Home ಕರಾವಳಿ Archive by category ಉಡುಪಿ (Page 15)

ಉಡುಪಿ : ಮೈ ಡಿಯರ್ ಮೀನ ತುಳು ಆಲ್ಬಂ ಸಾಂಗ್ ಆಕ್ಷನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲಿನಲ್ಲಿ ಬಿಡುಗಡೆ

ಮಣಿ ಶೆಣೈ ನಿರ್ದೇಶನದ ಮೈ ಡಿಯರ್ ಮೀನಾ ಕಾಮಿಡಿ ತುಳು ಆಲ್ಬಂ ಸಾಂಗ್ ಇತ್ತೀಚೆಗೆ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯಲ್ಲಿ ಅದ್ದೂರಿಯಾಗಿ ಆಕ್ಷನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ದೀಕ್ಷಾ ಎಸ್‌ಎಂ ಬ್ರಹ್ಮಾವರ ಇವರು ಕೇಂದ್ರ ಬಿಂದು ಆಗಿದ್ದು, ಎಏ ಪೇಟೆಬೆಟ್ಟು, ಕೀರ್ತಿ ಕುಮಾರ್

ಮಂದಾರ್ತಿ ದೇವಸ್ಥಾನದಲ್ಲಿ ನೇತ್ರಜ್ಯೋತಿ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಚತೆ ಕಾರ್ಯಕ್ರಮ

ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಸಿದ್ಧ ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯದ ಸುತ್ತ ಮುತ್ತಲು ಸ್ವಚ್ಚತಾ ಕಾರ್ಯ ನಡೆಯಿತು. ಸುಮಾರು 50 ವಿದ್ಯಾರ್ಥಿಗಳು ಬಾಗವಹಿಸಿದ್ದು ದೇವಾಲಯದ ಆವರಣದಲ್ಲಿರುವ ಪ್ಲಾಸ್ಟಿಕ್, ಬಾಟಲಿ, ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ನಂತರ ದೇವಾಲಯದ ಅನ್ನದಾನದ ಕೈಂಕರ್ಯದಲ್ಲಿಯೂ ಭಾಗವಹಿಸಿದರು, ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಡಿನೇಟರ್ ಗಳಾದ ಶ್ರೀ

ಸಿದ್ದಾಪುರ: ಜೂ.15ರಂದು ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್(ರಿ).ಬೆಚ್ಚಳ್ಳಿ, ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ

ಸಿದ್ದಾಪುರದ ಸಾವಯವ ಕೃಷಿ ಪರ ಹಾಗೂ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ರಾಜೇಂದ್ರ ಪೂಜಾರಿ ಸಾರಥ್ಯದಲ್ಲಿ ಸಾರ್ವಜನಿಕ ಕಳಾಕಳಿಯ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್. (ರಿ)ಬೆಚ್ಚಳ್ಳಿ ಹೊಸಂಗಡಿಯ ನೋಂದಾಯಿತ ಪ್ರಥಮ ಸಾಲಿನಲ್ಲೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟ್ರಸ್ಟ್ ಆಗಿದೆ. ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ:15-06-2025ನೇ ಆದಿತ್ಯವಾರ ಬೆಳಿಗ್ಗೆ ಘಂಟೆ 09.00ಕ್ಕೆ ಶ್ರೀ

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾರ್ಕಳ ಎಎಸ್ಪಿ ಹಾಗೂ ನಗರ ಠಾಣಾಧಿಕಾರಿ, ಠಾಣಾಧಿಕಾರಿಯವರಿಗೆ ಕಾರ್ಕಳ ತಾಲೂಕಿನಲ್ಲಿ ಸುವ್ಯವಸ್ಥೆ ಯನ್ನು ಕಾಪಾಡುವಂತೆ ಮತ್ತು ಅಕ್ರಮ ವ್ಯವಹಾರಗಳಿಗೆ ಕಡಿವಾಣಕ್ಕೆ ಮನವಿ

ಕರ್ಣಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಅ. ರಾ. ಪ್ರಭಾಕರ್ ಪೂಜಾರಿ ಅವರ ಆದೇಶದಂತೆ ಕಾರ್ಕಳ ತಾಲೂಕು ಘಟಕದ ವತಿಯಿಂದ ಕಾರ್ಕಳ ಎಎಸ್ಪಿ‌ ಡಾ. ಹರ್ಷಪ್ರಿಯಂವದಾ ಹಾಗೂನಗರ ಠಾಣಾಧಿಕಾರಿಗಳಾದ ಪ್ರಸನ್ನ ಮತ್ತು ಠಾಣಾಧಿಕಾರಿ ಸಂದೀಪ್ ಅವರನ್ನು ಭೇಟಿಯಾಗಿ,ಕಾರ್ಕಳ ತಾಲೂಕಿನಲ್ಲಿ ಸುವ್ಯವಸ್ಥೆ ಯನ್ನು ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಕಳ ತಾಲೂಕು ಘಟಕದ

