ಕಾರ್ಕಳ:ಕೆಲವೆಡೆ ಬೀಸಿದ ಸುಂಟರ ಗಾಳಿ, ಹಲವು ಮನೆಗಳಿಗೆ ಹಾನಿ

ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ.

ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ. ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ ಹೋಗಿ ತೋಟದಲ್ಲಿರುವ ಅಡಿಕೆ ಮರ ತೆಂಗಿನ ಮರ ಸಾಗುವಾನಿ ಮರ ನೆಲಕ್ಕೆ ಉರುಳಿವೆ. ಇವರಿಗೆ ಸುಮಾರು 50,000 ದಷ್ಟು ನಷ್ಟ ಉಂಟಾಗಿದೆ. ಈ ಪರಿಸರದಲ್ಲಿ ಸುಮಾರು 10 ಮನೆಗಳಿಗೆ ತೀವ್ರತರದ ಹಾನಿ ಉಂಟಾಗಿ 10 ವಿದ್ಯುತ್ ಕಂಬಗಳು ನೆಲಕ್ಕೆರುಳಿವೆ ಈಗಾಗಲೇ ಸ್ಥಳೀಯ ಪಂಚಾಯತಿನ ಅಧಿಕಾರಿಗಳು ನಷ್ಟದ ಸಮೀಕ್ಷೆ ನಡೆಸುತ್ತಿದ್ದಾರೆ.

Yenepoya

Related Posts

Leave a Reply

Your email address will not be published.