Home Archive by category ಕರಾವಳಿ (Page 421)

ಬಜಾಜ್ ಕ್ಯೂಟ್ ಆಟೋ ಟ್ಯಾಕ್ಸಿ ಮಾರುಕಟ್ಟೆಗೆ ಬಿಡುಗಡೆ

ಮಂಗಳೂರು: ಬಜಾಜ್ ಕ್ಯೂಟ್ ಆಟೋ ಟ್ಯಾಕ್ಸಿಯನ್ನು ಸೋಮವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತಾಡಿದ ಬಜಾಜ್ ಆಟೋ ಲಿಮಿಟೆಡ್ ಇದರ ಅಧ್ಯಕ್ಷ ಸಮರ್ ದೀಪ್ ಸುಭಂಧ್ ಅವರು, “ಬಜಾಜ್ ಕ್ಯೂಟ್ ದೇಶದ ಮೊದಲ ಆಟೋ ಟ್ಯಾಕ್ಸಿ ಆಗಿದ್ದು ಇದನ್ನು ಈಗಾಗಲೇ ಪಡೆದಿರುವ ಗ್ರಾಹಕರು ಮತ್ತು ಪ್ರಯಾಣಿಕರು ಖುಷಿಯಿಂದ

ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು

ವಿಟ್ಲ: ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯನಡ್ಕದ ಸಾಯ ಎಂಬಲ್ಲಿ ನಡೆದಿದೆ. ನಾರಾಯಣ ನಾಯ್ಕ ಅವರ ಪುತ್ರ ಜತೇಶ್ (7 ವ) ಮೃತ ಬಾಲಕ. ವ್ಯಕ್ತಿಯೋರ್ವರು ಹಂದಿ ಹಿಡಿಯಲು ಅಕ್ರಮವಾಗಿ ಗದ್ದೆಯಲ್ಲಿ ವಿದ್ಯುತ್ ಅಳವಡಿಸುರುವುದೇ ಘಟನೆಗೆ ಕಾರಣವೆಂದು ಆರೋಪಿಸಿರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೆÇಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಾಗರಿಕರು

ರಾಂಕ್ ಸ್ಟೂಡೆಂಟ್ ಕಡಿಮೆ ಮಾರ್ಕ್ ಬಂದಿದ್ದಕ್ಕೆ ಆತ್ಮಹತ್ಯೆ

ರಾಂಕ್ ಸ್ಟೂಡೆಂಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ ಪಡೆದಳೆಂದು ಕಾಲೇಜಿನಲ್ಲಿ ಅವಮಾನಿಸಿದ್ದಕ್ಕೆ ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಪೆರ್ಡೂರಿನಲ್ಲಿ ನಡೆದಿದೆ. ಪೆರ್ಡೂರು ನಿವಾಸಿ ಸುರೇಶ್ ಮೆಂಡನ್ ಪುತ್ರಿ ತೃಪ್ತಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಖಾಸಗಿ ಸಂಸ್ಥೆಯಲ್ಲೇ ಪ್ರೌಢಶಿಕ್ಷಣ ಪಡೆದು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಿನ್ನೆಲೆ ಪಿಯುಸಿ ವಿಜ್ಞಾನ

ಕೊರಗ ಕುಟುಂಬಗಳಿಗೆ ಮನೆ ನಿವೇಶನ ಹಸ್ತಾಂತರಿಸಲು ಆಗ್ರಹಿಸಿ ಪಾದಯಾತ್ರೆ

ಈ ನೆಲದ ಮೂಲನಿವಾಸಿಗಳಾಗಿ ಒಂದೊಮ್ಮೆ ಸಮಸ್ತ ಭೂಮಿಯ ಒಡೆಯರಾಗಿದ್ದ ಕೊರಗ ಕುಟುಂಬ ನೆಲೆ ಇಲ್ಲದೆ ಪರಿತಪಿಸಬೇಕಾಗಿದೆ. ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿ ಬಂದುದು ನಮ್ಮ ವ್ಯವಸ್ಥೆಯ ಸೋಲು ಎಂದು ಖ್ಯಾತ ಜಾನಪದ ವಿದ್ವಾಂಸಕರೂ, ಪಗತಿಪರ ಚಿಂತಕರೂ ಆದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ ಪಟ್ಟರು.ಅವರು ಮಂಗಳೂರಿನ ವಾಮಂಜೂರು ಜಂಕ್ಷನ್‍ನಲ್ಲಿ ಆದಿವಾಸಿ ಕೊರಗ ಕುಟುಂಬಗಳಿಗೆ 2018ರಲ್ಲಿ ಮಂಜೂರಾತಿ ಆದ 33

