Home Archive by category ಕರಾವಳಿ (Page 371)

ಮಂಗಳೂರಿನಲ್ಲಿ ಜುವೆಲ್ಲರಿ ಶಾಪ್ ಗೆ ನುಗ್ಗಿ ವ್ಯಕ್ತಿಯ ಕೊಲೆ

ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ

ಪುತ್ತೂರು : ಕಾರಿಗೆ ಢಿಕ್ಕಿಯಾದ ನಾಯಿ ಕಾರಿನ ಬಂಪರಿನೊಳಗೆ ಪ್ರತ್ಯಕ್ಷ

ಕಾರಿಗೆ ಡಿಕ್ಕಿಯಾದ ನಾಯಿ ಕಾರಿನ ಬಂಪರಿನೊಳಗೆ ಪ್ರತ್ಯಕ್ಷವಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಎಂಬಲ್ಲಿ ನಡೆದಿದೆ.ಬಂಪರಿನೊಳಗೆ ಸಿಲುಕಿಕೊಂಡಿದ್ದ ಈ ನಾಯಿ ಸುಮಾರು 70 ಕಿಲೋಮೀಟರ್ ಸಾಗಿ ಯಾವುದೇ ಗಾಯಗಳಾಗದೆ ಆರಾಮವಾಗಿ ಬಂಪರ್ ಒಳಗಿನಿಂದ ಇಳಿದು ಹೋಗಿದೆ. ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ

ಫೆ.11ರಂದು ಪುತ್ತೂರಿಗೆ ಆಗಮಿಸಲಿರುವ ಕೇಂದ್ರ ಸಚಿವ ಅಮಿತ್ ಶಾ

ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೆÇ್ಕೀದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಪೂರಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಮತ್ತು ದ.ಕ ಎಸ್ಪಿ ಡಾ.ಅಮಟೆ ವಿಕ್ರಮ್‍ರವರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾವೇಶ

ಮಂಜೇಶ್ವರ: ಸಾರ್ವಜನಿಕ ಸ್ಥಳಗಳಲ್ಲಿ ತಂದು ತ್ಯಾಜ್ಯ ಸುರಿಯುತ್ತಿರುವ ವಿಚಾರ, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತು ವ್ಯಾಪ್ತಿಯ 5 ಹಾಗೂ 7ನೇ ವಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ. ಯತೀಂ ಖಾನ-ಗೇರುಕಟ್ಟೆ ರಸ್ತೆಯ ಅಂಬಿತ್ತಡಿ, ಹಾರ್ವಾರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಜನಸಂಚಾರವಿಲ್ಲದ ರಾತ್ರಿ ಸಮಯಗಳಲ್ಲಿ ಇಲ್ಲಿ ತ್ಯಾಜ್ಯಗಳನ್ನು ತಂದು ಹಾಕಲಾಗುತ್ತಿದೆ. ಸಾರ್ವಜನಿಕ ಸ್ಥಳ ಹಾಗೂ ರಸ್ತೆ ಬದಿಗಳಲ್ಲಿ ವ್ಯಾಪಕವಾಗಿ ತ್ಯಾಜ್ಯಗಳು

ಮುಲ್ಕಿ: ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಶ್ರೀ ದೇವರಿಗೆ ಪೂರ್ವಾಹ್ನ ಗಂಟೆ 10:25ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವಸ್ಥಾನದ ತಂತ್ರಿಗಳಾದ ಶಿವಪ್ರಸಾದ ತಂತ್ರಿ ,ವೇ.ಮೂ ಪಂಜ ಭಾಸ್ಕರ ಭಟ್ ಹಾಗೂ ಅರ್ಚಕ ಗೋಪಾಲ ಭಟ್ ಪೌರೋಹಿತ್ಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಿತು. ಬಳಿಕ ಮಹಾಪೂಜೆ, ಅವಸ್ಕೃತ ಬಲಿ ನಡೆಯಿತು. ಮಧ್ಯಾಹ್ನ ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ

ಹಳೆಯಂಗಡಿ : ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ

ಹಳೆಯಂಗಡಿ: ಗ್ರಾಮದ ಜನತೆಯ ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಸಾಕಷ್ಟು ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಪಡೆದುಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೊಟ್ಯಾನ್‌ ಹೇಳಿದರು. ಅವರು ಹಳೆಯಂಗಡಿ ಪಂಚಾಯತ್‌ ವತಿಯಿಂದ ಕೆಮ್ರಾಲ್, ಪಡುಪನಂಬೂರು, ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಬರುವ ಎಲ್ಲಾ ಗ್ರಾಮದವರಿಗೆ ವಿದ್ಯಾ ವಿನಾಯಕ ಯುವಕ ಮಂಡಲ ಸಭಾಭವನ

ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ

ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ ಎಂದು ಯಾಗಾಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾಗದ ಕಾರ್ಯಾಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಕೊಡೆತ್ತೂರು ಮಾತನಾಡಿ ವೇ.ಮೂ.ಸುಧೀರ್‌ ಭಟ್‌. ನೇತೃತ್ವದಲ್ಲಿ ವೇ.ಮೂ. ಕಾಶಿನಾಥ ಆಚಾರ್ಯ ಮಾರ್ಗದರ್ಶನದಲ್ಲಿ 50 ಮಂದಿ ಖುತ್ವಿಜರಿಂದ ಬೃಹತ್‌ ಕುಂಡದಲ್ಲಿ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ. ದಿನಂಪ್ರತಿ 5000ದಷ್ಟು ಮಂದಿ ಅನ್ನ ಪ್ರಸಾದ ಸ್ವೀಕರಿಸಲಿದ್ದು

ಮಂಗಳೂರು: ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ವಿಧಾತ್ರೀ ಕಲಾವಿದರಿಂದ ದೈವರಾಜೆ ಶ್ರೀ ಬಬ್ಬುಸ್ವಾಮಿ ನಾಟಕ ಪ್ರದರ್ಶನ

ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಪ್ರಯುಕ್ತ ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ವಿಧಾತ್ರೀ ಕಲಾವಿದೆರ್ ಕೈಕಂಬ-ಕುಡ್ಲ ಇವರು ಅಭಿನಯಿಸುವ ಭಕ್ತಿ ಪ್ರಧಾನ ತುಳು ನಾಟಕ ದೈವರಾಜೆ ಶ್ರೀ ಬಬ್ಬುಸ್ವಾಮಿ ಇಂದು (ಶುಕ್ರವಾರ) ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಟ, ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್

ಪುತ್ತೂರಿನ ಬೆಟ್ಟಂಪಾಡಿ ಕಾಲೇಜಿನ ಉಪನ್ಯಾಸಕ ಮಹೇಶ್ ಹೃದಯಾಘಾತದಿಂದ ನಿಧನ.

ಪುತ್ತೂರು: ಬೆಟ್ಟಂಪಾಡಿ ಪ.ಪೂ ಕಾಲೇಜಿನ ಉಪನ್ಯಾಸಕ ಮಹೇಶ್ ಎಂಬವರು ಫೆ. 3ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರ್ಲಡ್ಕ ನಿವಾಸಿಯಾಗಿರುವ ಮಹೇಶ್ ಅವರಿಗೆ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಆಸ್ಪತ್ರೆಗ ಕರೆತಂದಾಗ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಕೋಸ್ಟ್ ಗಾರ್ಡ್‍ನ ಸಂಸ್ಥಾಪನಾ ದಿನಾಚರಣೆ, ಸಮುದ್ರದಲ್ಲಿ ನಡೆದ ಅಣುಕು ಕಾರ್ಯಾಚರಣೆ

ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸಿದ ಶತ್ರು ದೇಶದ ನುಸುಳುಕೋರರನ್ನು ಹಿಮ್ಮೆಟ್ಟಿಸಲಾಯಿತು. ನೀರಲ್ಲಿದ್ದವರಿಗೂ ಮಿಷನ್ ಗನ್ ನಲ್ಲಿ ಫಯರ್ ಮಾಡೋ ಮೂಲಕ ಓಡಿಸಲಾಯಿತು. ಬೆಂಕಿ ಹತ್ತಿಕೊಂಡ ಸೇನಾ ಬೋಟ್‍ಗೆ ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು.ಇದೆಲ್ಲಾ ನಮ್ಮ ಕರಾವಳಿಯ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ನಡೆದ ಕಾರ್ಯಾಚರಣೆ.ಹಾಗಾದ್ರೆ ಅಲ್ಲಿ ಏನಾಯ್ತು