ಕಾಂಗ್ರೆಸ್ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ್ದಾರೆ. ಅಸ್ಕರ್ ಫೆರ್ನಾಂಡಿಸ್ ಅವರು ಯೋಗ ಮಾಡುವ ವೇಳೆ ಜಾರಿ ಬಿದ್ದು ಗಾಯಗೊಂಡು ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕಾಂಗ್ರೆಸ್‌ನ ಹಲವು ಮುಖಂಡರು ಅಸ್ಕರ್ ಫೆರ್ನಾಂಡಿಸ್ ಅವರ
ಸುರತ್ಕಲ್‍ನ ಕುಳಾಯಿ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಎಸಗಿ ಕಳ್ಳ ಓಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಳಾಯಿ ನಿವಾಸಿ ಬಾಲಕೃಷ್ಣ ಪುರೋಹಿತ್ ಅವರ ಮನೆಗೆ ಕಳ್ಳನೋರ್ವ ನುಗ್ಗಿ ಅವರ ಪತ್ನಿ ಸುಮತಿ ಬಾಲಕೃಷ್ಣ ಆಚಾರ್ಯ ಅವರ ಕುತ್ತಿಗೆಯಿಂದ ನಾಲ್ಕು ಪವನ್ ಚಿನ್ನದ ಕರಿಮಣಿಯನ್ನು ಸೆಳೆದು ಪರಾರಿಯಾದ ಘಟನೆ ನಡೆದಿದೆ.ಇಬ್ಬರು ಯುವಕರು ಮಧ್ಯಾಹ್ನ ಮನೆಗೆ ಆಗಮಿಸಿ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಅರ್ಕುಳಬೈಲ್‌ನಿಂದ ಹರಿದು ಹೋಗುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುವುದನ್ನ ಮನಗಂಡ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ನೀರು ಹರಿದು ಹೋಗುವ ಮೋರಿಗಳು ಮಣ್ಣಿನಿಂದ ತುಂಬಿದ ಕಾರಣ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೃಷಿಗೆ ತೊಂದರೆ ಆಗಿರುವುದರಿಂದ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟರು. ಇನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ
ದೇಶದಾದ್ಯಂತ ಇಂದು ಮುಸ್ಲಿಮರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಉಳ್ಲಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹಸ್ತಲಾಘವ, ಆಲಿಂಗನ ಇಲ್ಲದೇ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಂದು ಕರಾವಳಿಯಾದ್ಯಂತ ಅಚರಿಸಲಾಗುತ್ತಿದೆ. ದಕ್ಷಿಣ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ 6:30ಕ್ಕೆ ಕೆಲವು ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಆರಂಭಗೊಂಡಿದೆ. ಕಳೆದ ಬಾರಿಯೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಕೆಲವೊಂದು ನಿರ್ಬಂಧ ಹೇರಿದ್ದರಿಂದ ಹಬ್ಬದ
ಜನಸಂಖ್ಯೆಯನ್ನು ದೇಶದ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕಾದದ್ದು ಸರ್ಕಾರದ ಕೆಲಸ. ಆದರೆ ಸರ್ಕಾರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆಯನ್ನು ಟಾರ್ಗೆಟ್ ಮಾಡಿರೋದು ದುರಂತ ಅಂತಾ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಒಂದು ಸರ್ಕಾರವು ಆಡಳಿತ ಮಾಡೋ ಮೊದಲು ದೇಶದ ಜನಸಂಖ್ಯೆಯನ್ನು ಹೇಗೆ ಮಾನವ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕೆಂಬುದನ್ನು ಅರಿಯಬೇಕು ಅಂದರು. ಮಂಗಳೂರಲ್ಲಿ ಅವತ್ತು ರಾಜ್ಯಮಟ್ಟದ
ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯ 8ನೇ ವಾರ್ಷಿಕೋತ್ಸವದ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯ 8ನೇ ವಾರ್ಷಿಕೋತ್ಸವದ ವಿಶೇಷ ಸಂಚಿಕೆಯನ್ನು ಕರ್ನಾಟಕ ಯಕ್ಷಗಾನ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತ್ಯ ಚಿಂತಕ ಸಾಧಕರಾದ ಕದ್ರಿ ನವನೀತ ಶೆಟ್ಟಿ ಬಿಡುಗಡೆಗೊಳಿಸಿದರು. ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ದಂತವೈದ್ಯ
ಜಿಲ್ಲೆಯಲ್ಲಿ ಕಡಲ್ಕೋರೆತ ತಡೆಗಟ್ಟಲು ಜಿಲ್ಲಾಡಳಿತ ಯಾವುದೇ ರೀತಿಯಲ್ಲೂ ಕಾಳಜಿ ವಹಿಸಿದಂತೆ ತೋರುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.ಈ ಕುರಿತು ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಉಳ್ಳಾಲ, ಸೋಮೇಶ್ವರ್ ಬೀಚ್ ನಲ್ಲಿ ರಸ್ತೆಗಳು ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲಾವೂ ಸಮುದ್ರ ಪಾಲಾಗುತ್ತಿದೆ. ಶಾಶ್ವತ ಪರಿಹಾರದ ಬಗ್ಗೆ
ಬಿಜೆಪಿ ರಾಜ್ಯಾಧ್ಯಕ್ಷರ ಆಡಿಯೋ ನಕಲಿ ಅಥವಾ ಅಸಲಿಯೇ ಎಂದು ಮುಖ್ಯ ಮಂತ್ರಿ ಸ್ಪಷ್ಟ ಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ರು. ಹಾಲಿ ಸಿ.ಎಂ ಯಡಿಯೂರಪ್ಪ ಇನ್ನೂ ಮುಂದುವರಿಯುತ್ತಾರೋ ಇಲ್ಲವೋ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ತಿಳಿಸಲಿ ಯು.ಟಿ.ಖಾದರ್ ಅವರು ಹೇಳಿದರು. ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ, ಎಲ್ಲಾರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕೆಲಸ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪ ಮಾಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ದಿನ ಸುಮಾರು ಒಂದೂವರೆ ಲಕ್ಷ ಡೋಸ್ ಲಸಿಕೆ ಅಗತ್ಯ ಇದೆ.ಆದರೆ ಸರಬರಾಜಾಗುತ್ತಿರುವುದು ಒಂದು ವಾರಕ್ಕೆ 50 ಸಾವಿರ.ಇದರಿಂದಾಗಿ ಜನಸಾಮಾನ್ಯರು ಲಸಿಕೆಗಾಗಿ ಪರದಾಡುವಂತಾಗಿದೆ. ಸರಕಾರ ಜನಸಾಮಾನ್ಯರ ಈ ರೀತಿಯ ಅಗತ್ಯಗಳ ಬಗ್ಗೆ ,ಸಮಸ್ಯೆ


















