ಉಳ್ಳಾಲ:ರೈಲು ಢಿಕ್ಕಿ ಹೊಡೆದು ಯುವಕ ಸಾವು
ಉಳ್ಳಾಲ: ಫೆ.14 ರಂದು ಸೌದಿಗೆ ತೆರಳಬೇಕಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಎಂಬವರ ಪುತ್ರ ಜಾಫರ್ (23) ಮೃತರು. ನಿನ್ನೆ ಸಂಜೆ ವೇಳೆ ಮನೆ ಕಡೆಗೆ ತೆರಳಲು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ ಬಂದಿದ್ದ ಜಾಫರ್, ಸೌದಿ ವೀಸಾ ಬಂದಿರುವ ಹಿನ್ನೆಲೆಯಲ್ಲಿ ಫೆ.14 ರಂದು ಸೌದಿ ರಾಷ್ಟ್ರಕ್ಕೆ ಉದ್ಯೋಗದ ನಿಮಿತ್ತ ತೆರಳುವವರಿದ್ದರು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.