Home ಕರಾವಳಿ Archive by category ಮೂಡಬಿದರೆ (Page 5)

ವಾಲ್ಪಾಡಿ : ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿ – ಅಗ್ನಿಶಾಮಕ ಸಿಬ್ಬಂದಿಗಳಿಂದ ಹುಡುಕಾಟ

ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ

ಮೂಡುಬಿದಿರೆ : ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಅನಾರೋಗ್ಯ ಪೀಡಿತರಿಗೆ ನೆರವು

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 63ನೇ ಸೇವಾ ಯೋಜನೆಯ ಅಂಗವಾಗಿ ಮೇ ತಿಂಗಳ 1ನೇ ಯೋಜನೆಯನ್ನು ದರೆಗುಡ್ಡೆ ಗ್ರಾಮದ ಆನೆಗುಡ್ಡೆ ಪರಿಸರದ ಅನಾರೋಗ್ಯ ಪೀಡಿತರಾಗಿರುವ ವಿಜಯ್ ಪೂಜಾರಿ ಅವರ ಚಿಕಿತ್ಸೆಗೆ ಆಥಿ೯ಕ ನೆರವನ್ನು ನೀಡಲಾಯಿತು.ಆನೆಗುಡ್ಡೆ ಪರಿಸರದ ವಿಜಯ್ ಪೂಜಾರಿ ಅವರು ಮುಂಬೈಯಲ್ಲಿ ಸಣ್ಣ ಉದ್ಯೋಗದಲ್ಲಿರುವಾಗ ಆಕ್ಸಿಡೆಂಟ್ ಆಗಿ ಕಾಲಿನ ಎಲುಬು ಮುರಿತವಾಗಿರುತ್ತದೆ. ಅವರಿಗೆ ಒಂದು ವರ್ಷ ಕೆಲಸಕ್ಕೆ

ಮೂಡುಬಿದಿರೆ : ಮಳೆ ಗಾಳಿಗೆ ಪಡುಮಾನಾ೯ಡಿನಲ್ಲಿ ಮನೆಯ ಛಾವಣಿ ಕುಸಿತ

ಮೂಡುಬಿದಿರೆ : ತಾಲೂಕಿನಲ್ಲಿ ಸುರಿದ ಮಳೆ ಗಾಳಿಗೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಾಲಯ ಎಂಬಲ್ಲಿ ಶೇಖರ ಯಾನೆ ಬೂದ ಎಂಬುವವರ ಮನೆಯ ಛಾವಣಿ ಬುಧವಾರ ಮುಂಜಾನೆ ಸಂಪೂರ್ಣವಾಗಿ ಕುಸಿದು ಬಿದ್ದು ಸುಮಾರು ರೂ ಮೂರು ಲಕ್ಷದಷ್ಟು ನಷ್ಟ ಉಂಟಾಗಿದೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಮಲಗಿದ್ದು ಹೆಂಚು ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ,

ಮಂಗಳೂರು ವಿ. ವಿ. ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾಗಿ ಯೋಗೀಶ್ ಕೈರೋಡಿ ಆರಂಬೋಡಿ ಆಯ್ಕೆ

ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕೈರೋಡಿ ನಿವಾಸಿ ಲೇಖಕ ಡಾ. ಯೋಗೀಶ್ ಕೈರೋಡಿ ಇವರನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ‌ ಪೀಠದ ಸಲಹಾ ಸಮಿತಿಗೆ ಸರಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಎಸ್ ಎಸ್ ಎಲ್ಸಿ ಪರೀಕ್ಷೆ : ಕಲ್ಲಬೆಟ್ಟು ಮೊರಾಜಿ೯ ದೇಸಾಯಿಗೆ ಶೇ 100 ಫಲಿತಾಂಶ

ಮೂಡುಬಿದಿರೆ : ದ. ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 43 ವಿದ್ಯಾರ್ಥಿಗಳು ಹಾಜರಾಗಿದ್ದು, ಹಾಜರಾದ ಎಲ್ಲಾ ವಿಧ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತವಾಗಿ ಶಾಲೆಗೆ ಶೇ. 100 ಫಲಿತಾಂಶವನ್ನು ನೀಡಿರುತ್ತಾರೆ. 43 ವಿದ್ಯಾರ್ಥಿಗಳಲ್ಲಿ 25ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 01

