Home Archive by category ರಾಜ್ಯ (Page 35)

ದೈವನರ್ತಕರಿಗೆ ಸರ್ಕಾರದಿಂದ ಮಾಸಾಶನ

‘ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು.ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ,60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ” ಎಂದು ಕನ್ನಡ &

ಕನ್ನಡದ ನಟ ಚೇತನ್ ವಿರುದ್ಧ ಹಿಂದು ಜಾಗರಣ ವೇದಿಕೆ‌ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು

ಕಾರ್ಕಳ : ಕನ್ನಡದ ನಟ ಚೇತನ್ ವಿರುದ್ಧ ಹಿಂದು ಜಾಗರಣ ವೇದಿಕೆ‌ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ .ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಬೋಳ ಸದಾಶಿವ ಶೆಟ್ಟಿ, ಕೆಎಂಎಫ್‌ ನಿರ್ದೇಶಕ ನರಸಿಂಹ ಕಾಮತ್‌, ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಸಂಯೋಜಕ್ ಸಂದೀಪ್ ಕಾರ್ಲ, ದೀಪಕ್ ಬೈಲೂರು, ಸುಭಾಶ್ಚಂದ್ರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಪೂರ್ಣವಾಗಿ ಹದಗೆಟ್ಟಿರುವ ಚಾಮರಾಜನಗರ ಹೆದ್ದಾರಿ : ರಸ್ತೆಯ ಗುಂಡಿ ಮುಚ್ಚುವಂತೆ ಒತ್ತಾಯಿಸಿ ಮನವಿ

ಚಾಮರಾಜನಗರ ಹೆದ್ದಾರಿಯು ಹದಗೆಟ್ಟುಹೋಗಿದ್ದ ಕುರಿತು ಸವಿವಿಸ್ತಾರವಾಗಿ ಸುದ್ದಿಯನ್ನ ಪ್ತಸಾರ ಮಾಡಲಾಗಿತ್ತು. ಸುದ್ದಿ ಬಿತ್ತರದ ಬೆನ್ನಲ್ಲೇ ಕರುನಾಡು ಯುವಶಕ್ತಿ ಸಂಘಟನಾ ಸದಸ್ಯರು ತಾಲೂಕು ಅಧ್ಯಕ್ಷ ಮುನೀರ್ ಪಾಷ ಅವರೊಂದಿಗೆ ಲೋಕೋಪಯೋಗಿ ಇಲಾಖೆಗೆ ತೆರಳಿ ರಸ್ತೆಯಲ್ಲಿನ ಗುಂಡಿಗಳನ್ನ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷರು ಈಶ್ವರ್ ಮಾತನಾಡಿದ ರಸ್ತೆಯ ಗುಂಡಿ ಮುಚ್ಚಲು ರಾಹುಲ್ ಗಾಂಧಿ, ಮೋದಿ, ಆಮಿತ್ ಶಾ ಅವರೇ

ಡಿಸೆಂಬರ್ 20 ರ ವೇಳೆಗೆ ಪಿಂಚಣಿ ಬೇಡಿಕೆ ಈಡೇರದಿದ್ದರೆ ಶಾಲಾ-ಕಾಲೇಜು ಬಂದ್ ಮಾಡಿ ತೀವ್ರ ಹೋರಾಟ – ಪಿಂಚಣಿ ವಂಚಿತ ನೌಕರರ ಸಂಘದಿಂದ ಎಚ್ಚರಿಕೆ

ಬೆಂಗಳೂರು, ಅ, 17; ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ನಿಶ್ಚಿತ ಪಿಂಚಣಿ, ಕಾಲ್ಪನಿಕ ವೇತನ , ಅನುದಾನಿತ ನೌಕರರಿಗೆ ಆರೋಗ್ಯ ಸಂಜೀವಿನಿ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಿಂಚಣಿ ವಂಚಿತ ನೌಕರರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ 11 ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ, ಅರೆಬೆತ್ತಲೆ ಪ್ರತಿಭಟನೆ, ರಕ್ತದಾನ ಮತ್ತಿತರ ವಿಧಾನಗಳ ಮೂಲಕ ಹೋರಾಟ ನಡೆಸಿರುವ ಸಂಘದ

ಯಕ್ಷಗಾನಕ್ಕೆ ಮನಸೋತು ತಾನೇ ವೇಷಧಾರಿಯಾದ ಸಚಿವ

ಯಕ್ಷಗಾನವೆಂದರೆ ಕರಾವಳಿ ಬಾಗದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ಕಲೆ, ಇದೀಗ ಸಚಿವರೊಬ್ಬರು ಈ ಕರಾವಳಿಯ ಕಲೆಗೆ ಮನಸೋತು ತಾನೆ ವೇಷ ಧರಿಸುವ ಮೂಲಕ ಸಂಭ್ರಮಿಸಿದ್ದಾರೆ. ಆರೋಗ್ಯ ಸಚಿವರಾದ ಡಾ.ಸುಧಾಕರ್ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಸಂಬಂಧ ಪರಿಶೀಲನೆಗೆ ಆಗಮಿಸಿದ್ದ ಅವರು ಬಳಿಕ ಅಧಿಕಾರಿಗಳ ಸಭೆ ನಡೆಸಿ ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ

