ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಪು ಪುರಸಭೆ, ಡೇ ನಲ್ಮ್ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಶ್ರೀ ದೇವಿ ಸ್ಪೋರ್ಟ್ ಮತ್ತು ಕಲ್ಟರಲ್ ಕ್ಲಬ್ ಕಾಪು, ಅರಣ್ಯ ಇಲಾಖೆ ಪಡುಬಿದ್ರಿ ವಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು
ಲಾರಿ ಡಿಕ್ಕಿಯಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಪೊದ್ದರವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಮಗ ಸಮರ್ಥ್ ಪೊದ್ದಾ ಗುರುವಾರ ಬೆಳಿಗ್ಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದಾನೆ. ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ
ಬಸ್ಸಿನಿಂದ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಮೆದುಳು ಡೆಡ್ ಆಗಿರುವ ಪಿಯುಸಿ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಲಾಗಿದೆ. ಮಂಗಳೂರಿನ ಉಳ್ಳಾಲದ ಯಶರಾಜ್ (18) ಎಂಬ ಯುವಕ ವಾರದ ಹಿಂದೆ ಬಸ್ಸಿನಲ್ಲಿ ಬರುತ್ತಿದ್ದಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ. ಮಂಗಳೂರಿ ಇಂಡಿಯಾನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನ ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ವೈದ್ಯರು ನಿನ್ನೆ ಕುಟುಂಬಸ್ಥರಿಗೆ ತಿಳಿಸಿದ್ದು ಅಂಗಾಂಗ ದಾನಕ್ಕೆ ಸಲಹೆ ಮಾಡಿದ್ದರು. ಮಗನ ಅಗಲಿಕೆಯ
ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟು ಮಗ ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮೃತರನ್ನು ಬೆಳಗಾವಿ ಮೂಲದ ಪ್ರಭಾಕರ್ ಕೋತ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಸಮರ್ಥ್ (14) ಎಂಬವರಾಗಿದ್ದಾರೆ. ಮೃತ ಪ್ರಭಾಕರ್ ಹಾಗು ಅವರ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಸರಕಾರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ
ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಟ್ರಾನ್ಸ್ಪರ್ಮಾರ್ ಅಳವಡಿಸುತ್ತಿದ್ದ ವೇಳೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುತ್ತಿದ್ದರೂ ಮುನ್ನಗ್ಗಿ ಬಂದ ಕಾರೊಂದು ಕಾರ್ಯನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ಗುದ್ದಿದ ಮೂವರು ಗಾಯಗೊಂಡಿದ್ದಲ್ಲದೆ, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದ ಘಟನೆ ಶಿರ್ವದಲ್ಲಿ ಸಂಭವಿಸಿದೆ. ಶಿರ್ವ ನ್ಯಾರ್ಮ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಕೆಲಸ ಪ್ರಗತಿಯಲ್ಲಿದ್ದು, 12 ಮಂದಿ ಮೆಸ್ಕಾಂ ಸಿಬ್ಬಂದಿ ಕೆಲಸ
ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ. ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ […]
ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ,'' ಖ್ಯಾತ ನಿರೂಪಕ, ಕ್ರೀಡಾಭಿಮಾನಿ, ಕ್ರೀಡಾ ನಿರೂಪಕ ,ಪ್ರತಿಭಾನ್ವಿತ ಯಕ್ಷಗಾನ ಕಲಾವಿದ, ಆಕಾಶವಾಣಿ ಕಲಾವಿದ, ಉತ್ತಮ ವಾಗ್ಮಿ ಹಾಗೂ ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ .ಟಿ ಪ್ರಕಾಶ್ ಶೆಟ್ಟಿ ಬೆಳಗೋಡು ಅಸ್ತಂಗತರಾಗಿದ್ದಾರೆ.ಹಲವಾರು ಸಾಧನೆಗಳ ಬೆನ್ನತ್ತಿ ಹಾಗೂ ಕ್ರೀಡಾಭಿಮಾನಿಗಳ ನಿಲುವನ್ನು ತನ್ನತ್ತ ಸೆಳೆದುಕೊಂಡು ಜಿಲ್ಲೆಯಲ್ಲಿಯೇ ಅತ್ಯುತ್ತಮ ನಿರೂಪಕ ಎಂದು
ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಡುಬಿದ್ರಿಯ ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಮೂಲಸೌಕರ್ಯಗಳಿಲ್ಲದೆ ನೆಲದಲ್ಲಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಇದೆ. ಅಲ್ಲದೆ ಈ ಶಾಲೆಯ ಕಟ್ಟಡ ತೀರ ಹಳೆಯದಾಗಿದ್ದು, ನಾದುರಸ್ಥಿಯಲ್ಲಿದೆ. ಕೂಡಲೇ ಸೂಕ್ತ ಹೊಸ ಕಟ್ಟಡವನ್ನು ರಚಿಸುವಂತೆ ಆಗ್ರಹಿಸಿ ಸಾಮಾಜಿಕ
ಅಂಪಾರು- ಮೂಡುಬಗೆಯಲ್ಲಿರುವ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಗೆಉದ್ಯಮಿ ರಮೇಶ್ ದೇವಾಡಿಗ ವಂಡ್ಸೆ ಹಾಗೂ ತಲ್ಲೂರು ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರವಿ ತಲ್ಲೂರು ಇವರು ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳು ತಮ್ಮದೇ ಆದ ಭಾಷೆಯಲ್ಲಿ ಪರಿಚಯ ಮಾಡಿಕೊಂಡರು. ಮಕ್ಕಳಿಗೆ ಅಗತ್ಯ ಇರುವ ಪಠ್ಯಪುಸ್ತಕವನ್ನು ಹಾಗೂ ಅಡುಗೆ ಮನೆಗೆ ಗ್ರೈಂಡರ್ ಕೊಡುವೆಯಾಗಿ ನೀಡಿದರು.ವಿಶೇಷ ಮಕ್ಕಳ ಸೇವೆಯಲ್ಲಿ ಜೀವನದ ಸಾರ್ಥಕತೆ ಇದೆ
ಬೈಂದೂರು : ಕೊಲ್ಲೂರಿಗೆ ಯಾತ್ರಾರ್ಥಿಗಳಾಗಿ ಬಂದು, ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲುಜಾರಿ ನದಿಪಾಲಾದ ಮಹಿಳೆಯ ಶವ ಇಂದು ಭಾನುವಾರ ಮಧ್ಯಾನ್ಹ ನಡೆದಿದೆ. ಘಟನಾ ಸ್ಥಳದಿಂದ ಮೂರೂವರೆ ಕಿ. ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಮುಳುಗು ತಜ್ಞ , ಸಾಹಸಿಗ ಈಶ್ವರ್ ಮಲ್ಪೆ ಅವರು ಸತತ ಪರಿಶ್ರಮದಿಂದ ಹರಿವ ನೀರಿನ ಸೆಳೆತವನ್ನೂ ಜಯಿಸಿ, ಸಾಹಸದಿಂದ ಶವ ಪತ್ತೆಹಚ್ಚಿದ್ದಾರೆ. ಹೌದು ಆದರೆ, ಈಶ್ವರ್ ಅವರು ತಮ್ಮ ಸಂಗಡಿಗರೊಂದಿಗೆ ಛಲ




























