ಹಾರ್ನ್‍ಬಿಲ್ ಹಕ್ಕಿಗಳಿಗೆ ಆಶ್ರಯ ತಾಣವಾದ MRPL

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ಮಲಬಾರ್ ಹಾರ್ನ್‍ಬಿಲ್ ಪಕ್ಷಿಗಳು ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕಂಡುಬಂದಿದೆ. ಮಂಗಳೂರಿನ ಎಂಆರ್‍ಪಿಎಲ್ ಪ್ರದೇಶವು ಇದೀಗ ಹಾರ್ನ್‍ಬಿಲ್ ಪಕ್ಷಿಗಳಿಗೆ ಆಶ್ರಯತಾಣವಾಗಿದೆ.ಮಲಬಾರ್ ಫೈಡ್ ಹಾರ್ನ್‍ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ದೊಡ್ಡ ಕೊಕ್ಕಿನ ಉದ್ದವಾದ ಗರಿಯ ಹಾರ್ನ್‍ಬಿಲ್ ಹಕ್ಕಿಯನ್ನು ನೋಡುವುದೇ ಚೆಂದ. ಈ ಪಕ್ಷಿಗಳು ಹಣ್ಣುಗಳನ್ನು ತಿಂದು ಅದನ್ನು ವಿಸರ್ಜಿಸುವ ಮೂಲಕ ತಾನು ವಾಸಿಸುವ 10ಕಿ.ಮೀ. ವ್ಯಾಪ್ತಿಯಲ್ಲಿ ಪ್ರತೀ ವರ್ಷ ನೂರಾರು ಗಿಡಗಳು ಬೆಳೆಯಲು ಕಾರಣವಾಗುತ್ತದೆ.

ಇದರಿಂದ ಅದನ್ನು ಕಾಡಿನ ರೈತ ಎಂದು ಕರೆಯುತ್ತಾರೆ. ವಿಶ್ವದಲ್ಲಿ 54 ಪ್ರೆಭೇದಗಳ ಪೈಕಿ ರಾಜ್ಯದಲ್ಲಿ 9 ಪ್ರಭೇಧಗಳಿವೆ. ದಾಂಡೇಲಿ ನಗರ ವ್ಯಾಪ್ತಿಯಲ್ಲೇ ಗ್ರೇ ಹಾರ್ನ್‍ಬಿಲ್, ಇಂಡಿಯನ್ ಗ್ರೇ ಹಾರ್ನ್‍ಬಿಲ್, ಮಲಬಾರ್ ಫೈಡ್ ಹಾರ್ನ್‍ಬಿಲ್ ಹಾಗೂ ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ಪ್ರಭೇಧಗಳು ಕಂಡುಬರುತ್ತದೆ.

ಅಂತೆಯೇ ಮಂಗಳೂರಿನ ಎಂಆರ್‍ಪಿಎಲ್ ಪರಿಸರದಲ್ಲಿ ಫೈಡ್ ಪ್ರಭೇದದ ಹಾರ್ನ್‍ಬಿಲ್‍ಗಳು ಕಂಡು ಬಂದಿದೆ. ಸುಮಾರು 50ಕ್ಕೂ ಹೆಚ್ಚು ಹಕ್ಕಿಗಳಿಗೆ ಎಂಆರ್‍ಪಿಎಲ್ ಅಶ್ರಯ ತಾಣವಾಗಿದೆ. ಎಂಆರ್‍ಪಿಎಲ್‍ನ ರಿಫೈನರಿಯ ಆವರಣದಲ್ಲಿರುವ ಮರಗಳಲ್ಲಿ ಹಾರ್ನ್‍ಬಿಲ್ ಪಕ್ಷಿಗಳು ಕಂಡುಬರುತ್ತದೆ. ಈ ಹಕ್ಕಿಗಳು ಗೂಡುಗಳನ್ನು ನಿರ್ಮಿಸಿ ಅಲ್ಲೇ ವಾಸ ಮಾಡುತ್ತಾ, ಕಾಡಿನ ಸಮೃದ್ಧಿ ಮತ್ತು ಸಮತೋಲನವನ್ನು ಹೆಚ್ಚಿಸುತ್ತದೆ.

ಎಂಆರ್‍ಪಿಎಲ್ ಅಭಿವೃದ್ಧಿಪಡಿಸಿದ ಸುಮಾರು 500 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಗಳ ಸಸ್ಯಗಳಿದ್ದು, ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಈ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಪಕ್ಷಿಗಳು ನಿಯಮಿತವಾಗಿ ಕಂಡುಬುತ್ತದೆ.ರೋಸಿ ಸ್ಟಾರ್ಲಿಂಗ್‍ಗಳು, ಯುರೋಪಿಯನ್ ರೋಲರ್, ಸೈಬೀರಿಯನ್, ಸ್ಟೋನ್ ಚಾಟ್, ಫ್ಲೈ ಕ್ಯಾಚರ್‍ಗಳು, ಪ್ರಬೇಧಗಳ ಪಕ್ಷಿಗಳು ನಿಯಮಿತವಾಗಿ ಕಂಡುಬರುತ್ತದೆ.

Related Posts

Leave a Reply

Your email address will not be published.