Home Archive by category ಕರಾವಳಿ (Page 41)

ಉಳ್ಳಾಲ:ರೈಲು ಢಿಕ್ಕಿ ಹೊಡೆದು ಯುವಕ ಸಾವು

ಉಳ್ಳಾಲ: ಫೆ.14 ರಂದು ಸೌದಿಗೆ ತೆರಳಬೇಕಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಎಂಬವರ ಪುತ್ರ ಜಾಫರ್ (23) ಮೃತರು. ನಿನ್ನೆ ಸಂಜೆ ವೇಳೆ ಮನೆ ಕಡೆಗೆ ತೆರಳಲು ರೈಲ್ವೇ ಹಳಿಯನ್ನು ದಾಟುವ

ಅಧಿಕಾರಿಗಳು ಒಂದೇ ವೇದಿಕೆ ಕುಳಿತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ : ಶಾಸಕಿ ಭಾಗೀರಥಿ ಮುರುಳ್ಯ

ಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಇಂತ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಕುರಿತು ಸಮಸ್ಯೆ ಪರಿಹರಿಸುವಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ‌ ಬರೆದಿರುವುದು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಂಟೀ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಲ್ಲಮೊಗ್ರದಲ್ಲಿ ನಡೆದ ಪತ್ರಕರ್ತರ  ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಕಾಪು: ಟೆಂಪೊ ಪಲ್ಟಿ : ಸಂಚಾರ ಅಸ್ತವ್ಯಸ್ತ

ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ಟೆಂಪೋವೊಂದು ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ಕೊಪ್ಪಲಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಡ್ಡ ಬಿದ್ದಿದ್ದು ಇದರಿಂದಾಗಿ ಟೆಂಪೋದಲ್ಲಿದ್ದ ಸಾಮಾಗ್ರಿಗಳು ರಸ್ತೆಗೆ ಅಡ್ಡ ಬಿದ್ದಿವೆ. ಟೆಂಪೋ ಕೂಡ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು,

ಮೂಡುಬಿದಿರೆ: “ಬೇಟಿ ಬಚಾವೋ ಭೇಟಿ ಪಢಾವೋ” ಜಾಗೃತಿ ಜಾಥಾ ಅರಿವು ಕಾರ್ಯಕ್ರಮ, ಸನ್ಮಾನ

ಮೂಡುಬಿದಿರೆ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ ಇವುಗಳ ಆಶ್ರಯದಲ್ಲಿ “ಬೇಟಿ ಬಚಾವೋ ಬೇಟಿ ಪಡಾವೋ” ಕಾರ್ಯಕ್ರಮದಡಿ ಜಾಗೃತಿ ಜಾಥಾ, ಅರಿವು ಕಾರ್ಯಕ್ರಮ ಹಾಗೂ ಸಾಧನೆ ಮಾಡಿದ ಹೆಣ್ಣು ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು. ಮೂಡುಬಿದಿರೆ ತಾಲೂಕು ಉಪ ತಹಶೀಲ್ದಾರ್ ರಾಮ್ ಅವರು ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ನೋಟರಿ ವಕೀಲೆ ಶ್ವೇತಾ

ರಾಷ್ರ್ಟೀಯ ಜಂತು ಹುಳ ನಿರ್ಮೂಲನಾ ದಿನ – ಫೆಬ್ರವರಿ 10

ಪ್ರತೀ ವರ್ಷ ಫೆಬ್ರವರಿ 10ರಂದು ರಾಷ್ರ್ಟೀಯ ಜಂತು ಹುಳ ನಿರ್ಮೂಲನ ದಿನ ಎಂದು ಆಚರಿಸಿ ಜಂತು ಹುಳಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ವತಿಯಿಂದ ಈ ಆಚರಣೆ ತರಲಾಗಿದ್ದು ದೇಶದಲ್ಲಿನ ಪ್ರತಿಯೊಬ್ಬ ಮಗುವೂ ಕೂಡಾ ಜಂತು ಹುಳಗಳ ಕಾಟದಿಂದ ವಿಮುಖ್ತಿಗೊಳಿಸುವ ಮಹದಾಶೆÉಯನ್ನು ಈ ಆಚರಣೆ ಹೊಂದಿದೆ. ಇದೊಂದು ದೇಶದ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಲಕ್ಷಾಂತರ ಮಕ್ಕಳನ್ನು ಏಕಕಾಲಕ್ಕೆ

ಕೊಲೆಸ್ಟ್ರಾಲ್‍ಗೆ ಬಂದಿದೆ ಬ್ರಹ್ಮಾಸ್ತ್ರ

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಹಠಾತ್ ಹೃದಯಾಘಾತ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಧೂಮಪಾನ ಮದ್ಯಪಾನ ಮಿಶ್ರಿತ ಮೋಜಿನ ಜೀವನಶೈಲಿ, ಅನಿಯಂತ್ರಿತ ಹಾಗೂ ಅಸಮರ್ಪಕ ಆಹಾರ, ದೈಹಿಕ ವ್ಯಾಯಾಮವಿಲ್ಲದ ಆಲಸೀ ಜೀವನ, ಕೆಲಸದ ಒತ್ತಡ, ಜಂಕ್ ಆಹಾರ ಸೇವನೆ ಹಾಗೂ ಇನ್ನಿತರ ಕಾರಣಗಳಿಂದ ಹದಿಹರೆಯದ ಮಕ್ಕಳಲ್ಲಿ ಮತ್ತು ಯುವಕರ ಕೊಲೆಸ್ಟ್ರಾಲ್ ಪ್ರಮಾಣ ಏರುತ್ತಲೇ ಇದೆ. ಈ ಹೆಚ್ಚಿದ ಕೊಲೆಸ್ಟ್ರಾಲ್ ನಮ್ಮ ಹಿತಶತ್ರು ಆಗಿದ್ದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು

ಆಂಕೈಲೋಗ್ಲೋಸಿಯಾ (ನಾಲಿಗೆ ಕಟ್ಟು)

ನಾಲಿಗೆ ಕಟ್ಟು ಅಥವಾ ಆಂಖೈಲೋಗ್ಲೋಸಿಯಾ ಎನ್ನುವುದು ಒಂದು ಜನ್ಮ ಜಾತವಾಗಿ ಕಂಡು ಬರುವ ವಿಶೇಷ ಸನ್ನಿವೇಶವಾಗಿದ್ದು, ಮಗುವಿನ ನಾಲಿಗೆಯನ್ನು ಚಲನೆಯನ್ನು ಅದು ನಿಯಂತ್ರಿಸುತ್ತದೆ. ಇದನ್ನು ಆಂಗ್ಲಭಾಷೆಯಲ್ಲಿ ಟಂಗ್ ಟೈ ಅಂತಲೂ ಕರೆಯುತ್ತಾರೆ. ನಾಲಿಗೆ ತಳಭಾಗದಲ್ಲಿ ಬಾಯಿಯ ಬಾವಿಗೆ ನಾಲಗೆಯನ್ನು ಹಿಡಿದಿಟ್ಟುಕೊಂಡು ನಾಲಗೆ ಸರಾಗವಾಗಿ ಚಲಿಸದಂತೆ ನಿಯಂತ್ರಿಸುತ್ತದೆ. ಈ ರೀತಿ ನಾಲಿಗೆಯ ಚಲನೆ ಸರಾಗವಾಗಿ ಆಗದಿದ್ದಲ್ಲಿ ಮುಂದೆ ಮಾತನಾಡುವಾಗ ತೊದಲುವಿಕೆ ಉಂಟಾಗುವ

ಸರಣಿ ಹಲ್ಲು ಕೀಳುವಿಕೆ

ಸರಣಿ ಹಲ್ಲು ಕೀಳುವಿಕೆ ಎನ್ನುವುದು ಒಂದು ವಿಶೇಷವಾದ ಪೂರ್ವ ನಿರ್ಧಾರಿತ ಹಲ್ಲು ಕೀಳುವಿಕೆಯಾಗಿದ್ದು, ನಿಗದಿತವಾದ ಕ್ರಮಾಂಕದಲ್ಲಿ ನಿಗದಿತ ಹಲ್ಲುಗಳನ್ನು ನಿರ್ದಿಷ್ಟ ಸಮಯದಲ್ಲಿ ಕಿತ್ತು, ಮುಂದೆ ಬರಲಿರುವ ಶಾಶ್ವತ ಹಲ್ಲುಗಳಿಗೆ ಸರಿಯಾದ ಜಾಗ ಮಾಡಿಕೊಡುವ ವಿಶೇಷ ಪ್ರಕ್ರಿಯೆಯಾಗಿರುತ್ತದೆ. ಸ್ವೀಡನ್ ದೇಶದ ಕೆಲ್‍ಗ್ರೇನ್ ಎಂಬಾತ ಮೊದಲ ಬಾರಿಗೆ ಸೀರಿಯಲ್ ಎಕ್ಟ್ರಾಕ್ಷನ್ ಎಂಬ ಪದ ಬಳಸಿದವನು. ಮುಂದೆ 1940 ರಲ್ಲಿ ಅಮೇರಿಕಾದಲ್ಲಿ ಹೇಸ್ ನಾನ್ಸ್ ಎಂಬಾತ ಇದನ್ನೆ ಯೋಜಿತ

ಕೀಟೋ ಡಯಟ್

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು

ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರು ತಾಲೂಕಿನ ಬಜ್ಪೆ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವರಾಮ್ ಪೂಜಾರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ,ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ,ಶೇಖರ್ ಪೂಜಾರಿ,ಗಂಗಾಧರ ಪೂಜಾರಿ,ಬಜ್ಪೆ ಯುವವಾಹಿನಿ ಘಟಕದ