Home ಕರಾವಳಿ Archive by category ಉಡುಪಿ (Page 120)

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ಶುಭಾರಂಭ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಅತಿರುದ್ರ ಮಹಾಯಾಗ ಶುಭಾರಂಭಗೊಂಡಿತು. ಬೆಳಿಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಶತಚಂಡಿಕಾ ಯಾಗ ಪ್ರಾರಂಭಗೊಂಡಿತು. ಈ ಶುಭ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ಪತ್ರಿಕಾಗೋಷ್ಠಿ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ನಿಟ್ಟಿನಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ವತಿಯಿಂದ ಫೆಬ್ರವರಿ 21, 2023 ರ ಮಂಗಳವಾರದಂದು ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ, ಶಾಸಕ ಕೆ. ರಘುಪತಿ ಭಟ್ ಅವರು, 121 ಋತ್ವಿಜರ ನೇತೃತ್ವದಲ್ಲಿ

ಬೈಂದೂರು ಲಾವಣ್ಯ (ರಿ) ಇದರ 46ನೇ ವಾರ್ಷಿಕೋತ್ಸವ

ಬೈಂದೂರು ಇಲ್ಲಿನ ಲಾವಣ್ಯ ರಿ ಇದರ 46ನೇ ವಾರ್ಷಿಕೋತ್ಸವ ಅಂಗವಾಗಿ ರಂಗ ಪಂಚಮಿ 2023 ನಾಟಕೋತ್ಸವ ಹಾಗೂ ಯಕ್ಷಗಾನ ಉದ್ಘಾಟನಾ ಸಮಾರಂಭ ಬೈಂದೂರು ಶಾರದಾ ವೇದಿಕೆ ಸೋಮವಾರ ಸಂಜೆ ನಡೆಯಿತು. ಬೈಂದೂರು ಯು.ಬಿ.ಎಸ್ ಶೈಕ್ಷಣಿಕ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ನಂದಗೋಕುಲ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರು ಶುಭಾಶಂಸನೆಗೈದರು ಲಾವಣ್ಯ ರಿ ಬೈಂದೂರು ಅಧ್ಯಕ್ಷ ಬಿ. ನರಸಿಂಹ

ಫೆ. 22-25,ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ-ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ

ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ನೇತೃತ್ವದಲ್ಲಿ ಫೆ. ೨೨ರಿಂದ ಮೊದಲ್ಗೊಂಡು ಫೆ. ೨೫ರವರೆಗೆ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಸಿದ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದ ಭೇಟಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದ ಇಂದು ಬೆಳಗ್ಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ನಡ್ದಾ ಅವರನ್ನು ಮಠದ ದಿವಾನ ವರದರಾಜ ಆಚಾರ್ಯ ಮಾಲಾರ್ಪಣೆಗೈದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಮುಖಂಡರಾದ ಪ್ರದೀಪ ರಾವ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಜೆಪಿ ನಡ್ದಾ

ಉಡುಪಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ್ದು, ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ನಡ್ದಾರನ್ನು ಮಠದ ದಿವಾನ ವರದರಾಜ ಆಚಾರ್ಯ ಮಾಲಾರ್ಪಣೆಗೈದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಡುಪಿ ಶಾಸಕ ರಘುಪತಿ ಭಟ್, ಮುಖಂಡರಾದ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜ್‌ ಕುಮಾರ್ ಬಹರೈನ್ ಅವರಿಗೆ ಸಾರ್ವಜನಿಕ ಸನ್ಮಾನ ಮತ್ತು ರಾಜಾಭಿನಂದನೆ

ವಿದೇಶದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಪಸರಿಸಿ ಮೇಳೈಸಿದ ಅನಿವಾಸ ಭಾರತೀಯ ವಿಭಾಗದಲ್ಲಿ 2022ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜ್ ಕುಮಾರ್ ಬಹರೈನ್ ಅಂಬಲಪಾಡಿ ಇವರಿಗೆ ಸಾರ್ವಜನಿಕ ಸನ್ಮಾನ ಮತ್ತು ರಾಜಾಭಿನಂದನೆ ಕಾರ್ಯಕ್ರಮವು ಫೆ.19ರಂದು ಮಧ್ಯಾಹ್ನ 3.30ಕ್ಕೆ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಂ ಸದ್ಗುರು

ಕಾಂಗ್ರೆಸ್ ಕಾರ್ಯಕರ್ತರಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ : ಕಾರ್ಕಳದಲ್ಲಿ ಕಾಂಗ್ರೆಸ್ ಮುಖಂಡರ ಪುನರುಚ್ಚಾರ

ಕಾರ್ಕಳ: ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲದ ಐದನೇ ಅಭ್ಯರ್ಥಿಗೆ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಜಯಶಾಲಿಯಾಗಲಿದ್ದೇವೆ ಎಂದು ಕಾರ್ಕಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ನೀರೆ ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ ಮುದ್ರಾಡಿ, ಡಿ ಆರ್ ರಾಜು, ಸುರೇಂದ್ರ ಶೆಟ್ಟಿ ಪುನರುಚ್ಚರಿಸಿದ್ದಾರೆ. ಕಾರ್ಕಳ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಬ್ರಿ ಬ್ಲಾಕ್

ಬೆಳುಪು ದೇವಿಪ್ರಸಾದ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ..!

ಕಾಂಗ್ರೆಸ್ ಪಕ್ಷದ ಪ್ರತಿಷ್ಠಿಯ ತಾಣವಾಗಿರುವ ಕಾರ್ಕಳ ಕ್ಷೇತ್ರಕ್ಕೆ ಬಹಳ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಬಹಳಷ್ಟು ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಬೆಳಪು ದೇವಿಪ್ರಸಾದ್ ಶೆಟ್ಟಿ ಹೆಸರು ಅಂತಿಮವಾಗುವ ಮಾತು ರಾಜಧಾನಿಯಿಂದ ಕೇಳಿ ಬರುತ್ತಿದೆ.ಒಂದು ಕಡೆಯಿಂದ ಗೋಪಾಲ ಭಂಡಾರಿಯವರಿಂದ ತೆರವಾಗಿದ್ದ ಸ್ಥಾನಕ್ಕೆ ಬಹಳಷ್ಟು ಆಕಾಂಕ್ಷಿಗಳ ಪಟ್ಟಿ ಇದ್ದರೂ…ಮತ್ತೊಂದು ಕಡೆ ನಾನು ಯಾವುದೇ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ : ನೂತನ ಬ್ರಹ್ಮ ರಥ ಲೋಕಾರ್ಪಣೆ ಕಾರ್ಯಕ್ರಮ

ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮ ರಥವನ್ನು ಲೋಕಾರ್ಪಣೆ ಮಾಡಲಾಯಿತು. ಕೋಟೇಶ್ವರದಿಂದ ಪುರ ಮೆರವಣಿಗೆಯಲ್ಲಿ ಕೊಲ್ಲೂರಿಗೆ ಬಂದಿದ್ದ ಬ್ರಹ್ಮ ರಥವನ್ನು ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದು, ಗುರುವಾರ ಬೆಳಿಗ್ಗೆ ಶುದ್ದಾದಿ ಕಾರ್ಯಗಳು ಮುಗಿದ ಬಳಿಕ ಬ್ರಹ್ಮ ರಥದ ಹಸ್ತಾಂತರ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಋತ್ವೀಜರ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಬಳಿಕ ಹಳೆಯ ರಥದ ವಿಸರ್ಜನೆ ಹಾಗೂ ಕಳೆ ಇಳಿಸುವ ಸಲುವಾಗಿ