Home Archive by category ಕರಾವಳಿ (Page 119)

“ವಿಶ್ವ ಪೊಲಿಯೋ ದಿನ -ಅಕ್ಟೋಬರ್-24” || V4NEWS

ಪೊಲಿಯೋ ಎನ್ನುವ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಮತ್ತು ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗುವ ರೋಗವಾಗಿದ್ದು, ಲಸಿಕೆಯಿಂದ ತಡೆಗಟ್ಟಲು ಸಾಧ್ಯವಿದೆ. ಪ್ರತಿ ವರ್ಷ ಅಕ್ಟೋಬರ್ -24 ರಂದು “ವಿಶ್ವ ಪೊಲಿಯೋ ದಿನ” ಎಂದು ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪೊಲಿಯೋ ರೋಗಕ್ಕೆ ಮೊತ್ತ ಮೊದಲ ಬಾರಿ ಲಸಿಕೆ ಕಂಡು ಹಿಡಿದ ಸಂಶೋಧಕ ಶ್ರೀ ಜೋನಾಡ್

ಬಾಲವಿಕಾಸದಲ್ಲಿ ಶಾರದಾ ಪೂಜೆ

ವಿಟ್ಲ : ಅಕ್ಟೋಬರ್ 21 : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಶಾರದಾ ಪೂಜೆ ನೆರವೇರಿತು. ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ವೇದಮೂರ್ತಿ ಅನಂತ್ ಭಟ್ ಕಶೆಕೋಡಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದ ಪೂಜಾ ಕೈಂಕರ್ಯದಲ್ಲಿ ಶಾರದಾ ಪೂಜೆ ಹಾಗೂ ಶಾಲಾ ವಾಹನಗಳಿಗೆ ಪೂಜೆ ನಡೆಯಿತು. ಇದರ ಜೊತೆಗೆ ಶಾಲಾ ಗಣಕಯಂತ್ರಗಳು, ಶಾಲಾ

ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ಆಳ್ವಾಸ್ 6 ಕ್ರೀಡಾಪಟುಗಳು ಆಯ್ಕೆ

ಮೂಡಬಿದಿರೆ: ಅ.26ರಿಂದ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ರಾಜ್ಯ ತಂಡದ 12 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.ಆಳ್ವಾಸ್ ಮಲ್ಲಕಂಬ ತಂಡದ ಬಾಲಕರಾದ ಹನುಮಂತ್ ಎಂ., ಆಕಾಶ್ ಪಿ., ವಿನಾಯಕ್ ಕೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ಎಸ್, ದೊಡ್ಡಮ್ಮ ಪಿ, ಕಾವೇರಿ ಎಸ್ ಸೇರಿ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಮೂಡುಬಿದಿರೆ: ಮುಸ್ರಾಲೊ ಪಟ್ಟೊ ತುಳು ಸಾಹಿತ್ಯದ ಶ್ರೇಷ್ಠ ಸಾಂಸ್ಕೃತಿಕ ಕಥನ : ಡಾ ಕೆ ಚಿನ್ನಪ್ಪ ಗೌಡ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಜಶ್ರೀ ಟಿ ರೈ ಪೆರ್ಲ ಅವರು ಬರೆದ ಮುಸ್ರಾಲೊ ಪಟ್ಟೊ ಕಾದಂಬರಿ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮವು ಶುಕ್ರವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಕೆ ಚಿನ್ನಪ್ಪ ಗೌಡ ಅವರು ಮುಸ್ರಾಲೊ ಪಟ್ಟೊ ಕಾದಂಬರಿಯ ಬಗ್ಗೆ ಅವಲೋಕನಗೈದು ಸಮಾಜದ ಸಂಬಂಧಗಳು ಛಿದ್ರಗೊಂಡು ನೈತಿಕ

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಿಸಿದ ಪಾಟ್ನಾ ದ ಖ್ಯಾತ ವೈದ್ಯ ಡಾ.ರಾಹುಲ್

ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತರು ಹಾಗೂ ದೇವಸ್ಥಾನದ ಶಿಷ್ಟಾಚಾರ ವಿಭಾಗದ ನೌಕರ ಹರೀಶ್ ರವರ ಮಿತ್ರರಾದ ಪಾಟ್ನಾ ದ ಖ್ಯಾತ ವೈದ್ಯ ಡಾ.ರಾಹುಲ್ ರವರು ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಅಂದಾಜು ಸುಮಾರು 30 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಿಸಿದರು. ಸದ್ರಿ ಭಕ್ತರು ಈ ಹಿಂದೆ ಅನ್ನ ದಿನಕ್ಕಾಗಿ 20 ಲಕ್ಷ ರೂಪಾಯಿ ನೀಡಿದ್ದರು. ಸಂತಾನ ಭಾಗ್ಯ ಲಭಿಸದ ಕಾರಣ ಈ ಹಿಂದೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿ ಹರಕೆ ಹೊತ್ತು ಸಂತಾನ ಪ್ರಾಪ್ತಿಯಾದ

