Home Archive by category ಕರಾವಳಿ (Page 236)

ಪರಿಸರ ಸ್ನೇಹಿ ಅಭಿವೃದ್ದಿ ನಮ್ಮೆಲ್ಲರ ಹೊಣೆಯಾಗಬೇಕು – ಡಾ.ಜೀವನ ರಾಜ್ ಕುತ್ತಾರ್

ಪರಿಸರವನ್ನು ಅತ್ಯಂತ ಜೋಪಾನವಾಗಿ ಕಾಪಾಡಬೇಕಾದ ಮನುಷ್ಯರು ತಮ್ಮ ಉತ್ತಮ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ.ನೆಲ ಜಲ ಗಾಳಿ ಗಿಡ ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು. ಅದು ಪರಿಸರ ಸ್ನೇಹಿ

ನಿಟ್ಟೆ ವಿಶ್ವವಿದ್ಯಾಲಯ : ಜೂನ್ 8-11ರ ವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರ ಪ್ರದರ್ಶನ

ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ನಾಲ್ಕನೇ ಆವೃತ್ತಿಯ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳನ್ನು ಜೂನ್ 8 ರಿಂದ 11 ರ ವರೆಗೆ ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ಆಯೋಜಿಸಲಾಗಿದೆ ಎಂದು ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಕಮ್ಯುನಿಕೇಶನ್ ನ ಮುಖ್ಯಸ್ಥ ಪ್ರೊ. ರವಿರಾಜ್ ಅವರು ತಿಳಿಸಿದ್ದಾರೆ . ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ರಸ್ತೆಯಲ್ಲಿ ದನ ಅಡ್ಡ ಬಂದ ಹಿನ್ನಲೆ : ರಿಕ್ಷಾ ಮಗುಚಿ ಬಿದ್ದು ಜಖಂ

ವಿಟ್ಲ: ಸಾರಡ್ಕ – ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ರಿಕ್ಷಾವೊಂದು ಮಗುಚಿ ಬಿದ್ದು ಜಖಂಗೊಂಡಿದೆ. ಆಜೇರು ನಿವಾಸಿ ಶಾಂತಾರಾಮ ರಾವ್ ಅವರು ರಿಕ್ಷಾದಲ್ಲಿ ಮಂಗಳವಾರ ಬೆಳಗ್ಗೆ ತೋರಣಕಟ್ಟೆಯಿಂದ ಪರಿಯಲ್ತಡ್ಕಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಘಟನೆಯಿಂದ ರಿಕ್ಷಾದಲ್ಲಿ ಇದ್ದ ಸುಮಾರು ೫೦ಲೀಟರ್ ಹಾಲು ರಸ್ತೆಗೆ ಚೆಲ್ಲಲ್ಪಟ್ಟಿದೆ. ರಿಕ್ಷಾ ಚಾಲನೆ ಮಾಡುತ್ತಿದ್ದ ಶಾಂತಾರಾಮ

ಉಳೆಪಾಡಿ ಮಿತ್ತಬೆಟ್ಟುವಿನಲ್ಲಿ ಉರುಳಿಗೆ ಸಿಕ್ಕಿ ಚಿರತೆ ಸಾವು

ಚಿರತೆಯೊಂದು ಉರುಳಿಗೆ ಸಿಕ್ಕಿ ಒದ್ದಾಡಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಹಾವಳಿ ತಡೆಯಲಾರದೆ ಸ್ಥಳೀಯರು ಮಿತ್ತಬೆಟ್ಟು ಬಳಿಯ ಗುಡ್ಡದಲ್ಲಿ ಇಟ್ಟಿದ್ದ ಉರುಳಿಗೆ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಗುಡ್ಡದಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ಭಯಭೀತರಾಗಿ ಸ್ಥಳೀಯರು ಸ್ಧಳಕ್ಕೆ ಧಾವಿಸಿದಾಗ ಚಿರತೆ ಉರುಳಿಗೆ ಬಿದ್ದು

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ

ಉಜಿರೆ, ಜೂ. 3 : ಸಂಶೋಧನೆಯೆಂಬುವುದು ವೈಜ್ಞಾನಿಕವಾಗಿ, ಸಾಮಾಜಿಕ ಅಭಿವೃದ್ಧಿ ಮತ್ತು ಸುಸ್ಥಿರತೆಗೆ ಪೂರಕವಾಗಿ ಇರುವುದು ಅಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹೇಳಿದರು.ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಶೋಧನಾ ವಿನ್ಯಾಸ: ಲೇಖನ ಬರವಣ ಗೆ ಮತ್ತು ಪ್ರಕಟಣೆ- ಭವಿಷ್ಯದ ಹಾದಿ’ ಎಂಬ ರಾಜ್ಯ