ಪುತ್ತೂರು:ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ

ಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ

ಮೂಡುಬಿದಿರೆ : ಕಸಾಯಿಖಾನೆಗೆ ಒಯ್ಯಲು ಗುಡ್ಡದಲ್ಲಿ ಕಟ್ಟಿ ಹಾಕಿದ್ದ ಗೋವುಗಳ ರಕ್ಷಣೆ

ಮೂಡುಬಿದಿರೆ : ಎಲ್ಲಿಂದಲೋ ಎರಡು ಗೋವುಗಳನ್ನು ಕದ್ದು ತಂದು ಕಸಾಯಿ ಖಾನೆಗೆ ಒಯ್ಯಲು ತೋಡಾರು ಗ್ರಾಮದ ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವ ದನಗಳನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ರಕ್ಷಿಸಿ ಗೋಶಾಲೆಗೆ ಸಾಗಿಸಿದ್ದಾರೆ. ಕಸಾಯಿಖಾನೆಗೆ ಒಯ್ಯಲು ಗೋವುಗಳನ್ನು ಗುಡ್ಡದಲ್ಲಿ ಕಟ್ಟಿ ಹಾಕಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾಯ೯ಕತ೯ರು ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ ಸುಮಾರು 6 ಗಂಟೆಗೆ ಸ್ಥಳಕ್ಕೆ ತೆರಳಿ ಎರಡು

ಆಳ್ವಾಸ್ ಕಾಲೇಜಿಗೆ ‘ಸ್ವಾಯತ್ತ’ ಗರಿ: ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿ ಪ್ರಸ್ತುತ ಉದ್ಯಮ ಹಾಗೂ ಕೌಶಲ ಆಧರಿತ ಕೋರ್ಸುಗಳು

ಮೂಡುಬಿದಿರೆ : ಕಾಲೇಜುಗಳ ಸ್ವಾಯತ್ತ ಸ್ಥಾನಮಾನವು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜು ವಿಶಿಷ್ಟವಾಗಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪಠ್ಯಕ್ರಮ, ಉದ್ಯಮ ಹಾಗೂ ಕೌಶಲ ಆಧಾರಿತವಾಗಿ ವಿದ್ಯಾರ್ಥಿ ಹಾಗೂ ಸಮುದಾಯಿಕ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಗೊಳಿಸುತ್ತಿದೆ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಅಖಿಲ ಭಾರತ ಅಂತರ ವಿವಿ ಪುರುಷರ ಖೋ ಖೋ ಪಂದ್ಯಾಟ- ಆಳ್ವಾಸ್ ವಿದ್ಯಾರ್ಥಿಗಳನ್ನು ಒಳಗೊಂಡ ಮಂಗಳೂರು ವಿವಿ ತಂಡ ಚಾಂಪಿಯನ್ಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಚಾಂಪಿಯನ್ಶಿಪ್‌ನ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮುಂಬೈ ವಿಶ್ವವಿದ್ಯಾನಿಲಯದ ವಿರುದ್ಧ 11-10 ಅಂಕಗಳು ಹಾಗೂ 5 ನಿಮಿಷಗಳ ಅಂತರದಿAದ ಗೆದ್ದು ಎರಡನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಮಂಗಳೂರು ವಿವಿ ಪ್ರತಿನಿಧಿಸಿದ ತಂಡದ ಒಟ್ಟು 15 ಆಟಗಾರರಲ್ಲಿ 13 ಆಟಗಾರರು

ಅಖಿಲ ಭಾರತ ಅಂತರ್ ವಿವಿ ಮಹಿಳಾ ಬಾಲ್‌ಬ್ಯಾಡ್ಮಿಂಟನ್ : ಮಂಗಳೂರು ವಿವಿ ರನ್ನರ್ ಅಪ್

ಮೂಡುಬಿದಿರೆ: ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ತಂಡದ 10 ಜನ ಆಟಗಾರ್ತಿಯರ ಪೈಕಿ ನಾಯಕಿ ಸಹನಾ ಎಚ್. ಎಂ ಸೇರಿದಂತೆ 9 ಕ್ರೀಡಾಪಟುಗಳು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.ಕ್ವಾಟರ್‌ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿಯು ತಮಿಳುನಾಡಿನ ಯೂನಿವರ್ಸಿಟಿ ಆಫ್ ಮದ್ರಾಸ್