ಹಾರ್ನ್‍ಬಿಲ್ ಹಕ್ಕಿಗಳಿಗೆ ಆಶ್ರಯ ತಾಣವಾದ MRPL

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ಮಲಬಾರ್ ಹಾರ್ನ್‍ಬಿಲ್ ಪಕ್ಷಿಗಳು ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕಂಡುಬಂದಿದೆ. ಮಂಗಳೂರಿನ ಎಂಆರ್‍ಪಿಎಲ್ ಪ್ರದೇಶವು ಇದೀಗ ಹಾರ್ನ್‍ಬಿಲ್ ಪಕ್ಷಿಗಳಿಗೆ ಆಶ್ರಯತಾಣವಾಗಿದೆ.ಮಲಬಾರ್ ಫೈಡ್ ಹಾರ್ನ್‍ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ದೊಡ್ಡ ಕೊಕ್ಕಿನ ಉದ್ದವಾದ ಗರಿಯ ಹಾರ್ನ್‍ಬಿಲ್ ಹಕ್ಕಿಯನ್ನು ನೋಡುವುದೇ ಚೆಂದ. ಈ ಪಕ್ಷಿಗಳು

ಬಂಟ್ವಾಳ: ಗೂಡ್ಸ್ ಟೆಂಪೋ ಡಿಕ್ಕಿ, ಒಂದೇ ದಿನದಲ್ಲಿ ಕಿತ್ತು ಹೋಯಿತು ಸೇತುವೆ ತಡೆಬೇಲಿ!

ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸುವ ಉದ್ದೇಶದಿಂದ ಮೇಲ್ಭಾಗಕ್ಕೆ ಹಾಕಿರುವ ತಡೆಬೇಲಿ ಒಂದೇ ದಿನದಲ್ಲಿ ಕಿತ್ತು ಬಿದ್ದಿದೆ. ಶುಕ್ರವಾರ ಸೇತುವೆಯ ಎರಡೂ ಬದಿಗಳಲ್ಲೂ ಕಬ್ಬಿಣದ ತಡೆಬೇಲಿ ಅಳವಾಡಿಸಲಾಗಿತ್ತು. ಸರಕು ಸಾಗಿಸುವ ಗೂಡ್ಸ್ ಟೆಂಪೋವೊಂದು ತಡೆಬೇಲಿಯ ಅರಿವಿಲ್ಲದೆ ಸಂಚರಿಸಿದ ಕಾರಣ ಒಂದು ಪಾರ್ಶ್ವದ ಕಬ್ಬಿಣದ ಬೀಮ್ ಕೆಳಕ್ಕುರುಳಿದೆ. ಕಳೆದ ಕೆಲ ದಿನಗಳ

ಮಂಗಳೂರು: ಶ್ರೀ ಭ್ರಾಮರಿ ಹುಲಿ ತಂಡದ ಊದು ಇಡುವ ಕಾರ್ಯಕ್ರಮ

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ದಸರಾ ಮಹೋತ್ಸವ ಶಾರದಾ ಮಾತೆಯ ಶೋಭಾ ಯಾತ್ರೆಯ ಸಲುವಾಗಿ ಕೂಳೂರಿನ ಟೀಮ್ ಡ್ಯಾಜ್ಲರ್ ಟೈಗರ್ಸ್ 1ನೇ ವರ್ಷದ ಸಂಭ್ರಮದಲ್ಲಿ ಶ್ರೀ ಭ್ರಾಮರಿ ಹುಲಿ ಇದರ ಊದು ಇಡುವ ಕಾರ್ಯಕ್ರಮವು ಅಕ್ಟೋಬರ್ 23ರಂದು ಸಂಜೆ 4.30ಕ್ಕೆ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿದೆ. ಕರಾವಳಿಯೇ ಸಂಭ್ರಮಪಡುವ ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ ಮಂಗಳೂರು ದಸರಾವು ವಿಜೃಂಭಣೆಯಿಂದ ನಡೆಯುತ್ತಿದೆ.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ “ಕುಡ್ಲದ ಪಿಲಿ ಪರ್ಬ-2023” ಉದ್ಘಾಟನೆ

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ನಡೆಯುತ್ತಿರುವ ದ್ವಿತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2023” ಸ್ಪರ್ಧಾಕೂಟವನ್ನು ಇಂದು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳನ್ವಯ ಗಣಹೋಮದ ನಂತರ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕುಡ್ಲ ಪಿಲಿಪರ್ಬದ ರೂವಾರಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಅವರ ತಂಡದ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು. ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರು ಮಾತನಾಡಿ,

ಮಂಗಳೂರು: ಅ.22ರಂದು ಪಣಂಬೂರು ಎನ್‍ಎಂಪಿಎ ಆಫೀಸರ್ಸ್ ಕ್ಲಬ್‍ನಲ್ಲಿ ರಕ್ತದಾನ ಶಿಬಿರ

ಪಣಂಬೂರಿನ ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಅ.22 ರಂದು ಪಣಂಬೂರು ಎನ್‍ಎಂಪಿಎ ಆಫೀಸರ್ಸ್ ಕ್ಲಬ್‍ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಈ ಶಿಬಿರ ಪ್ರಾರಂಭಗೊಳ್ಳಲಿದ್ದು, ರಕ್ತದಾನ ಮಾಡುವ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9901722647,