ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಜುಲೈಯಲ್ಲಿ ನಡೆಸಿದ ಅಖೀಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ರುಥ್ ಕ್ಲೇರ್ ಡಿ’ಸಿಲ್ವ ಅವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ನಗರದ ಮಲ್ಲಿಕಟ್ಟೆ ನಿವಾಸಿ ರುಥ್ ಅವರು ರೋಸಿ ಮರಿಯಾ ಡಿ’ಸಿಲ್ವ ಮತ್ತು ರಫೆರ್ಟ್ ಡಿ’ಸಿಲ್ವ ಅವರ ಪುತ್ರಿ. ನಗರದ ಸಂತ ತೆರೆಸಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ಮಂಗಳೂರು ವಿ.ವಿ.ಯಿಂದ ದೂರ
ದ.ಕ. ಜಿಲ್ಲೆಯು ಕೋವಿಡ್ ವಿರುದ್ಧದ ಲಸಿಕೀಕರಣದಲ್ಲಿ ರಾಜ್ಯದಲ್ಲಿ ಪ್ರಸಕ್ತ 4ನೆ ಸ್ಥಾನದಲ್ಲಿದ್ದು, ಸೆ. 17ರಂದು ಮೆಗಾ ಲಸಿಕಾ ಮೇಳದ ಮೂಲಕ 1.50 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಶೇ. 80ರಷ್ಟು ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ. ಸುಮಾರು 56,000 ಮಂದಿ ಪ್ರಸಕ್ತ ಎರಡನೆ ಡೋಸ್ ಪಡೆಯಲು ಅರ್ಹತೆ
ಕೊರೊನಾದೊಂದಿಗೆ ನಿಫಾ ವೈರಸ್ ಮತ್ತಷ್ಟು ಆತಂಕ ತಂದೊಡ್ಡಿದ್ದು, ಇದೀಗ ಕಾರವಾರದ ವ್ಯಕ್ತಿಯೊಬ್ಬಗೆ ಸೋಂಕಿನ ಕೆಲ ಲಕ್ಷಣ ಕಂಡು ಬಂದಿದೆ. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರವಾರದ ವ್ಯಕ್ತಿ ಗೋವಾದ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದು, ಆತನಿಗೆ ನಿಫಾ ಸೋಂಕಿನ ಶಂಕೆ ಇಲ್ಲದಿದ್ದರೂ ನಿರ್ಲಕ್ಷ ಮಾಡಲು
80 ವರ್ಷದ ಆಸ್ಕರ್ ಫೆರ್ನಾಂಡಿಸ್ ( ಮಾರ್ಚ್ 27, 1941 ) ಇನ್ನಿಲ್ಲವೆಂಬ ಸುದ್ದಿ ತಲುಪಿದಾಗ ಕಾಲನ ಚಕ್ರಗಳು ಹಿಂದಕ್ಕೆ ಸರಿಯತೊಡಗಿದುವು. ದೇವರಾಜು ಅರಸು ಕಾಲದಲ್ಲಿ ಕರಾವಳಿಯ ಹಿಂದುಳಿದ ವರ್ಗದಿಂದ ಮೇಲೆದ್ದು ಬಂದ ಶ್ರೀಗಳಾದ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯಿಲಿ ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಕೊನೆಯವರೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿಯೇ ಉಳಿದರು. ಈ ತ್ರಿಮೂರ್ತಿಗಳಲ್ಲಿ ಆಸ್ಕರ್ ಫೆರ್ನಾಂಡಿಸ್
ಮಂಗಳೂರು ನಗರದ ಕಂಕನಾಡಿಯ ಸೇರಾವೋ ರಸ್ತೆ ಕಂಪೌಂಡ್‌ನಲ್ಲಿ ಪತಿಯೇ ಪತ್ನಿ ಮತ್ತು ಪುತ್ರನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕಂಕನಾಡಿ ಸೇರಾವೋ ರಸ್ತೆ ಕಂಪೌಂಡ್ ನಿವಾಸಿ ರಮೇಶ್ ಬಂಗೇರಾ (54) ಎಂಬುವವರು ಪ್ರಕರಣದ ಆರೋಪಿ. ಬೇಬಿ ಕುಂದರ್ ಮತ್ತು ಅಶ್ವಿನ್ ಹಲ್ಲೆಗೊಳಗಾಗಿದ್ದಾರೆ. ಬೇಬಿ ಕುಂದರ್ ಅವರು ತನ್ನ ಗಂಡ ರಮೇಶ್ ಬಂಗೇರಾ ಮತ್ತು ಮಗ ಅಶ್ವಿನ್ ಜತೆಯಲ್ಲಿ ವಾಸವಾಗಿದ್ದರು. ಸೆ.11ರಂದು ರಾತ್ರಿ 10:30ಕ್ಕೆ ಗಂಡ ರಮೇಶ್ ಬಂಗೇರಾ
