Home Archive by category ಕರಾವಳಿ (Page 26)

ಬಾರಕೂರು  : ಆಳುಪೋತ್ಸವ ನಡೆದಲ್ಲಿ ಕಾಡು ಪೊದೆಗಳ ರಾಜ್ಯ

ತುಳುನಾಡ ರಾಜಧಾನಿ ಆಗಿದ್ದ ದೇವಾಲಯಗಳ, ರಾಜ ಮಹಾರಾಜರುಗಳ  ಖ್ಯಾತಿಯ  ಬಾರಕೂರು  ಕೋಟೆಯಲ್ಲಿ 5 ವರ್ಷಗಳ ಹಿಂದೆ  ನಡೆದ ಅಳುಪೋತ್ಸವ ನಡೆದಿತ್ತು. ಅಲ್ಲಿ ಈಗ ಮುಳ್ಳು ಪೊದೆಗಳು ರಾಜ್ಯಭಾರ ನಡೆಸಿವೆ.  2019 ಜನವರಿ  25ರಿಂದ 27ರತನಕ  ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ  ಮತ್ತು  ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ  ಮತ್ತು ಸ್ಥಳಿಯ ಸಂಘ ಸಂಸ್ಥೆಗಳ

ಬಂಟ್ವಾಳ: ವ್ಯಕ್ತಿಯೋರ್ವರ ಚಿನ್ನದ ಸರ, ಹಣ ಕಸಿದು, ಹಲ್ಲೆ ನಡೆಸಿ, ಜೀವ ಬೆದರಿಕೆ

ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಆರೋಪಿಗಳು ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ. ಮಾಣಿ ಗ್ರಾಮ ಬಂಟ್ವಾಳ ನಿವಾಸಿ ಸ್ಟೀವನ್ ಆಲ್ವೀನ್ ಪಾಯಸ್ (೫೧) ಎಂಬುವರು ಮಾರ್ಚ್ ೫ರಂದು ಬೆಳಗ್ಗೆ, ಅವರ ಮೋಟಾರ್ ಸೈಕಲ್‌ನಲ್ಲಿ ಕಛೇರಿಗೆ

ಮಂಗಳೂರು: ಮಾ.10ರಂದು ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ: 9 ಮಂದಿ ಪತ್ರಕರ್ತರಿಗೆ ಗೌರವ ಸನ್ಮಾನ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ದಿನಾಚರಣೆ ಮಾ.10ರಂದು ಬೆಳಗ್ಗೆ 9.30ರಿಂದ ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರಾಘವೇಂದ್ರ ಭಟ್,  ಪ್ರಕಾಶ್ ಮಂಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಅಶೋಕ್. ಶೆಟ್ಟಿ ಬಿ.ಎನ್.V4 ನ್ಯೂಸ್ ನ ವರದಿಗಾರ ಶರತ್ ಸಾಲಿಯಾನ್ ಇವರುಗಳು ಪ್ರೆಸ್‌ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

ತಾಯಿ ತಾಪ

ಇತ್ತೀಚೆಗೆ ಬೆಂಗಳೂರಿನಲ್ಲಿ ತಾಯಿ ಒಬ್ಬರು ಪ್ರಿಯಕರನೊಡನೆ ಸೇರಿ ಎರಡೂವರೆ ವರುಷದ ಮಗುವನ್ನು ಹಿಂಸಿಸಿದ್ದು ವರದಿಯಾಗಿದೆ. ಬೆಂಗಳೂರು ಹೊಸಕೆರೆಹಳ್ಳಿಯ ಈ ಪ್ರಕರಣದಲ್ಲಿ ಅಕ್ರಮ ದಂಪತಿಯನ್ನು ಬಂಧಿಸಲಾಗಿದೆ. ತಿಂಗಳ ಹಿಂದೆ ಅದೇ ಬೆಂಗಳೂರಿನಲ್ಲಿ ಇದೇ ರೀತಿಯ ಅಕ್ರಮ ದಂಪತಿಯು ಮಗುವನ್ನು ಕೊಂದು ಈಗ ಜೈಲಿನಲ್ಲಿ ಇದ್ದಾರೆ. ಮೊಕದ್ದಮೆ ನಡೆದಿದೆ. ಎಲ್ಲ ತಾಯಂದಿರು ಒಂದಲ್ಲ ಒಂದು ಬಾರಿ ಮಗುವಿಗೆ ಹೊಡೆಯುತ್ತಾರೆ. ಆಮೇಲೆ ಅವರೇ ಮುದ್ದು ಮಾಡುತ್ತಾರೆ. ಸಾಮಾನ್ಯವಾಗಿ ಹಠ