ಮಕ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಂಬೈ: ಮಲಾಡ್‍ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್ 30ರಂದು ಮಲಾಡ್ ಪೂರ್ವದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿರುವ ಮಕ್ಕಳ ಉತ್ಸವದ ಆಮಂತ್ರನ ಪತ್ರಿಕೆಯನ್ನು ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಬಿಡುಗಡೆಗೊಳಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ

ಕುಂಬಳೆ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನ : ದೇವರ ಮೊಸಳೆ “ಬಬಿಯಾ” ವಿಧಿವಶ

ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಬಹುಕಾಲದಿಂದ ಇದ್ದ ದೇವರ ಮೊಸಳೆ ಎಂದು ಪ್ರತೀತಿ ಪಡೆದಿದ್ದ ಬಬಿಯಾ ಎಂಬ ಹೆಸರಿನ ಮೊಸಳೆ ಮೃತಪಟ್ಟಿದೆ. ದೇವಸ್ಥಾನದ ನಿತ್ಯದ ಮಧ್ಯಾಹ್ನದ ಪೂಜೆಯ ಬಳಿಕ ಅನ್ನ ನೈವೇದ್ಯವನ್ನು ಮೊಸಳೆಗೆ ಬಡಿಸಲಾಗುತ್ತಿತ್ತು. ದೇವಸ್ಥಾನದ ನೈವೇದ್ಯವನ್ನು ತಿಂದು ಬದುಕುತ್ತಿದ್ದ ಈ ಬಬಿಯಾ ಹೆಸರಿನ ಮೊಸಳೆ ಯಾವತ್ತಿಗೂ ಜನರಿಗೆ ತೊಂದರೆ ಮಾಡಿದ್ದೆ ಇಲ್ಲ. ಕೆಲವೊಮ್ಮೆ ದೇವಸ್ಥಾನದ ಕೆರೆಯಿಂದ ಸಮೀಪದ

ಭಾರತ್ ಜೋಡೋ : ರಾಹುಲ್ ಜೊತೆಯಾದ ಎಂ.ಆರ್. ಸೀತಾರಾಂ: ಯಾತ್ರೆಯ ಸಕಾರಾತ್ಮಕ ಪರಿಣಾಮಗಳ ಕುರಿತು ಚರ್ಚೆ

ಬೆಂಗಳೂರು,ಅ,8: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಇಂದು ಜೊತೆಯಾದರು. ತುಮಕೂರು ಜಿಲ್ಲೆಯ ಮಾಯಸಂದ್ರದಿಂದ ಬಾನಸಂದ್ರ ವರೆಗೆ ಮೂರು ಗಂಟೆಗಳ ಕಾಲ 12 ಕಿಲೋಮೀಟರ್ ದೂರ ಸಾಗಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ಯಶಸ್ವಿಯಾಗುತ್ತಿರುವ ಬಗ್ಗೆ ಎಂ.ಆರ್. ಸೀತಾರಾಂ ಸಂತಸ ಹಂಚಿಕೊಂಡರು. ಪಕ್ಷ ಸಂಘಟನೆ ಕುರಿತಂತೆಯೂ ಚರ್ಚಿಸಿದರು. ಬಳಿಕ

ಮೀಸಲಾತಿ ಹೆಚ್ಚಳ ಅನುಮೋದನೆ ಪಡೆಯಲು ವಿಶೇಷ ಅದಿವೇಶನ ಸಧ್ಯಕಿಲ್ಲ

ಎಸ್ಸಿ, ಎಸ್‍ಟಿ ಮೀಸಲಾತಿ ಪ್ರಮಾಣ ಹಳ್ಳಕ್ಕೆ ರಾಜ್ಯ ಸರ್ಕಾರ ಸಂಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಲಭಿಸಿದ್ದು, ಇದಕ್ಕಾಗಿ ಸದನದ ಅನುಮೋದನೆ ಪಡೆಯುವುದಕ್ಕೆ ಸದ್ಯಕ್ಕೆ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ. ನ್ಯಾಯಾಧೀಶ ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಎಸ್‍ಸಿ ಸಮುದಾಯದ ಮೀಸಲಾತಿ ಪ್ರಮಾಣ 15-17ಕ್ಕೆ

ಉದ್ಯಾವರ : ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವ ಉದ್ಯಾವರದಲ್ಲಿ ಅಂಡರ್ ಪಾಸ್ ನಿರ್ಮಿಸಿ ರಸ್ತೆಯ ಇಕ್ಕೆಡೆಗಳಲ್ಲಿರುವವರಿಗೆ ಆಚೀಚೆ ದಾಟಲು ಸೌಕರ್ಯವನ್ನು ಒದಗಿಸಿ ಕೊಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರವರು ನಡೆಸುತ್ತಿರುವ ಪ್ರತಿಭಟನಾ ಧರಣಿಗೆ ಅಧಿಕೃತರ ಭಾಗದಿಂದ ಸ್ಪಂದನೆ ಇಲ್ಲದೇ ಇರುವ ಹಿನ್ನೆಯಲ್ಲಿ ಧರಣಿಯನ್ನು ಅನಿರ್ಧಿಷ್ಟಾವಧಿಗೆ ಮುಂದುವರಿಸಿದ್ದಾರೆ. ಮಂಜೇಶ್ವರ ಶಾಸಕ ಎಕೆ ಎಂ ಅಶ್ರಫ್ ರವರ