Home ಕರಾವಳಿ Archive by category ಉಡುಪಿ (Page 152)

ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವು : ಕಾಪು ಸಮೀಪದ ಮಡುಂಬು ಎಂಬಲ್ಲಿ ಘಟನೆ

ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಕಾಪು ಸಮೀಪದ ಮಡುಂಬು ಎಂಬಲ್ಲಿ ನಡೆದಿದೆ. ಶರ್ಮಿಳಾ ಶೆಟ್ಟಿ(22) ಮೃತ ಪಟ್ಟ ಯುವತಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಈಕೆ ಇಂದು ಮುಂಜಾನೆ ತನ್ನ ಊರಿಗೆ ಬಂದಿದ್ದಳು. ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕರ ನೆರವಿನಲ್ಲಿ ಶವವನ್ನು

ಭಟ್ಕಳದಲ್ಲಿ ಭುಗಿಲೆದ್ದ ಭಾಷಾ ವಿವಾದ : ಪುರಸಭೆ ಕಟ್ಟಡಕ್ಕೆ ಉರ್ದು ಭಾಷೆ ಫಲಕ!

ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ.ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ

ಗ್ರಂಥಾಲಯದಲ್ಲೇ ತ್ಯಾಜ್ಯಗಳ ರಾಶಿ..

ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನ ವಿಲೇವಾರಿ ಮಾಡೋ ಬದಲು ಗ್ರಾಮ ಪಂಚಾಯಿತಿನ ಗ್ರಂಥಾಲಯದಲ್ಲಿ ತುಂಬಿಸಿಟ್ಟಿದ್ದಾರೆ.ಇಲ್ಲಿ ಗ್ರಾಮಸ್ಥರು ಪುಸ್ತಕಗಳನ್ನು ದಿನಪತ್ರಿಕೆಗಳನ್ನ ಓದಬೇಕಾದರೆ ಈ ಕಸದ ರಾಶಿಗಳ ಮಧ್ಯೆ ಹಾಕಿರುವ ಟೇಬಲ್ ನಲ್ಲಿ ಮೂಗುಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಇದು ಅಂಬಲಪಾಡಿ ಗ್ರಾಮ ಪಂಚಯತ್ ವ್ಯಾಪ್ತಿಯ ಅವ್ಯವಸ್ಥೆ.   ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕಾದ ಗ್ರಾಮ ಪಂಚಯತ್ ಅಧಿಕಾರಿಗಳು

ಸೋಮ್ ಭಾಯ್ ಮೋದಿ ಅವರಿಂದ ಉಡುಪಿ ಪ್ರಸಾದ್ ನೇತ್ರಾಲಯದ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನೆ

ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮವು ನ.21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ್ ಅಚಾರ್ಯ ಶುಭಾಂಸನೆಗೈಯಲಿದ್ದಾರೆ. ಅರ್ಥಾಪ್ಟಿಕ್ ಕ್ಲಿನಿಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣ ಗುಜರಾತ್ ವಾಡ್‍ನಗರದ ಸರ್ವೋದಯ ಸೇವಾ

ಕೊನೆಗೂ ವೇತನ ನೀಡಿದ ಟಿಬಿಆರ್ ಕಂಪನಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಕೆಲಸಕ್ಕೆ ಹಾಜರಾದ ಸಿಬ್ಬಂದಿಗಳು

ವೇತನ ನೀಡಲು ವಿಳಂಬಿಸಿದ ಹೆಜಮಾಡಿ ಟೋಲ್ ಪ್ಲಾಜಾದ ಟಿಬಿಆರ್ ಕಂಪನಿಯ ನಿರ್ಲಕ್ಷ್ಯದ ವಿರುದ್ದ ತೊಂಭತ್ತಕ್ಕೂ ಅಧಿಕ ಸಿಬ್ಬಂದಿಗಳು ಸಿಡಿದ್ದೆದ್ದು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದ ಹಿನ್ನಲೆಯಲ್ಲಿ ಸರಿ ಸುಮಾರು ಇಪ್ಪತ್ತಾರು ಗಂಟೆಗಳ ಬಳಿಕ ವೇತನ ನೀಡುವ ಮೂಲಕ ಸಮಸ್ಯೆ ಬಗೆಹರಿದು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗುರುವಾರ ಮುಂಜಾನೆ ಎಂಟು ಗಂಟೆಗೆ ವೇತನಕ್ಕಾಗಿ ಮುಷ್ಕರ ಆರಂಭಿಸಿದ ಸಿಬ್ಬಂದಿಗಳನ್ನು ಕೆಲ ಅಧಿಕಾರಿಗಳು ಮನವೊಲಿಸಿ ಕರ್ತವ್ಯ

ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ಮುಷ್ಕರ

ಸಿಬ್ಬಂದಿಗಳಿಗೆ ಸಂಬಳ ನೀಡದೆ ಸತ್ತಾಯಿಸುತ್ತಿದ್ದ “ಟಿಬಿಆರ್” ಕಂಪನಿಯ ವಿರುದ್ಧ ಸಮರ ಸಾರಿರುವ ಸುಮಾರು ತೊಂಭತ್ತು ಮಂದಿ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರನಡೆಸುತ್ತಿದ್ದಾರೆ. ಮುಂಜಾನೆ ಎಂಟು ಗಂಟೆಗೆ ಮುಷ್ಕರ ಆರಂಭಿಸಿದ ಸಿಬ್ಬಂದಿಗಳ ಮನವೊಲಿಸಲು ಅಧಿಕಾರಿಗಳು ವಿವಿಧ ಬಗೆಯಲ್ಲಿ ಪ್ರಯತ್ನ ನಡೆಸಿದರೂ ಪ್ರಯತ್ನ ವಿಫಲಗೊಂಡಿದೆ. ಈ ಬಗ್ಗೆ ಸಿಬ್ಬಂದಿಗಳ ಪರವಾಗಿ ಮಾತನಾಡಿದ ಲೀಲಾಧರ್, ತಿಂಗಳ ಹತ್ತು ತಾರೀಕಿನ

ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಸರಣಿ ಕಳ್ಳತನ

ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ. ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ

ತುಳುನಾಡಿನ ರಂಗ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲ ಅನಾರೋಗ್ಯದಿಂದಾಗಿ ವಿಧಿವಶ

ತುಳುನಾಡಿದ ಹತ್ತು ಹಲವು ನಾಟಕ ತಂಡಗಳಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿ ಅಲ್ಲದೇ ವಿ4ನ್ಯೂಸ್ ಕರ್ನಾಟಕದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದ ಕಾರಣದಲ್ಲಿ ವಿಧಿವಶರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ತನ್ನ ಉತ್ತಮ ನಡವಳಿಕೆ ಮತ್ತು ಉತ್ತಮ ನಟನೆಯ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದಿಂದ ತನ್ನ ಚಿಕ್ಕ

ಪಡುಬಿದ್ರಿಯಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ: ವ್ಯಕ್ತಿ ಮೃತ್ಯು

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಡೌನ್‌ಟೌನ್ ಬಾರ್ ಮುಂಭಾಗ ಅನದಿಕೃತವಾಗಿ ತೆರೆದುಕೊಂಡಿರುವ ಡೈವರ್ಶನ್ ಇದೀಗ ಎರಡನೇ ಬಲಿ ಪಡೆದುಕೊಂಡಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಬಾಲಕೃಷ್ಣ ಭಟ್(74). ಇವರು ತನ್ನ ಮನೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಹೆಜಮಾಡಿಗೆ ಪ್ರಯಾಣಿಸುವುದಕ್ಕಾಗಿ ಅನದಿಕೃತ ಡೈವರ್ಶನ್‌ನಲ್ಲಿ ರಸ್ತೆ ದಾಟುತ್ತಿದಂತೆ, ಕಡಲಿಗೆ ತಡೆಗೋಡೆ ನಿರ್ಮಾಣ ಗುತ್ತಿಗೆದಾರ ಸಕಲೇಶಪುರ ಮೂಲದ ಇದೀಗ

ಪಡುಬಿದ್ರಿ: ಅಕ್ಕಿ ಸಾಗಾಟ ಪಿಕಪ್ ವಾಹನ ಪಲ್ಟಿ: ಚಾಲಕ ಅಪಾಯದಿಂದ ಪಾರು

ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿದ್ದು ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದಿರುವುದರಿಂದ ಬಾರೀ ದುರಂತವೊಂದು ತಪ್ಪಿದೆ ಎನ್ನುತ್ತಾರೆ ಅಪಘಾತಕ್ಕೊಳಗಾದ