Home Archive by category ರಾಜ್ಯ (Page 34)

ಆಲೂರಿನಲ್ಲಿ ವ್ಯಕ್ತಿಯ ಮೇಲೆ ಕಾಡಾನೆ ದಾಳಿ

ಆಲೂರು ತಾಲೂಕಿನ ಪಾಳ್ಯ ಹೋಬಳಿ ನೀಡನೂರು ಗ್ರಾಮದ ದೇವರಾಜು ಎಂಬುವರನ್ನು 15 ದಿನದ ಹಿಂದೆ ಕಾಡಾನೆ ದಾಳಿ ಮಾಡಿ ಪ್ರಾಣಾಪಯದಿಂದ ಪಾರಾಗಿ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಅರಣ್ಯ ವಲಯ ಅಧಿಕಾರಿ ಮರಿಸ್ವಾಮಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ವಲಯ ಅಧಿಕಾರಿ ಮರಿಸ್ವಾಮಿಯವರು

ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ (Lohitashwa) ನಿಧನರಾಗಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇಂದು (ನವೆಂಬರ್ 8) ಅವರು ಕೊನೆಯುಸಿರು ಎಳೆದಿದ್ದಾರೆ. ಲೋಹಿತಾಶ್ವ ಅವರಿಗೆ 80 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರಿಗೆ ಇನ್ಫೆಕ್ಷನ್​ ಆಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನೇನು ಗುಣಮುಖರಾಗುತ್ತಾರೆ

ಸರ್ವ ಧರ್ಮ ಸಮ್ಮೇಳನ : ಧರ್ಮ ಸಾಗರದಲ್ಲಿ ಸೌಹಾರ್ದತೆಯ ಅಲೆಗಳಾಗಿ ಸಾಗೋಣ – ಮುನಿ ಶ್ರೀ ರಶ್ನಿ ಕುಮಾರ್ ಜೀ

ಬೆಂಗಳೂರು: ನ, 6: ವಿಜಯನಗರಜ ಅರ್ಹಂ ಭವನದಲ್ಲಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಬೆಸೆಯುವ ಸರ್ವ ಧರ್ಮ ಸಮ್ಮೇಳನ ಹಾಗೂ ಸರ್ವಧರ್ಮ ಆಧ್ಯಾತ್ಮಿಕ ಸ್ನೇಹ ಮಿಲನ-2022 ಕಾರ್ಯಕ್ರಮ ಸಂತಸ, ಸಡಗರದಿಂದ ನೆರವೇರಿತು. ಧರ್ಮ ಧರ್ಮಗಳ ನಡುವೆ, ಧಾರ್ಮಿಕ ಮುಖಂಡರ ಮಧ್ಯೆ ಪರಸ್ಪರ ಗೌರವ ನೀಡುವ, ಆಲಂಗಿಸಿಕೊಂಡು ಬೆನ್ನು ತಟ್ಟುವ, ಸಾಮರಸ್ಯದಲ್ಲಿ ನಿಮಗಿಂತ ನಾವೇ ಒಂದು ಹೆಜ್ಜೆ ಮುಂದೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಕಂಡು ಬಂತು. ಸಮ್ಮೇಳನದಲ್ಲಿ ವಿಶ್ವ ಮಾನವ ಸಂದೇಶ

ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದಲ್ಲಿರುವ ಯುವಕರು

ಮಂಜೇಶ್ವರ: ಜಗತ್ತಿನ ಮಲಯಾಳಿಗಳಿಗೆ ಕೇರಳದ ಬಗ್ಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಹಾಗೂ ಕೇರಳವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲಪ್ಪುರಂ ಜಿಲ್ಲೆಯ ಇಬ್ಬರು ಯುವಕರು ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದ ಹೆಸರಿನಲ್ಲಿ ಕೇರಳದ ಉತ್ತರ ಭಾಗವಾದ ಗಡಿನಾಡ ಪ್ರದೇಶಕ್ಕೆ ತಲುಪಿದ್ದಾರೆ. ಕೇರಳ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಹಾಗೂ ಅಲ್ಲಿನ ಭಾಷೆ, ಸಂಸ್ಕೃತಿ, ಅಭಿರುಚಿ, ವಿವಿಧ ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಮತ್ತಿತರ ಅಪರೂಪದ

ರಾಜ್ಯಮಟ್ಟದ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಆಚರಣೆ

ಬೆಂಗಳೂರು; ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈ ಯೋಜನೆಯಡಿ ಇರುವ ಉಜ್ವಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ನವೆಂಬರ್ 6 ರಂದು ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಕರ್ಮ ಕಾಷ್ಠಶಿಲ್ಪ ಅಧ್ಯಕ್ಷ ಎಮ್.ಜಿ. ನಾಗೇಶ್ ಆಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರದ

ಬಂಡೀಪುರ : ಜಿಂಕೆ ಮಾಂಸ ಸಹಿತ ಓರ್ವ ಆರೋಪಿಯ ಬಂಧನ

ಗುಂಡ್ಲುಪೇಟೆ ತಾಲೂೀಕಿನ ಬಂಡೀಪುರ ಹುಲಿ ಪ್ರದೇಶದ ಮದ್ದೂರು ವಲಯದ ನೇರಳೆ ಮರದ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಹೊತ್ತುಕೊಂಡು ಬರುತ್ತಿದ್ದ ವೇಳೆ ಅರಣ್ಯಾಧಿಕಾರಿಗಳಿ ದಾಳಿ ಮಾಡಿ ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ. ಮದ್ದೂರು ಕಾಲೋನಿಯ ಷಣ್ಮುಖ(35) ಬಂಧಿತ ಆರೋಪಿ. ಉಳಿದ ನಾಲ್ಕು ಮಂದಿ ಪರಾರಿಯಾಗಿದ್ದಾರೆ. ಮದ್ದೂರು ವಲಯದ ನೇರಳೆ ಮರದ ಅರಣ್ಯ ಪ್ರದೇಶದ ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಸಗೂರು , ಅರಣ್ಯ ರಕ್ಷಕ ನವೀನ ಹಾಗೂ ಸಿಬ್ಬಂದಿ

ರಾಜ್ಯೋತ್ಸವ ಪ್ರಶಸ್ತಿ- ಹೈಕೋರ್ಟ್ ಆದೇಶ ಪರಿಗಣಿಸದ ಸರ್ಕಾರ :ಹಿರಿಯ ಸಾಹಿತಿ ಬಿ.ವಿ. ಸತ್ಯನಾರಾಯಣ ರಾವ್

ಬೆಂಗಳೂರು, ಅ, 31: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಿದ್ದು, ಹೈಕೋರ್ಟ್ ಆದೇಶದಂತೆ ತಮ್ಮ ಹೆಸರನ್ನು ಪರಿಗಣಿಸುವಂತೆ ಹಿರಿಯ ಸಾಹಿತಿ ಬಿ. ವಿ. ಸತ್ಯನಾರಾಯಣ ರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ತಾವು ರಚಿಸಿರುವ 108 ಸಾಹಿತ್ಯ ಕೃತಿಗಳನ್ನು ಮುಂದಿಟ್ಟುಕೊಂಡು ನವೆಂಬರ್ 1 ರಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಗರದ ರವೀಂದ್ರ ಕಲಾಕ್ಷೇತ್ರದ ಮುಂಭಾಗ ಪ್ರತಿಭಟನೆ

ಅಂಬಿತ್ತಡಿ : ಶೆಡ್‍ನಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಅಂಬಿತ್ತಡಿ ಎಂಬಲ್ಲಿ ಶೆಡ್ಡ್‍ನಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ತನಕ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿಲ್ಲ. ಶೀಘ್ರದಲ್ಲೇ ಸುಸಜ್ಜಿತವಾದ ಅಂಗನವಾಡಿ ಕೇಂದ್ರ ನಿರ್ಮಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈಗಾಗಲೇ ಪಂಚಾಯತಿನಿಂದ ಫಂಡ್ ಮಂಜೂರಾಗಿದ್ದರೂ ಪಂಚಾಯತಿನ ಸ್ಥಳ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಊರವರಿಗೆ ಅಂಗನವಾಡಿಯ ಭಾಗ್ಯ ಲಭ್ಯವಾಗಲಿಲ್ಲ.

ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ..!

ಕೊಚ್ಚಿ : ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತೈಕುಡಂ ಬ್ರಿಗೇಡ್ ಸಂಸ್ಥೆ

ಗಂಧದ ಮರ ಕದಿಯಲು ಬಂದಿದ್ದ ಇಬ್ಬರ ಬಂಧನ: ಓರ್ವ ಸಾವು

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲಾಖೆಯ ಕಲ್ಲುಹೊಳ ಕೋಟೆಯ ಆನೆ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿ ಶವ ಪತ್ತೆಯಾಗಿದೆ. ರಾತ್ರಿ ಗಂಧದ ಮರ ಕದಿಯಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅರಣ್ಯ ಇಲಾಖೆ ಕ್ವಾರ್ಟರ್ಸ್​ನಲ್ಲಿ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಆನೆ ಶಿಬಿರಕ್ಕೆ ವ್ಯಕ್ತಿಯ