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಚಯ’ ವಿಶೇಷ ಕಾರ್ಯಕ್ರಮ

ಉಜಿರೆ: ಶ್ರೇಷ್ಠ ಹವ್ಯಾಸಗಳು ಮಾನವನ ಅಭಿವೃದ್ಧಿಗೆ ಪೂರಕ ಎಂದು ರುಡ್ ಸೆಟಿ ಸಂಸ್ಥೆಯ ತರಬೇತುದಾರೆ ಅನಸೂಯಾ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಇತ್ತೀಚೆಗೆ ಹಾಬಿ ಸರ್ಕಲ್ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ‘ಸಂಚಯ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಹವ್ಯಾಸಗಳಲ್ಲಿ ತೊಡಗುವುದರಿಂದ ಸಂತೋಷ ಲಭಿಸುತ್ತದೆ. ಮನುಷ್ಯನ ಜೀವನವನ್ನು ಹಸನುಗೊಳಿಸುವ ಶಕ್ತಿ ಉತ್ತಮ ಹವ್ಯಾಸಗಳಿಗಿದೆ ಎಂದು ಅವರು ತಿಳಿಸಿದರು.

ಎಸ್.ಡಿ.ಎಂ ಭೌತಶಾಸ್ತ್ರ ‘ಇವೆಂಟ್ ಹಾರಿಜನ್’ ಉತ್ಸವ

ಉಜಿರೆ, ಜೂನ್ 6: ಪರಿಸರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ನೈಸರ್ಗಿಕ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಹೊಳೆಸುವ ಆಲೋಚನಾ ಕ್ರಮಗಳು ಭೌತಶಾಸ್ತ್ರ ಮತ್ತು ಜೀವವಿಜ್ಞಾನದ ಸಂಶೋಧನಾತ್ಮಕ ಪ್ರಜ್ಞೆಯಿಂದ ನಿರೂಪಿತವಾಗುತ್ತವೆ ಎಂದು ಉಜಿರೆ ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅಭಿಪ್ರಾಯಪಟ್ಟರು. ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗ ಮತ್ತು ಫಿಜಿಕಾ ಸಂಘದ ಸಹಯೋಗದಲ್ಲಿ ‘ಇವೆಂಟ್ ಹಾರಿಜಾನ್’

ಎಸ್.ಡಿ.ಎಂ. ರಸಾಯನಶಾಸ್ತ್ರ ರಾಷ್ಟ್ರೀಯ ಕಾರ್ಯಾಗಾರ

ಉಜಿರೆ, ಜೂನ್ 6: ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ವೈಜ್ಞಾನಿಕ ಸಾಮಾಜಿಕ ಹೊಣೆಗಾರಿಕೆಯೊಂದಿಗಿನ ರಚನಾತ್ಮಕ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಇಂಡಿಯನ್ ನಾಷನಲ್ ಯಂಗ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯ ಡಾ. ಹೆಚ್. ಎಸ್. ಎಸ್. ರಾಮಕೃಷ್ಣ ಮಟ್ಟೆ ಅಭಿಪ್ರಾಯಪಟ್ಟರು. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ರಸಾಯನಶಾಸ್ತ್ರ ವಿಭಾಗ ಮತ್ತು ಇಂಡಿಯನ್ ನಾಷನಲ್ ಯಂಗ್ ಅಕಾಡೆಮಿ ಆಫ್ ಸೈನ್ಸಸ್ ಜಂಟಿಯಾಗಿ ‘ಮಾಲಿಕ್ಯುಲರ್ ಡಾಕಿಂಗ್ ಮತ್ತು

ಕಡಬ :ಕೋಡಿಂಬಾಳ ಚರ್ಚಿನಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆ

ಕಡಬ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ಇಲ್ಲಿನ ಎಂಸಿಎ ಘಟಕದ ನೇತೃತ್ವದಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಎಂಸಿಎ ಕೋಡಿಂಬಾಳ ಘಟಕದ ಉಪಾಧ್ಯಕ್ಷ ಚಾಕೋ ವಿ.ಎಂ ಅವರು ಸಭಾಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕೋಡಿಂಬಾಳ ಚರ್ಚ್‌ ಧರ್ಮಗುರುಗಳಾದ ವಂ.ರೆ.ಫಾ. ಜಾರ್ಜ್ ವಡಕೇದಿಲ್, ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಅಧ್ಯಕ್ಷರಾದ ಬೈಜು ಬೆಂಗಳೂರು, ಕಾರ್ಯದರ್ಶಿ ಪ್ರಕಾಶ್ ಕೆ.ವೈ. ನೆಲ್ಯಾಡಿ, ಸಿಸ್ಟರ್

ಕಡಬ ಪತ್ರಕರ್ತರಿಂದ ಶಾಸಕಿಗೆ ಅಭಿನಂದನೆ

ಕಡಬ: ಸೋಮವಾರ ಕಡಬಕ್ಕೆ ಆಗಮಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರಳ್ಯ ಅವರನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಅವರ ನೇತೃತ್ವದಲ್ಲಿ ಶಾಸಕರನ್ನು ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಕೋರಿದರು. ಈ ವೇಳೆ