ಉಡುಪಿ: ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆ

ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಕಾಲೇಜಿನಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ವಿದ್ಯಾರ್ಥಿಗಳಿಗೆ ಗಿಡ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಡುಪಿಯ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಶಿವಾನಂದ ರವರು ಮಾತನಾಡಿ, ವಿಶ್ವಪರಿಸರ ದಿನಾಚರಣೆಯ ಉದ್ದೇಶ, ಪರಿಸರ ರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. ಇನ್ನೊರ್ವ ಅತಿಥಿ ಶ್ರೀ ದೇವರಾಜ್ ಪಣ ಬೀಟ್ ಫಾರೆಸ್ಟರ್ ಉಡುಪಿ ಇವರು ಮಾತನಾಡಿ

ಉಡುಪಿ : ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಂ ಶಂಕರ್ ರವರಿಗೆ ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಗೌರವ

ಕರ್ನಾಟಕ ಪತ್ರಕರ್ತರ ಸಂಘ (ರಿ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯವರಾಗಿರುವ ಶ್ರೀ ಹರಿರಾಂ ಶಂಕರ್ ಅವರನ್ನು ಜಿಲ್ಲೆಗೆ ಸ್ವಾಗತಿಸುವ ಮೂಲಕ ಗೌರವಿಸಲಾಯಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಬಲಪಡಿಸಿ ಶಾಂತಿ ಕಾಪಾಡುವಂತೆ, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪತ್ರಕರ್ತರ ಸಂಘ ದ ವತಿಯಿಂದ ವಿನಂತಿಸಲಾಯಿತು.ಕರ್ನಾಟಕ ಪತ್ರಕರ್ತರ ಸಂಘ ದ ಜಿಲ್ಲಾಧ್ಯಕ್ಷರಾದ ಕಿರಣ್ ಪೂಜಾರಿ,

ಬೈಂದೂರು: ಹೊಸಂಗಡಿ, ನಾಡ ಹಾಗೂ ಹೇರೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡಕೆ ಜಾಗ ಮಂಜೂರು ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ : ಶಾಸಕ ಗಂಟಿಹೊಳೆ

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಬಲ ವರ್ಧನೆ ಮಾಡುವ ನಿಟ್ಟಿನಲ್ಲಿ 2023-24 ನೇ ಸಾಲಿನಲ್ಲಿ 15 ನೇ ಹಣಕಾಸು ಆಯೋಗದಡಿ ರಾಜ್ಯದ ಆರೋಗ್ಯ ವಲಯದ ಕಾರ್ಯಕ್ರಮ ಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ ಕಾರ್ಯಕ್ರಮ ಇದಾಗಿದೆ. ಕ್ಷೇತ್ರದ 3 ಕಡೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡಕ್ಕೆ ಸರಕಾರಿ ಜಾಗ ಮಂಜೂರಾತಿ ಮಾಡಲಾಗಿದ್ದು ಶೀಘ್ರದಲ್ಲೇ ಹೊಸದಾಗಿ 1.95 ಕೋಟಿ ವೆಚ್ಚದಲ್ಲಿ 3 ಕಡೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ

ಬೈಂದೂರು : ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ

ಶ್ರೀ ರಾಮಕ್ಷತ್ರಿಯ ಸಂಘ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಸಂಭ್ರಮದಲ್ಲಿ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ ಕರ್ಮಾರಂಭ ಧ್ವಜಾರೋಹಣ ಮತ್ತು ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಹಾಗೂ ಪೂರ್ವಾಹ್ನ

ಕಾರ್ಕಳ: ಹಣದಾಸೆಗೆ ಹಸುಗೂಸು ಮಾರಾಟ ಪ್ರಕರಣ: ದಂಪತಿ, ನಿವೃತ್ತ ನರ್ಸ್ ಸೇರಿ ಐವರ ವಿರುದ್ಧಕೇಸ್ ದಾಖಲು

ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ರಾಘವೇಂದ್ರ ಅವರಿಗೆ ಮಕ್ಕಳಿಲ್ಲದ ಹಿನ್ನಲೆಯಲ್ಲಿ

ಬೈಂದೂರು: ಕೊರಗ ಸಮುದಾಯ ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಮಂಜೂರು

ಕೇಂದ್ರ ಸರಕಾರದ ಪಿ.ಎಂ ಜನ್ ಮನ್ ಯೋಜನೆಯಡಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯ ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ರೂ. 4.39 ಕೋಟಿ ಅನುದಾನ ಮಂಜೂರು. ಕೇಂದ್ರ ಸರಕಾರದ ಪಿಎಂ ಜನ್ ಮನ್( ಪ್ರಧಾನ ಮಂತ್ರಿ ಜನ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ) ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸುಧಾರಣೆ ನಿಟ್ಟಿನಲ್ಲಿ ಹೊಸ ಅಭಿಯಾನವನ್ನು ಆರಂಭಿಸಿದ್ದು ಕರ್ನಾಟಕ ರಾಜ್ಯದಲ್ಲಿ ಕೊರಗ ಮತ್ತು ಜೇನು