ಆಸ್ಕರಣ್ಣ ತೀರಿಕೊಂಡಿದ್ದಾರೆ. ಅವರನ್ನು ಕಾಣುವುದು ಇನ್ನು ಸಾಧ್ಯವಾಗುವುದೇ ಇಲ್ಲ. ನಮಗೆ ಕಾಣದ ದೂರದ ಲೋಕಕ್ಕೆ ಹೋಗಿದ್ದಾರೆ. ಈ ಪರಿಸ್ಥಿತಿ ಬರಬಹುದು ಎಂದೂ ಯೋಚಿಸಿರಲಿಲ್ಲ ; ಒಂದು miracle ಆಗಬಹುದೆಂದು ದಿನಗಳನ್ನು ಎದುರಿಸುತ್ತಿದ್ದೆವು. ಅವರ ಬದುಕು, ರಾಜಕೀಯ ಅನುಭವಗಳು ಒಂದು ತೆರೆನ ವಿಶಿಷ್ಟವಾದವು. ಬುದ್ದನಂತಹ, ಯೇಸುವಿನಂತಹ, ಗಾಂಧಿಯಂತಹ ವ್ಯಕ್ತಿ ಆಸ್ಕರಣ್ಣ ರಾಗಿದ್ದರು. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ನಷ್ಟವಲ್ಲ ಅದು ಇಡೀ
ನನಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡಿದ ಮಹಾನ್ ನಾಯಕ ಅಗಲಿದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂತಾಪ ಸೂಚಿಸಿದ್ದಾರೆ. ಉಡುಪಿ, ದ.ಕ ಜಿಲ್ಲೆಗೆ ಆಸ್ಕರ್ ಫೆರ್ನಾಂಡಿಸ್ ಅವರ ಕೊಡುಗೆ ಅಪಾರ. ನಾನು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರು. ಜಿಲ್ಲೆಯಲ್ಲಿ ಸಾಕಷ್ಟು ನಾಯಕರನ್ನು ಹುಟ್ಟುಹಾಕುವ ಕೆಲಸ ಮಾಡಿದ್ದಾರೆ. ಅಜಾತಶತ್ರು ಆಸ್ಕರಣ್ಣನ ಅಗಲುವಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ
ಉಡುಪಿ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಕೇಂದ್ರದ ಮಾಜಿ ಸಚಿವ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಉಡುಪಿಗೆ ಕರೆತರಲಾಯಿತು. ಪಾರ್ಥಿವ ಶರೀರದ ಜೊತೆಗೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಆಗಮಿಸಿದರು. ಬಳಿಕ ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ಚರ್ಚ್ ಹಾಲ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಹಿರಿಯ ಕಾಂಗ್ರೆಸ್ ಮುಖಂಡ ಅಸ್ಕರ್ ಫೆರ್ನಾಂಡೀಸ್ ರವರಿಗೆ ಉಡುಪಿಯ. ಶೋಕಾ ಮಾತಾ ಚರ್ಚ್ ನಲ್ಲಿ ಬಲಿ ಪೂಜೆ ಹಾಗೂ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು. ಅಗಲಿದ ಅಸ್ಕರ್ ಫೆರ್ನಾಂಡೀಸ್‌ರ ಮೃತ ದೇಹವನ್ನು ಸಕಲ ಗೌರವಗಳೊಂದಿಗೆ ಉಡುಪಿಗೆ ಚರ್ಚ್‌ಗೆ ವಿಶೇಷ ವಾಹನದಲ್ಲಿ ತರಲಾಗಿತ್ತು. ಈ ಸಂಧರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಶಾಸಕ ಯುಟಿ ಖಾದರ್ ಐವನ್ ಡಿಸೋಜಾ, ಜೆ ಅರ್
ಪುತ್ತೂರು:ಪುತ್ತೂರಿನಲ್ಲಿ ಅಪ್ರಾಪ್ತರನ್ನು ಭಿಕ್ಷಾಟನೆಗೆ ಕಳುಹಿಸುವ ಮೂಲಕ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆಂಬ ದೂರಿನ ಮೇರೆಗೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯ ಅಧಿಕಾರಿಗಳು ನೆಲ್ಲಿಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸಂಗೀತ ಎಂಬ ಮಹಿಳೆಯು ಇತ್ತೀಚೆಗೆ ಬಿಸಿ ರೋಡ್‌ನಲ್ಲಿ ಮಗುವೊಂದಕ್ಕೆ ಹಲ್ಲೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದು ಅಲ್ಲಿ ದಾಳಿ


















