Home Archive by category ಕರಾವಳಿ (Page 27)

ಬಿಜೆಪಿ ಕಾಪು ಮಂಡಲ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರ

ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ “ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಸಭೆಯಲ್ಲಿ ಶಾಸಕರು ಮಾತನಾಡಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಯಶಸ್ವಿ ಯೋಜನೆಗಳಿಂದ

ಕಿರಿಮಂಜೇಶ್ವರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ನಡೆದ ಪೆÇೀಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶ ಆಹಾರಗಳ ಬಗ್ಗೆ ಮಾಹಿತಿ ಶಿಬಿರ ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪ ನಾಗೂರಿನಲ್ಲಿಸಂಭ್ರಮದಿಂದ ನಡೆಯಿತು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ ಕಾರ್ಯಕ್ರಮನ ಉದ್ಘಾಟಿಸಿ ಮಾತನಾಡಿ ನಮ್ಮ ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತಲ

ಮಂಗಳೂರು: ಇ-ಸಿಗರೇಟ್ ಅಕ್ರಮ ಮಾರಾಟ: ಸೊತ್ತು ಸಹಿತ ಮೂವರ ಬಂಧನ

ನಗರದ ಲಾಲ್‌ಬಾಗ್‌ನಲ್ಲಿರುವ ಕಾಂಪ್ಲೆಕ್ಸ್‌ವೊಂದರ ಅಂಗಡಿಯಲ್ಲಿ ಇ-ಸಿಗರೇಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9,72,745 ರೂ.ಮೌಲ್ಯದ ಇ-ಸಿಗರೇಟ್ ಮತ್ತಿತರ ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿಯ ಮಾಲಕ ಶಿವು ದೇಶಕೋಡಿ, ಬಂಟ್ವಾಳ ತಾಲೂಕಿನ ಸಂತೋಷ್, ಕುದ್ರೋಳಿಯ ಇಬ್ರಾಹಿಂ ಯಾನೆ ಇರ್ಷಾದ್ ಬಂಧಿತ ಆರೋಪಿಗಳಾಗಿದ್ದಾರೆ. ಆಮಂತ್ರಣ ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತ

ಕಾರ್ಕಳ: ದನ ಕಳ್ಳತನ ಪ್ರಕರಣ: ಇಬ್ಬರ ಬಂಧನ

ಕಾರ್ಕಳ ಹಿರ್ಗಾನ ತುಂಬೆ ಹಿತ್ಲು ನಲ್ಲಿ ನಡೆದ ದನ ಕಳ್ಳತನ ಪ್ರಕರಣ ದಲ್ಲಿ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧನ ಮಾಡಿದ್ದಾರೆ.ಹಿರ್ಗಾನದ ದಿವಾಕರ ಆಚಾಟರ್ಯ ಪ್ರಾಯ ೪೫ದೇವಿಕೃಷಾ ಹೌಸ್ ತುಂಬೆಹಿತ್ಲು ಹಿರ್ಗಾನ ಗ್ರಾಮ ಇವರ ಮನೆಯ ದನಗಳನ್ನು ಈ ಕಳ್ಳರು ಕಳ್ಳತನ ಮಾಡಿ ಮಾಂಸ ಮಾಡಿದ್ದರು ಸಾರಾಂಶ :ಅಕ್ಟೋಬರ್ ೩ರಂದು ಬೆಳಿಗ್ಗೆ ಸುಮಾರು ೯:೦೦ ಗಂಟೆಗೆ ೩೫,೦೦೦/- ರೂ ಮೌಲ್ಯದ ಫಿರ್ಯಾಧುದಾರರಿಗೆ ಸೇರಿದ ಗೀರ್ ತಳಿಯ ಕೆಂಪು ಬಣ್ಣದ ದನವನ್ನು ಅವರ ವಾಸದ ಮನೆಯಾದ ಕಾರ್ಕಳ

ಮೂಡುಬಿದಿರೆ ಹೆಗ್ಗಡೆ ಮಹಿಳಾ ಸಂಘದ ಅಧ್ಯಕ್ಷರಾಗಿ ಚೇತನಾ ರಾಜೇಂದ್ರ ಹೆಗ್ಡೆ, ಕಾರ್ಯದರ್ಶಿಯಾಗಿ ಸುಷ್ಮಾ ಸುರೇಶ್ ಹೆಗ್ಡೆ ಆಯ್ಕೆ

ಮೂಡುಬಿದಿರೆ:ಹೆಗ್ಗಡೆ ಮಹಿಳಾ ಸಂಘ ಮೂಡುಬಿದಿರೆ ವಲಯ ಇದರ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಕಾರ್ಯದರ್ಶಿಯಾಗಿ ಸುಷ್ಮಾ ಸುರೇಶ್ ಹೆಗ್ಡೆ ಅವಿರೋಧ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗಿಲ್ಲ ಇಎಸ್ಐ ಸೌಲಭ್ಯ : ಶಾಸಕ ಕಾಮತ್

ಕಾರ್ಮಿಕರ ಆರೋಗ್ಯ ವಿಮೆ (ಇಎಸ್ಐ) ಅಡಿಯಲ್ಲಿ ಚಿಕಿತ್ಸೆ ಪಡೆಯುವ ವಿಮೆದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವೈದ್ಯಕೀಯ ಸೌಲಭ್ಯ ಪಡೆಯುವಲ್ಲಿ ತೀವ್ರ ತೊಂದರೆಯಾಗುತ್ತಿದ್ದು ಇನ್ನೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು. ಇಎಸ್ಐ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಅವಧಿಯು ಕಳೆದ ಸಪ್ಟೆಂಬರ್ 30ನೇ

ಪ್ರಭಾಕರ ಕಿಲಂಗೋಡಿ ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾoಪ್ಕೋ ಸಹಾಯಧನ

ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬೆಳ್ಳಾರೆ ಶಾಖೆಯ ಸಕ್ರೀಯ ಸದಸ್ಯರಾದ  ಶ್ರೀ ಪ್ರಭಾಕರ ಕಿಲಂಗೋಡಿ ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾoಪ್ಕೋ ಸಹಾಯಧನದ ಮೊತ್ತ ರೂ.2,00,000/- (ರೂಪಾಯಿ ಎರಡು ಲಕ್ಷ)ವನ್ನು ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ ಮಡ್ತಿಲ ಇವರು ದಿನಾಂಕ: 07-10-2025 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ

ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಮ್ರಾನ್ ಮಂಜಿಲ್‌ ಬಂಧನ

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಕ್ರ 412/2004 U/s 143,147,148,323,427,506,149 ಐಪಿಸಿ ಪ್ರಕರಣದ ಹಾಗೂ ಮಾನ್ಯ 2 ನೇ ಸಿ.ಜೆ.ಎಂ ನ್ಯಾಯಾಲಯ ಮಂಗಳೂರು ಸಿ. ಸಿ ನಂಬ್ರ 12-2007 ರಲ್ಲಿ ಆರೋಪಿ ಅಲ್ತಾಪ್ ಪ್ರಾಯ 47 ವರ್ಷ ತಂದೆ : ಇಸ್ಮಾಯಿಲ್ @ ಮೊಹಮ್ಮದ್ ವಾಸ: 25-82, ಇಮ್ರಾನ್ ಮಂಜಿಲ್, ಎಮ್ ಜಿ ಎಮ್ -967, ಕಸಬ ಬೆಂಗ್ರೆ ಮಂಗಳೂರು ತಾಲೂಕು ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೆ […]

ಬೈಂದೂರು ಬಂಟರಯಾನೆ ನಾಡವರ ಸಂಘ ನೂತನ ಅಧ್ಯಕ್ಷರಾದ ಗೋಕುಲ್ ಶೆಟ್ಟಿ ಉಪ್ಪುಂದ ಪದಪ್ರದಾನ ಸಮಾರಂಭ

ಬೈಂದೂರು ಬಂಟರ ಯಾನೆ ನಾಡವರ ಸಂಘ ರಿ. ಇದರ ನೂತನ ಅಧ್ಯಕ್ಷರಾದ ಗೋಕುಲ್ ಶೆಟ್ಟಿ ಉಪ್ಪಂದ ಪ್ರದಪ್ರದಾನ ಸಮಾರಂಭಬೈಂದೂರು ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ.ಜೆ. ಸಭಾಭವನದಲ್ಲಿ ಸಂಭ್ರಮದಲ್ಲಿ ನಡೆಯಿತು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಸಮಾಜಕ್ಕಾಗಿ ಏನು ಮಾಡಿರುತ್ತೇವೆ ಅದು ಮಾತ್ರ ಶಾಶ್ವತವಾಗಿರುತ್ತದೆ. ಸಮುದಾಯದ ಏಳಿಗೆಗಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಇದರಿಂದ ಸಂಘಟನೆ

ಗಂಟಾಲ್ ಕಟ್ಟೆಯಲ್ಲಿ ಅನಧಿಕೃತ ಕಸಾಯಿಖಾನೆ : ಪೊಲೀಸರಿಂದ ದಾಳಿ, 50 ಕೆ. ಜಿ ಮಾಂಸ, 2 ಕಾರು ವಶಕ್ಕೆ

ಮೂಡುಬಿದಿರೆ : ಗಂಟಾಲ್ ಕಟ್ಟೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ನೇತೃತ್ವದ ತಂಡವು ದಾಳಿ ನಡೆಸಿ ಸುಮಾರು 50 ಕೆ.ಜಿ ದನದ ಮಾಂಸ, ಪರಿಕರಗಳು ಹಾಗೂ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ನಡೆದಿದೆ. ಗಂಟಾಲ್ ಕಟ್ಟೆಯ ಜಲೀಲ್ ಎಂಬವನ ಮನೆಯ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು