Home Archive by category ಕರಾವಳಿ (Page 27)

ವ್ಯಾಪ್ತಿ ಮೀರಿದ ಮೀನುಗಾರಿಕೆ ಜಗಳ, ತಕರಾರು || V4NEWS

ಇತ್ತೀಚೆಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೋದ ಬೋಟನ್ನು ಮೀನು ಸಹಿತ ಭಟ್ಕಳದ ಮೀನುಗಾರರು ವಶಪಡಿಸಿಕೊಂಡ ಪ್ರಕರಣ ನಡೆದಿದೆ. ಅದು ಪೆÇೀಲೀಸು ಠಾಣೆ ಹತ್ತಿದೆ. ಕಳೆದ ತಿಂಗಳು ಗೋವಾ ಕರಾವಳಿಯಲ್ಲಿ ಎರಡು ಬಾರಿ ಕನ್ನಡ ಕಡಲ ಮೀನು ಬೋಟುಗಳನ್ನು ಅಲ್ಲಿನವರು ದರೋಡೆ ಮಾಡಿದರು ಎಂಬ ದೂರು ದಾಖಲಾಗಿತ್ತು. ಕಡಲ್ಗಳ್ಳರು ಎನ್ನುವುದು ಸಮುದ್ರ ಇತಿಹಾಸದ ಒಂದು ಭಾಗ.

ಮಂಗಳೂರು : ಸಂತ್ರಸ್ತ ಬಾಲಕಿಯರನ್ನು ಭೇಟಿ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ

ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ. ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಮಕ್ಕಳಲ್ಲಿ ಮನೋಧೈರ್ಯ ಜಾಸ್ತಿ ಇದೆ. ಒಮ್ಮೆ ಕನ್ನಡ ಪರೀಕ್ಷೆ

ಉಳ್ಳಾಲ: ಕಾರ್, ಬೈಕ್ ಗೆ ಢಿಕ್ಕಿ: ಕೊಲ್ಯ ನಿವಾಸಿ ದಾರುಣ ಸಾವು

ಉಳ್ಳಾಲ: ಒಂದೇ ಧಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಥಾರ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದು ಮುಂಬದಿ ಚಲಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದು, ಸವಾರ ಡಿವೈಡರ್ ಗೆ ಬಡಿದು ಸಾವನ್ನಪ್ಪಿದ ಘಟನೆ ರಾ.ಹೆ66 ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಇಂದು ಮಧ್ಯಾಹ್ನ ಸಂಭವಿಸಿದೆ. ಜೀಪಿನಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಆರೋಪಿಸಿ

ಪುತ್ತೂರು: ಬಿಜೆಪಿಯಿಂದ ಗ್ರಾಮ ಚಲೋ ಕಾರ್ಯಾಗಾರ

ಪುತ್ತೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಮುನ್ನಡೆ ಒದಗಿಸಿಕೊಡುವ ಭರವಸೆಯನ್ನು ಪುತ್ತೂರು ಕ್ಷೇತ್ರದ ಎಲ್ಲಾ ಕಾರ್ಯಕರ್ತರು ನೀಡಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದೆ ಗೆಲ್ಲುತ್ತೇವೆ. ಮರಳಿ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿ

ಪುತ್ತೂರು : ಬೈಕ್ ಹಾಗೂ ಮಿನಿ ಗೂಡ್ಸ್ ವಾಹನ ಡಿಕ್ಕಿ : ಬೈಕ್ ಸವಾರ ಸಾವು

ರಾಮಕುಂಜ: ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ಮಾ.4ರಂದು ರಾತ್ರಿ ನಡೆದಿದೆ. ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್(20ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶ್ರೀಜಿಸ್‌ರವರು ರಾಮಕುಂಜ

ಮೂಡುಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ ಡಾ. ಎಂ.ವಿದ್ಯಾಧರ ಶೆಟ್ಟಿ ನಿಧನ

ಮೂಡು ಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ, ವೈದ್ಯರಾಗಿ ಐದು ದಶಕಗಳ ಸೇವೆ ಸಲ್ಲಿಸಿದ್ದ ಮೂಡುಬಿದಿರೆ ಮೂಲದ ಡಾ. ಎಂ. ವಿದ್ಯಾಧರ ಶೆಟ್ಟಿ (76 ವ) ಶನಿವಾರ ಮುಂಜಾವ ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ಧಾರೆ. ಮಂಗಳೂರಿನ ವಿಜಯಾ ಕ್ಲೀನಿಕ್ ಬಳಿಕ ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ಮುಖ್ಯ ಅಧೀಕ್ಷಕ ವೈದ್ಯರಾಗಿದ್ದ ಅವರು ಮಂಗಳೂರ ಬಳಿಕ ಮೂಡುಬಿದಿರೆಯಲ್ಲೂ ರೋಟರಿ ಕ್ಲಬ್ ವಿವಿಧ ಹುದ್ದೆಗಳಲ್ಲಿದ್ದು ಬಳಿ