ಮೂಡುಬಿದರೆ : ಭಯೋತ್ಪಾದನೆ, ಲವ್ ಜಿಹಾದ್ ವಿರೋಧಿಸಿ ಪ್ರತಿಭಟನೆ

ಮೂಡುಬಿದಿರೆ: ಭಯೋತ್ಪಾದನೆ ಹಾಗೂ ಲವ್ ಜಿಹಾದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ – ಬಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.ವಿಶ್ವ ಹಿಂದು ಪರಿಷತ್ ನ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದೇಶಾದ್ಯಂತ ಬಾಂಬನ್ನು ಸ್ಫೋಟಿಸಿ ಸಮಾಜದಲ್ಲಿ ಭಯವನ್ನು ನಿರ್ಮಿಸುವ ಕೆಲಸವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಇಂದು ಭಯೋತ್ಪಾದನೆ ಎಂಬುದು ಕರಾವಳಿಗೆ

ಇತಿಹಾಸ ಪ್ರಸಿದ್ಧ ನಾವುಂದ ಕಂಬಳ ಮಹೋತ್ಸವ

ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ನಾವುಂದ ಕಂಬಳ ಮಹೋತ್ಸವವು ಸಂಭ್ರಮದಲ್ಲಿ ನಡೆಯಲಿರುವುದು. ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಗುತ್ತದೆ ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ ಅಲಂಕಾರಿಸಲಾಗುತ್ತದೆ . ಹಲವಾರು ವರ್ಷಗಳಿಂದ ಕಂಬಳವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ವೆಂಕಟರಮಣ ಗಾಣಿಗ ನಾವುಂದ ಅವರ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.ಈ ಬಾರಿ ಸೆನ್ಸಾರ್ ಮೂಲಕ ಕೋಣದ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ, ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ನಟ ರಿಷಬ್ ಶೆಟ್ಟಿ ಸಹಿತ ಕಾಂತಾರ ಚಿತ್ರ ತಂಡ ಆಗಮನ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಡಿಸೆಂಬರ್ 4 ರಂದು ಭಾನುವಾರ ಸಂಜೆ 4 ಗಂಟೆಗೆ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕ, ನಟ

ಮಂಗಳೂರು: ಇನ್ಸ್‌ಪೆಕ್ಟರ್ ಶ್ಯಾಮ್‌ಸುಂದರ್ ವರ್ಗಾವಣೆ

ಮಂಗಳೂರು ಎಸಿಬಿಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ಯಾಮ್‌ಸುಂದರ್ ಅವರನ್ನು ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಗೊಳಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಎಂದು ಸರ್ಕಾರವೇ ಆದೇಶ ಹೊರಡಿಸಿದ್ದು ಈ ಹಿನ್ನೆಲೆ ಅವರನ್ನು ಟ್ರಾನ್ಸ್‌ಫರ್ ಮಾಡಲಾಗಿದ ಸಿಸಿಬಿ ಇನಸ್‌ಪೆಕ್ಟರ್ ಆಗಿದ್ದ ಮಹೇಶ್‌ಪ್ರಸಾದ್ ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

ಡಿ. 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇಲ್ಲ : ದ.ಕ. ಜಿಲ್ಲಾಧಿಕಾರಿ ಆದೇಶ

ಮಂಗಳೂರು : ವಿವಾದದ ಕೇಂದ್ರ ಬಿಂದು ಸುರತ್ಕಲ್ ಟೋಲ್ ರದ್ದುಗೊಳಿಸಿ ಈಗಾಗಲೇ  ಹೆದ್ದಾರಿ ಸಚಿವಾಲಯ ಆದೇಶಿಸಿದ ಬೆನ್ನಲೇ ಡಿಸೆಂಬರ್  1 ರಿಂದ ಸುರತ್ಕಲ್‌ನಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸುರತ್ಕಲ್ ಟೋಲನ್ನು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ವಿಲೀನಗೊಳಿಸಿರುವುದನ್ನು ಮುಂದಿಟ್ಟು ಜಿಲ್ಲಾಧಿಕಾರಿಯವರು ಈ ಆದೇಶ ಮಾಡಿದ್ದಾರೆ. ಈ ಆದೇಶದನ್ವಯ ಡಿಸೆಂಬರ್

ಎನ್‌ಎಸ್‌ಯುಐ ವತಿಯಿಂದ ಡಿ.1ರಿಂದ ಕ್ಯಾಂಪಸ್ ಗೇಟ್ ಮೀಟ್

ಮಂಗಳೂರು, ನ. 28: ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವರಿಗೆ ನೆರವು, ಸಹಕಾರ ನೀಡುವ ನಿಟ್ಟಿನಲ್ಲಿ ಎನ್‌ಎಸ್‌ಯುಐ ವತಿಯಿಂದ ಡಿ.1ರಿಂದ ಕ್ಯಾಂಪಸ್ ಗೇಟ್ ಮೀಟ್ ಆಯೋಜಿಸಲಾಗಿದೆ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದ್ದಾರೆ. ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡುವ ಎನ್‌ಎಸ್‌ಯುಐ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಫಾರಂ ನೀಡಿ ಅದರಲ್ಲಿ ಸಮಸ್ಯೆಗಳನ್ನು ಬರೆದು ತಿಳಿಸುವಂತೆ ಸೂಚಿಸಲಿದ್ದಾರೆ. ಬಳಿಕ