Home Archive by category ಕರಾವಳಿ (Page 181)

ತೊಕ್ಕೊಟ್ಟಿನಲ್ಲಿ ಸರಣಿ ಕಳವು ಪ್ರಕರಣ

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಮೂರು ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ನಡೆದಿದ್ದು, ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮೀ ಕ್ಯಾಂಟೀನ್ , ಹ್ಯಾರೀಸ್ ಎಂಬವರಿಗೆ ಸೇರಿದ ಸಿಲ್ವರ್ ಸ್ಟಾರ್ ಎಂಟರ್‍ಪ್ರೈಸ್ ಸ್ಟೀಲ್

ವಸಂತ ಬಂಗೇರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ : ಅಭಿಮಾನಿ ಬಳಗದಿಂದ ದೂರು

ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ವಸಂತ ಬಂಗೇರ ಅವರ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನವಾಗಿದೆ. ಈ ಸಂದೇಶವನ್ನು ತಾಲೂಕಿನ ಹಲವರು ಹಂಚಿಕೊಂಡು ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಹಾಸ ಚಾರ್ಮಾಡಿ, ಅಶೋಕ್ ಪೂಜಾರಿ, ಧನಂಜ ಜೈನ್ ಉಪಸ್ಥಿತರಿದ್ದರು.

ಮೋಹನ್ ಕೋಡಿಂಬಾಳ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕಡಬ : ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಕಡಬ ಕದಂಬದ ಮಾಜಿ ಅಧ್ಯಕ್ಷರಾದ ಮೋಹನ್ ಕೋಡಿಂಬಾಳ ರವರಿಗೆ ಜೇಸಿಐ ವಲಯ-15 ನೀಡುವ ಪ್ರತಿಷ್ಠಿತ ‘ಉದ್ಯೋಗ ರತ್ನ’ ಪ್ರಶಸ್ತಿ ಲಭಿಸಿದೆ. ಜೇಸಿಐ ಶಂಕರನಾರಾಯಣ ಘಟಕದ ಆಶ್ರಯದಲ್ಲಿ ಹಾಲಾಡಿಯ ಶಾಲಿನಿ ಜಿ.ಶಂಕರ ಕನ್ವೆನ್ಸನ್‌ ಸೆಂಟರ್‌ನಲ್ಲಿ ನಡೆದ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಪ್ರಶಸ್ತಿ ವಿತರಿಸಿದರು.

ಮಂಗಳೂರು ಜಂಕ್ಷನ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ

ಮಂಗಳೂರು ಜಂಕ್ಷನ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆಗಸ್ಟ್ 6ರಂದು ಶಿಲಾನ್ಯಾಸ ನೆರವೇರಲಿದೆ.\ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ರವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಸುಮಾರು ರೂ. 19.32

ಕಾರ್ಕಳದ ಕೆನರಾ ಬ್ಯಾಂಕ್‍ನಲ್ಲಿ ಅಗ್ನಿ ಅನಾಹುತ

ಕಾರ್ಕಳದ ಅನಂತ ಪದ್ಮನಾಭ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಂದು ಬೆಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಕಾರ್ಕಳ ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿ ತ್ವರಿತ ಗತಿಯಲ್ಲಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಗತ್ಯತೆ ಉಳ್ಳ ದಾಖಲೆಗಳು ಹಾಗೂ ಸೂತ್ತುಗಳು ಹಾನಿಯಾಗಿಲ್ಲ. ಗ್ರಾಹಕರು ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಬ್ಯಾಂಕ್ ಪ್ರಬಂಧಕರು ತಿಳಿಸಿದ್ದಾರೆ.

ಸಮಾಜದ ರಕ್ಷಣೆಯ ಹೆಸರಿನಲ್ಲಿ ನೈತಿಕ ಗೂಂಡಗಿರಿ ಖಂಡನೀಯ : ಸಚಿವ ಬಿ. ರಮಾನಾಥ ರೈ

ಬಂಟ್ವಾಳ: ಸಮಾಜದ ರಕ್ಷಣೆ ಮಾಡುತ್ತೇವೆಂದು ನೈತಿಕ ಗೂಡಂಗಿರಿ ಮಾಡುವ ಪ್ರವೃತ್ತಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳಿಂದ ನಡೆಯುತಿದ್ದು ಇದನ್ನು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮನಾಥ ರೈ ಹೇಳಿದರು. ಅವರು, ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂತಹ ಕೃತ್ಯ ಎಸಗುವವರ ವಿರುದ್ದ

ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ – ಆಟೋ ರಿಕ್ಷಾ ಚಾಲಕನ ಮೇಲೆ ತಂಡದಿಂದ ಹಲ್ಲೆ

ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ರಿಕ್ಷಾ ಚಾಲಕನಿಗೆ ತಂಡವೊಂದು ತೀವ್ರ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಉಜಿರ ಹಳೆ ಪೇಟೆ ನಿವಾಸಿ ಮುಹಮ್ಮದ್ ಆಶಿಕ್ ಹಲ್ಲೆಗೊಳಗಾದ ಯುವಕ. ಆಶಿಕ್ ತನ್ನ ಆಟೋದಲ್ಲಿ ಬುಧವಾರ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ನಾಲ್ವರ ತಂಡವೊಂದು ಧರ್ಮಸ್ಥಳ ಕೆಎಸ್ಸಾರ್ಟಿಸಿ

ಮಕ್ಸೂದ್ ಕೈಚಳಕದಿಂದ ಮೂಡಿಬಂದ ವಿವಿಧ ಕಲಾಕೃತಿ

ಮಂಜೇಶ್ವರ : ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಹಾಗೂ ಪೋಷಣೆ ಸಿಕ್ಕರೆ ಮಕ್ಕಳು ನ್ನಷ್ಟು ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಬಿ.ಎಸ್ ನಗರದ ಭಿನ್ನ ಚೇತನರಾಗಿರುವ ಕೆ.ನಾಸರ್ ಹಾಗೂ ಜುಬೈದ ದಂಪತಿಗಳ ಪುತ್ರ ಅಬೂಬಕ್ಕರ್ ಮಕ್ಸೂದ್. ಉದ್ಯಾವರ ಅಲ್ ಸಖಾಫ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ತನ್ನ ಕೈ ಚಳಕದಿಂದ ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿತ್ರಕಲೆಯಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾನೆ. ಇಷ್ಟು

ಸ್ಪೀಕರ್ ಕ್ಷೇತ್ರದಲ್ಲಿ ಜನರ ಸಂಕಷ್ಟ ಕೇಳುವವರು ಇಲ್ಲ ; ಮನವಿ ಕೊಡಲು ಹೋದರೆ ಅಧಿಕಾರಿಗಳೇ ನಾಪತ್ತೆ

ಸ್ಪೀಕರ್ ಕ್ಷೇತ್ರವಾದ ಉಳ್ಳಾಲದ ನಗರ ಸಭೆ ಕಚೇರಿಗೆ ಹೋದರೆ ಜನರ ಸಂಕಷ್ಟ ಕೇಳುವವರೇ ಇಲ್ಲ.ಕನಿಷ್ಠ ಮನವಿ ಸ್ವೀಕರಿಸಲು ಅಲ್ಲಿನ ಅಧಿಕಾರಿಗಳೇ ನಾಪತ್ತೆಯಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಆಟೋರಿಕ್ಷಾ ಪಾರ್ಕ್ ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿದ್ದು,ಸದ್ಯಕ್ಕೆ ಈ ಪಾರ್ಕ್ ತೀರಾ ಅವ್ಯವಸ್ಥೆಗಳಿಂದ ಕೂಡಿದೆ. ರಿಕ್ಷಾ ಪಾರ್ಕ್ ಬಳಿಯಲ್ಲೇ ಕಳೆದ ಒಂದು ತಿಂಗಳಿನಿಂದ ಡ್ರೈನೇಜ್ ತ್ಯಾಜ್ಯ ಹರಿದಾಡುತ್ತಿದ್ದು ದುರ್ನಾತದಿಂದ ಅಲ್ಲಿ ನಿಲ್ಲಲು

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವರ್ಗಾವಣೆ

ಸುಳ್ಯ: ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರಿಗೆ ವರ್ಗಾವಣೆಯಾಗಿದೆ. ಅವರಿಗೆ ಉಡುಪಿ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಕಳೆದ ಮೂರೂವರೆ ವರ್ಷಗಳಿಂದ‌ ನವೀನ್ ಚಂದ್ರ ಅವರು ಸುಳ್ಯ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ರಾಜ್ಯದಲ್ಲಿ 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆ.1ರಂದು ಆದೇಶ ಮಾಡಿದೆ ಎಂದು ತಿಳಿದು ಬಂದಿದೆ.