ಮೂಡುಬಿದಿರೆ: ಡಾ. ಪಿ.ಜಿ.ಬಿ. ಆಳ್ವ ನಿಧನ

ಮೂಡುಬಿದಿರೆ: ಹಿರಿಯ ದಂತವೈದ್ಯ ಡಾ.ಪೆರುವಾಯಿ ಗುತ್ತು ಬಾಲಕೃಷ್ಣ ಆಳ್ವ( 72) ಅಲ್ಪಕಾಲದ ಅಸ್ವಾಸ್ಥ್ಯದಿಂದ ಬೆಂಗಳೂರಿನ ತನ್ನ ಬೆಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ಮಾ 3ರಂದು ನಿಧನ ಹೊಂದಿದರು.ಅವರು ಪತ್ನಿ ,ಪುತ್ರ ಬೆಂಗಳೂರಿನ ನಾರಾಯಣ ಹೃದಯಾಲಯದ ಮುಖ್ಯ ಅರಿವಳಿಕೆ , ತೀವ್ರನಿಗಾ ತಜ್ಞ , ಮುಖ್ಯಸ್ಥ ಡಾ.ಅರ್ಜುನ್ ಆಳ್ವ ಸಹಿತ ಬಂಧು ವರ್ಗವನ್ನು ಅಗಲಿದ್ದಾರೆ.ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ದಂತವೈದ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳಿಂದ ಮನೆಯೊಂದಕ್ಕೆ ದಾಳಿ

ಬೆಳ್ಳಾರೆ: ಎನ್‌ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಣೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.ಎನ್‌ಐಎ ಅಧಿಕಾರಿಗಳ ತಂಡವು ಮನೆಯೊಂದಕ್ಕೆ ದಿಢೀರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದೆ.

ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಬ್ರಹ್ಮಾವರದ ನದಿ ತೀರದ ಸರಕಾರಿ ಜಾಗದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಮೂಡುಹೋಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬ್ರಹ್ಮಾವರ ತಾಲೂಕು ಸೌಧದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅದೇ ಜಾಗದ ಬಳಿ ನೂರಾರು ಎಕ್ರೆ ಕೃಷಿ ಭೂಮಿ ಜಲಾವೃತವಾಗುವ ಭೀತಿ ಎದುರಾಗಿದ್ದು, ಮತ್ತು ಅಲ್ಲಿನ ಪರಿಸರದ ಜನರು ಗೋಮಾಳದಲ್ಲಿ ಹಸುಗಳನ್ನು ಮೇಯಲು ಬಿಟ್ಟಾಗ ಮರಳುಗಾರಿಕೆ ಮಾಡುವವರು ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನೆಗೆ ಬಂದ

ನೀರುಗೋರಿ ಮತ್ತು ನೀರಲ್ಲಿ ನಗರ ಗೋರಿ || V4NEWS

ಹಳೆಯಂಗಡಿ ಬಳಿ ನದಿಯಲ್ಲಿ ವಿದ್ಯಾರ್ಥಿಗಳ ಶವ. ಪಣಂಬೂರು ಬೀಚ್‍ನಲ್ಲಿ ಕಡಲಿಗೆ ಕಂತಿನಲ್ಲಿ ಆಹಾರವಾದವರ ಸುದ್ದಿ. ಇವೆಲ್ಲ ಉಪ್ಪು ನೀರಿಗೆ ಬಲಿಯಾದವರ ಸುದ್ದಿ. ಜಗತ್ತಿನ 71 ಶೇಕಡಾ ಪ್ರದೇಶವನ್ನು ಕಡಲು, ಮಹಾಕಡಲುಗಳು ಆವರಿಸಿಕೊಂಡಿವೆ. ಇದರಲ್ಲಿ ಜಗತ್ತಿನ 97.2 ಶೇಕಡಾ ನೀರು ಇದೆ. ಇದೆಲ್ಲ ಉಪ್ಪು ನೀರು. ಅಷ್ಟೇ ಅಲ್ಲ ಮಳೆಗಾಲ ಮುಗಿದ ಬಳಿಕ ಬೇಗನೆ ಉಬ್ಬರದ ಕಾರಣಕ್ಕೆ ಕಡಲ ನೀರು ನದಿಗೆ ನುಗ್ಗುತ್ತವೆ. ಹಾಗಾಗಿ ಕಡಲ ಕಡೆಯಿಂದ ನದಿಯಲ್ಲು ಕೆಲವು ಕಿಮೀವರೆಗೆ ಉಪ್ಪು