Home Archive by category ಕರಾವಳಿ (Page 238)

ರಾ.ಹೆ. 66ರಲ್ಲಿ ಲಾರಿ ಪಲ್ಟಿ : ಗೇರುಬೀಜಗಳು ದಿಕ್ಕಾಪಾಲು

ಉಡುಪಿ ಜಿಲ್ಲೆ : ಮಂಗಳೂರಿನಿಂದ ಗೇರು ಬೀಜ ಹೇರಿಕೊಂಡ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ, ಇಂದು ಉಡುಪಿ ಸಮೀಪದ ಬಲಾಯಿಪಾದೆ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆಯಿತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ. ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದೆ

ಮಲ್ಪೆ ಬೀಚ್ ಬಳಿ ಉದ್ಘಾಟನೆಗೊಂಡ ರುದ್ರಭೂಮಿ : ಮಾಜಿ ಶಾಸಕ ಕೆ. ರಘುಪತಿ ಭಟ್ ಭಾಗಿ

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿಯಿರುವ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಮೇ 29, 2023 ರ ಸೋಮವಾರದಂದು ರುದ್ರಭೂಮಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಮತ್ತು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ರವರು ಉದ್ಘಾಟಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಅವಧಿಯಲ್ಲಿ ಅವರ ಶಿಫಾರಸ್ಸಿನ ಮೇರೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂಪಾಯಿ ಅನುದಾನ ರುದ್ರಭೂಮಿ ಅಭಿವೃದ್ಧಿ

ಕಾಪುವಿನಲ್ಲಿ ಕೆರೆಯಂತಾದ ಹೆದ್ದಾರಿ

ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಬಳಿಯ ಹೆದ್ದಾರಿ ಕೆರೆಯಾಗಿ ರೂಪುಗೊಂಡಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಇಲ್ಲಿ ನಿರಂತರ ಸಮಸ್ಯೆ ಅನುಭವಿಸುವಂತ್ತಾಗಿದ್ದು, ಸಣ್ಣ ಮಳೆಗೂ ರಸ್ತೆಯ ಈ ಭಾಗ ಜಲಾವೃತವಾಗುತ್ತಿದ್ದು, ಪಕ್ಕದ ಬಸ್ ತಂಗುದಾಣದಲ್ಲಿ ಬಸ್ ಕಾಯಲು ನಿಂತ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ಮಳೆಯ ಕೆಸರು ಮಿಶ್ರಿತ ನೀರು ಎರಚಿ ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕಾರ್ಮಿಕ ಚಳುವಳಿಯ ಧ್ರುವತಾರೆ CITU ಗೆ 53 ವರ್ಷಗಳ ಸಂಭ್ರಮ

ಐಕ್ಯತೆ ಮತ್ತು ಹೋರಾಟದ ನಿನಾದ ದೊಂದಿಗೆ,ತ್ಯಾಗ ಬಲಿದಾನದ ಪರಂಪರೆಯೊಂದಿಗೆ ಕಾರ್ಮಿಕ ಚಳುವಳಿಯ ಧ್ರುವತಾರೆಯಾಗಿ ಹೊರಹೊಮ್ಮಿದ CITUಗೆ 53 ವರ್ಷಗಳ ಸಂಭ್ರಮವಾಗಿದ್ದು, ಅದರ ಅಂಗವಾಗಿ ಇಂದು(30-05-2023) CITU ಜಿಲ್ಲಾ ಕೇಂದ್ರ ಕಛೇರಿಯಾದ ಬೋಳಾರದಲ್ಲಿ ಧ್ವಜಾರೋಹಣದ ಮೂಲಕ CITU ನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣಗೈದ CITU ದ. ಕ. ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ

ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿ ಉದ್ಘಾಟನೆ

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿಯನ್ನು ಕಾಪು ಮಿನಿ ವಿಧಾನಸೌಧದ ಪ್ರಥಮ ಮಹಡಿಯಲ್ಲಿ ಬಿಜೆಪಿಯ ಹಿರಿಯ ಚೇತನ ಗುಜ್ಜಾಡಿ ಪ್ರಭಾಕರ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಈಗಾಗಲೇ ಬಿಜೆಪಿ ಪಕ್ಷವು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಯಾವ ಬೂತ್‍ನಲ್ಲಿ ಕಡಿಮೆ ಮತ ಸಿಕ್ಕಿದೆಯೋ ಆ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ನಮ್ಮ ನ್ಯೂನ್ಯತೆಯನ್ನು ಸರಿ ಪಡಿಸಿಕೊಳ್ಳ ಬೇಕಾಗಿದೆ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಪುತ್ತೂರು : ಹಾಡಹಗಲೇ ಮನೆಯೊಂದರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು

ಪುತ್ತೂರು : ಹಾಡು ಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಹಣ ಕಳವು ಮಾಡಿದ ಘಟನೆ ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿ ನಡೆದಿದೆ. ಬನ್ನೂರು ಗ್ರಾಮದ ಕುಂಟ್ಯಾನ ಸದಾಶಿವ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೌನೀಶ್ ಅವರ ಮನೆಯಿಂದ ಕಳ್ಳತನ ನಡೆದಿದೆ. ಸೋಮವಾರ ಬೆಳಿಗ್ಗೆ ಮನೆಮಂದಿ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು.ಮಧ್ಯಾಹ್ನ 12 ಗಂಟೆಯ ವೇಳೆಗೆ ಹಿಂತಿರುಗಿ ಬಂದಾಗ ಮನೆಯ

ಮಳೆಗಾಲದಲ್ಲಿ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡದೆ ಕಾರ್ಯಪ್ರವೃತ್ತರಾಗಬೇಕು : ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಮಳೆಗಾಲದ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸಬೇಕು. ಪೋನ್ ಸ್ವಿಚ್ ಆಫ್ ಮಾಡಿಕೊಳ್ಳದೆ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು, ಯಾವುದೇ ಸಮಸ್ಯೆ, ಅವಘಡಗಳು ಎದುರಾದರೂ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿ.ಸಿ.ರೋಡಿನ

ಬೆಳ್ಳಂಬೆಳಗ್ಗೆ ಉಡುಪಿಗೆ ಆಗಮಿಸಿದ ವರುಣ

ಉಡುಪಿ : ಬಿಸಿಲ ಬೇಗೆಯಲ್ಲಿ ಕಂಗೆಟ್ಟ ಉಡುಪಿಯ ಜನತೆಗೆ ಇಂದು ಕೊಂಚ ನಿಟ್ಟುಸಿರು ಬಿಡುವಂತಾಯಿತು. ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಉಡುಪಿ ನಗರದೆಲ್ಲೆಡೆ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದ ಮಳೆಯಾಗಿದೆ. ಉದ್ಯೋಗ ಹಾಗೂ ಇನ್ನಿತರ ಉದ್ದೇಶಕ್ಕಾಗಿ ತೆರಳಿದ ಜನರಿಗೆ ಏಕಾಏಕಿ ಸುರಿದ ಮಳೆಯಿಂದ ಸ್ವಲ್ಪ ಸಮಸ್ಯೆಯಾದರೂ, ಇಳೆ ತಂಪಾಯಿತೆಂಬ ಸಮಾಧಾನ ತಂದಿತು. ಬೇರೆ ಊರಿಂದ ಉಡುಪಿಗೆ ಬಂದ ಜನರಿಗೆ ಮಳೆರಾಯ ತಂಪೆರೆದು ಸ್ವಾಗತ ಕೋರಿದನು.

ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು ಶಾಸಕ, ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸ್ಪೀಕರ್ ಹುದ್ದೆಗೆ ಖಾದರ್ ಸೂಕ್ತ ವ್ಯಕ್ತಿಯಾಗಿದ್ದು, ಅವರ ಭಾಷಣವನ್ನು ಪೂರ್ತಿ ಕೇಳಿದ್ದೇನೆ. ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಪೂಜಾರಿ ಬೆನ್ನು ತಟ್ಟಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್, ಜನಾರ್ದನ ಪೂಜಾರಿ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು,

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ – ವ್ಯವಹಾರದಲ್ಲಿನ ಅಡೆತಡೆಗಳ ನಿವಾರಣೆ ವಿಚಾರಗೋಷ್ಠಿ

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಲಬ್‍ನಲ್ಲಿ ಸದಸ್ಯರ ಸಭೆ ಯನ್ನು ನಡೆಸಲಾಯಿತು. ಎನ್‍ಆರ್‍ಐ ಉದ್ಯಮಿ ಶ್ರೀ ಮೈಕಲ್ ಡಿಸೋಜಾ ಅವರು ಮುಖ್ಯ ಭಾಷಣಕಾರರಾಗಿದ್ದರು. ಮೈಕಲ್ ಡಿಸೋಜರವರು ಮಾತನಾಡಿ ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ, ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ , ಸಣ್ಣ ವಯಸ್ಸಿನಲ್ಲಿ ವ್ಯಾಪಾರವನ್ನು