Home Archive by category ಕರಾವಳಿ (Page 120)

ಮಂಗಳೂರು: ಅಕ್ಷಯ್ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ, ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ

ತುಡರ್ ಪ್ರಕಾಶನದಿಂದ ಪ್ರಕಟಿಸಲಾದ ಅಕ್ಷಯ್ ಆರ್. ಶೆಟ್ಟಿ ಅವರ ‘ಪೆರ್ಗ’ ತುಳು ನಾಟಕ ಹಾಗೂ ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು. ಪೆರ್ಗ ತುಳು ನಾಟಕ ಕೃತಿಯನ್ನು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಅನಾವರಣಗೊಳಿಸಿದರು.

ಮಂಗಳೂರು: ಮಂಗಳೂರಿನಲ್ಲಿ ಅ.17ರಿಂದ 21ರ ತನಕ ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಮತ್ತು ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿಯು ಅಕ್ಟೋಬರ್ 17ರಿಂದ 21ರ ತನಕ ಮಂಗಳೂರಿನ ಟೌನ್ ಹಾಲ್‍ನಲ್ಲಿ 9 ರೌಂಡ್‍ಗಳ ಸ್ಪರ್ಧೆ ನಡೆಯಲಿದೆ ಎಂದು ಚೆಸ್ ಅಸೋಸಿಯೇಶನ್‍ನ ಅಧ್ಯಕ್ಷರಾದ ರಮೇಶ್ ಕೋಟೆ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈ ಪಂದ್ಯಾಟಕ್ಕೆ ಬೇರೆ ಬೇರೆ ರಾಜ್ಯಗಳ ಆಟಗಾರರು, ಅಂತರಾಷ್ಟ್ರೀಯ ಮಟ್ಟದ ಆಟಗಾರರು ಸಹಿತ ಸುಮಾರು 400

ಕಾರ್ಕಳ: ಭರದಿಂದ ಸಾಗುತ್ತಿರುವ ಪರಶುರಾಮನ ಮೂರ್ತಿಯ ಕೆಲಸ

ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕಿನಲ್ಲಿ ಪರಶುರಾಮನ ಅಸಲಿ ಮೂರ್ತಿಯ ಕೆಲಸ ಭರದಿಂದ ನಡೆಯುತ್ತಿದೆ. ಆದರೆ ಪ್ರತಿಮೆಯ ನಕಲಿತನ ಬಹಿರಂಗಪಡಿಸಿದ ನಂತರ ಇದೀಗ ಶಾಸಕರು ಅಸಲಿ ಮೂರ್ತಿಯ ಕೆಲಸ ಪ್ರಾರಂಭಿಸಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಾಂಗ್ರೆಸ್ ವಕ್ತಾರ ಶುಭೋದ್ ರಾವ್ ಹೇಳಿದರು. ಅವರು ಕಾರ್ಕಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ನಕಲಿ ಪರಶುರಾಮ ಮೂರ್ತಿಗೆ ಟರ್ಪಾಲನ್ನು ಹೊದಿಸಿ, ಯಾರಿಗೂ ಕಾಣದಂತೆ

ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

ಮಂಗಳೂರು: ಎಜೆ ಆಸ್ಪತ್ರೆ ಮುಂಭಾಗ ಆಸ್ಪತ್ರೆ ಕಡೆಯಿಂದ ಹೊರ ಬರುತ್ತಿದ್ದಂತೆ ಆಕ್ಟೀವ ಸ್ಕೂಟರ್ ಆಟೋ ರಿಕ್ಷಾಕ್ಕೆ ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಂತೆ ಮುಂಭಾಗದದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಮೈಮೇಲೆ ಹರಿದು ಕಾವುರು ನಿವಾಸಿ ಕೌಶಿಕ್ (21) ಮೃತಪಟ್ಟಿರುತ್ತಾರೆ . ಮಂಗಳೂರು ಸಂಚಾರ ಪೂರ್ವ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ

ಕಡಬ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರ್ವೋತ್ತಮ ಗೌಡ ನೇಮಕ

ಕಡಬ:ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರ್ವೋತ್ತಮ ಗೌಡ ಇವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಕಾರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಲಾಗಿದೆ‌‌ ಎಂದು ತಿಳಿದು ಬಂದಿದೆ. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮನೆ ನಿವಾಸಿಯಾಗಿರುವ ಸರ್ವೋತ್ತಮ ಗೌಡ ಅವರು ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್

ಉಡುಪಿ: ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಠಿ ಮಾಡಬೇಡಿ: ಕೋಟ ಶ್ರೀನಿವಾಸ ಪೂಜಾರಿ

ಕರ್ನಾಟಕದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಅನ್ವಯಿಸುವ ಸಮಸ್ಯೆ ಇದು. ವಿರೋಧಪಕ್ಷದ ಶಾಸಕರನ್ನ ಸಿದ್ದರಾಮಯ್ಯ ಸರ್ಕಾರ ಹಣೆಯಲು ಹೊರಟಿದೆ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಯನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಾಸಕ ಮುನಿರತ್ನ ಪ್ರತಿಭಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಮಂಜೂರಾದ ಯೋಜನೆಯ ಹಣವನ್ನು ಬಿಡುಗಡೆ ಮಾಡದೆ ತಡೆಹಿಡಿಯಲಾಗಿದೆ. ಹೊಸ

ಬಂಟ್ವಾಳ: ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಸಿಮೆಂಟ್ ಮಿಕ್ಸರ್ ಯಂತ್ರವಿದ್ದ ವಾಹನ, ಚಾಲಕನಿಗೆ ಗಾಯ

ಬಂಟ್ವಾಳ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಚಲಿಸುವ ಸಿಮೆಂಟ್ ಮಿಕ್ಸರ್ ಯಂತ್ರ ಒಳಗೊಂಡ ವಾಹನವೊಂದು ರೈಲ್ವೆ ಹಳಿ ಮೇಲೆ ಉರುಳಿಬಿದ್ದಿದೆ. ಘಟನೆಯಲ್ಲಿ ಅದನ್ನು ಚಲಾಯಿಸುತ್ತಿದ್ದ ಚಾಲಕ ಗಾಯಗೊಂಡಿದ್ದಾರೆ. ಎರಡನೇ ಪ್ಲಾಟ್ ಫಾರ್ಮ್ ನಲ್ಲೂ ರೈಲ್ವೆ ಸಂಚಾರವಿದ್ದು, ಘಟನೆ ಸಂಭವಿಸುವ ಹೊತ್ತಿನಲ್ಲಿ ರೈಲು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ. ಬಳಿಕ ಅದರ ತೆರವು ಕಾರ್ಯಾಚರಣೆಗೆ

ಮಂಗಳೂರು: ಪ್ರತಿಯೊಂದು ವಿಚಾರದಲ್ಲೂ ರಾಜ್ಯ ಸರ್ಕಾರದಿಂದ ಜನತೆಗೆ ಅನ್ಯಾಯ: ವೇದವ್ಯಾಸ ಕಾಮತ್ ಕಿಡಿ

ಮಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಗಲಭೆಯಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿ ಅಮಾಯಕರ ಮೇಲೆ ಹಲ್ಲೆ ಮನೆಗಳ ಮೇಲೆ ದಾಳಿಗಳು ನಡೆದಿವೆ. ಮುಖ್ಯಮಂತ್ರಿ, ಗೃಹಸಚಿವರು ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಿದ್ದಾರೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್

ಲೀಚ್ ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ

ಪುತ್ತೂರು: ಅ.15ರಿಂದ 26ರ ವರೆಗೆ ದಸರಾ ಮಹೋತ್ಸವ

ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ 21ನೇ ವರ್ಷದ `ಪುತ್ತೂರು ದಸರಾ ಮಹೋತ್ಸವ’ ಅ. 15ರಿಂದ 26ರ ತನಕ ಸಂಪ್ಯ ಉದಯಗಿರಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ. 15ರಂದು ಬೆಳಿಗ್ಗೆ 10ಕ್ಕೆ ಗಣಪತಿ ಹಾಗೂ