ಸಂಭವಿಸಿದೆ. ಬಾಗಲಕೋಟೆ ಬಾದಾಮಿ ಲಖಮಾಪುರ ನಿವಾಸಿ ಶಿವಪ್ಪ ದೊಡ್ಡಮನಿ ಎಂಬವರ ಪತ್ನಿ ಎಲ್ಲವ್ವ ಶಿವಪ್ಪ ದೊಡ್ಡಮನಿ (50) ಮೃತ ಮಹಿಳೆ. ಶಿವಪ್ಪ ಅವರು ಕೂಲಿಕಾರ್ಮಿಕರಾಗಿದ್ದು, ಸಂಜೆ ನಂತರ ಬಬ್ಬುಕಟ್ಟೆ ಬಳಿಯ ಸೋಝಾ ಇಲೆಕ್ಟ್ರಿಕಲ್ಸ್ ಬಳಿಯ ಮನೆಯಲ್ಲಿ ವಾಚ್ ಮೆನ್ ವೃತ್ತಿ