ಮೂಡುಬಿದಿರೆ : ಆಳ್ವಾಸ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮೂಡುಬಿದಿರೆ : ‘ದೇಶದ ಅಭಿವೃದ್ಧಿಗೆ ಮಹಿಳೆಯರ ಸಶಕ್ತೀಕರಣ, ಮೌಲ್ಯ ಹಾಗೂ ಗೌರವವು ಅವಶ್ಯವಾಗಿದೆ. ಮಹಿಳೆಯರ ಆಶಯ ಪರಿಗಣಿಸದೇ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಪುರುಷರು ಅರಿತುಕೊಳ್ಳಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ ಕೆ. ಹೇಳಿದರು.ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2024ರ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿವಿಧ ಸಂಘ -ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಳ್ವಾಸ್ ಕಾಲೇಜಿನ

ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ. ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡಿನ ಕೊಟೇಲು, ದರ್ಖಾಸು ಎಂಬಲ್ಲಿ 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ ಮಾ.04 ರಂದು ನೆರವೇರಿತು.ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ಉಪಾಧ್ಯಕ್ಷೆ ಶ್ರೀಮತಿ ರೇಶ್ಮಾ ಶಶಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.15ನೇ ಹಣಕಾಸು ಯೋಜನೆಯಡಿ ಪಂಚಾಯತ್ ಅನುದಾನ

ಮಂಗಳೂರು: ಬಿಜೆಪಿ ಯುವ ಮೋರ್ಚಾ ಸಭೆ

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ದಕ್ಷಿಣ ಕನ್ನಡ ಜಿಲ್ಲೆಯ ಸಭೆಯು ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ ವಹಿಸಿದರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮತ್ತು ಭಾರತ ಮಾತೆ ಗೆ ಪುಷ್ಪಾರ್ಚನೆ ಗೈದು ಉದ್ಘಾಟನೆ ಮಾಡಿದ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಳ ರವರು ಉದ್ಘಾಟನೆ ಭಾಷಣ ಮಾಡಿ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಗಳ ಹಾಗೂ ಪಕ್ಷಕ್ಕೆ ಯುವಕರ ಪಾತ್ರ

ಉಡುಪಿ: ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನ :ಕರವೇ ಕಾರ್ಯಕರ್ತರಿಂದ ನಗರಸಭೆಗೆ ಮುತ್ತಿಗೆ ಯತ್ನ

ಉಡುಪಿ: ಕರವೇ ವತಿಯಿಂದ ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನ ಉಡುಪಿಯಲ್ಲಿ ನಡೆಯಿತು. ಕರವೇ ಕಾರ್ಯಕರ್ತರು ಕರಪತ್ರ ಹಂಚುತ್ತಾ ಕರಾವಳಿ ಬೈಪಾಸ್‌ ಬನ್ನಂಜೆ ಮಾರ್ಗವಾಗಿ ಸಿಟಿ ಬಸ್ ಸ್ಟಾಂಡ್, ಸರ್ವಿಸ್ ಬಸ್ ಸ್ಟ್ಯಾಂಡ್ ಮೂಲಕ ಜೋಡುಕಟ್ಟೆ ಮಾರ್ಗವಾಗಿ ನಗರಸಭೆಗೆ ತೆರಳಿದರು. ನಗರಸಭೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಕರ್ನಾಟಕ ರಕ್ಷಣಾ

ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ-ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಪುತ್ತೂರು: ರಾಜ್ಯಾದ್ಯಂತ ನಡೆದ ಹಿಂದೂ ವಿರೋಧಿ ಕೃತ್ಯವನ್ನು ವಿರೋಧಿಸಿ ಪುತ್ತೂರಿನಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು. ದರ್ಬೆ ವೃತ್ತದ ಬಳಿ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು ದರ್ಬೆ ವೃತ್ತದ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಲು ಪೊಲೀಸರು ಮುಂದಾದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ

ಅಪಘಾತಗೊಂಡ ಯುವಕ ಚಿಕಿತ್ಸೆ ಫಲಿಸದೆ ಸಾವು

ಪುತ್ತೂರು: ಕಳೆದ ಒಂದು ವಾರಗಳ ಹಿಂದೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ನಗರದ ಬೈಪಾಸ್‌ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಬೀರ್ಮಕಜೆ ಎಂಬಲ್ಲಿನ ನಿವಾಸಿ ಪ್ರಸಾದ್(27) ಮೃತಪಟ್ಟ ಯುವಕ. ನಗರದ ಬೈಪಾಸ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿರುವ