Home ಕರಾವಳಿ Archive by category ಉಡುಪಿ (Page 162)

ಏಳೂರು ಮೊಗವೀರ ಮಹಾಸಭಾದ ವತಿಯಿಂದ ಹೆಜಮಾಡಿಯಲ್ಲಿ ಸಮುದ್ರ ಪೂಜೆ

ಏಳೂರು ಮೊಗವೀರ ಮಹಾ ಸಭಾದ ವತಿಯಿಂದ ಭಾನುವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ ನೆರವೇರಿಸಿ, ಸಮುದ್ರ ದೇವತೆಗೆ ಹಾಲು, ತೆಂಗಿನಕಾಯಿ ಸಮರ್ಪಣೆ ನೆರವೇರಿಸಲಾಯಿತು. ಪಲಿಮಾರು, ಗುಂಡಿ, ಸಣ್ಣ ಗುಂಡಿ, ಹೆಜಮಾಡಿ, ಮಟ್ಟು, ಆಚೆಮಟ್ಟು ಹಾಗೂ ಕನ್ನಂಗಾರು ಸೇರಿ ಏಳು ಊರಿನ ಮೊಗವೀರ ಬಾಂಧವರು ಹಾಲು, ತೆಂಗಿನ ಕಾಯಿ, ಫಲವಸ್ತುಗಳನ್ನು ತಂದು ಸಮುದ್ರ ದೇವರಿಗೆ

ಕಳಪೆ ಕಾಮಗಾರಿಗೆ ಸಾಕ್ಷಿ ನುಡಿಯುತ್ತಿದೆ ಪಡುಬಿದ್ರಿ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಲ್ಲಿ ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ಕುಂಟುತ್ತಾ ಸಾಗಿದ ಚತುರ್ಷ್ಪಥ ಹೆದ್ದಾರಿ ಕಾಮಗಾರಿ ಇದೀಗ ಅಂತ್ಯ ಕಾಣುವ ಲಕ್ಷಣಗಳು ಗೊಚರಿಸುತ್ತಿದ್ದರೂ ಮಾಡಿದ ಕಾಮಗಾರಿ ಕೆಲವೇ ಗಂಟೆಗಳಲ್ಲಿ ಆಯುಷ್ಯ ಕಳೆದುಕೊಳ್ಳುತ್ತಿದ್ದರೂ ಪ್ರಶ್ನಿಸುವವರಿಲ್ಲದೆ, ಆನೆ ನಡೆದಿದ್ದೇ ದಾರಿ ಎಂಬಂತ್ತಾಗಿದೆ. ಪಡುಬಿದ್ರಿ- ಎರ್ಮಾಳು ಗಡಿಭಾಗಲ್ಲಿ ಹೆದ್ದಾರಿಗೆ ಕಿರು ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿ ದಶಕಗಳೇ ಕಳೆದು ಇದೀಗ ಪೂರ್ಣಗೊಂಡು,

ಹಿರಿಯ ಜನಪದ ಕಲಾವಿದ ಗುರುವ ಕೊರಗ ನಿಧನ

ಉಡುಪಿ: ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ (105) ನಿಧನರಾಗಿದ್ದಾರೆ. ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿರುವ ಶತಾಯುಷಿ ಡೋಲು  ಕಲಾವಿದ ಗುರುವ ಕೊರಗ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ತಮ್ಮ 12ನೇ

ದ.ಕ., ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಸದ್ಯ ಶಾಲಾರಂಭ ಇಲ್ಲ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತು ಸೋಂಕುಪೀಡಿತರ ಸಾವು ಏರಿಳಿಕೆಯಾದರೂ ಸತತ ಒಂದು ವಾರದಿಂದ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆ ವರದಿಯಾಗುತ್ತಿದೆ. ಈ ಮೂಲಕ ಮೂರನೇ ಅಲೆ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ. ಇದರ ಮಧ್ಯೆ ಸೋಮವಾರದಿಂದ ರಾಜ್ಯದಲ್ಲಿ ಶಾಲಾರಂಭ ಆಗಲಿದ್ದರೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ತರಗತಿ ಆರಂಭವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಈ ಮೊದಲು ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ ಇಂದಿನ ಅಗತ್ಯತೆ: ಡಾ. ಗೋಪಾಕೃಷ್ಣ ಎಂ. ಗಾಂವ್ಕರ್

ಉಡುಪಿ : ಪ್ರಸ್ತುತ ಜಾಗತಿಕವಾಗಿ ಕಂಡು ಬರುವ ಹಿಂಸಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಪರಿಕಲ್ಪನೆ ಅಗತ್ಯವಾಗಿದೆ. ತಾನು ಚನ್ನಾಗಿ ಬದುಕಿ ಇತರರನ್ನೂ ಬದುಕಲು ಅವಕಾಶ ನೀಡುವ ಮನೋಸ್ಥಿತಿ ಬೆಳೆದಾಗ ಉತ್ತಮ ಬದುಕುವ ವಾತಾವರಣ ನಿರ್ಮಾಣವಾಗಲು ಸಾಧ್ಯ. ಸಂವಿಧಾನದ ಅಶಯವಾದ ಶಾಂತಿ, ಸಹಬಾಳ್ವೆ ಹಾಗೂ ಸಮಾನತೆಯ ಚಿಂತನೆಗಳು ಇಂದಿನ ಯುವ ಸಮುದಾಯದಲ್ಲಿ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸರಕಾರಿ

ಮಧ್ಯಂತರ ಸಮ್ಮೇಳನದಲ್ಲಿ ಮುಂಡ್ಕೂರು ಜೇಸಿಸ್ ಗೆ ಹಲವು  ಪ್ರಶಸ್ತಿ

  ಮುಂಡ್ಕೂರು;ಪ್ರತೀ ವರ್ಷ ರಕ್ತದಾನ ಶಿಬಿರ, ತರಬೇತಿ ಕಾರ್ಯಾಗಾರ, ಉಚಿತ ಯೋಗ ಶಿಬಿರ, ಶಾಶ್ವತ ಯೋಜನೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಜೇಸಿಯ ಕಂಪನ್ನು ಎಲ್ಲೆಡೆ ಪಸರಿಸಿರುವ ಘಟಕ ಜೇಸಿಐ ಮುಂಡ್ಕೂರು ಭಾರ್ಗವ. ಈ ವರ್ಷ ಪ್ರಶಾಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕೋವಿಡ್ ಸಮಯದಲ್ಲಿ ಅಶಕ್ತರಿಗೆ ಕಿಟ್ ವಿತರಣೆ,  ಸಾಧಕ ಮಹಿಳೆಯರಿಗೆ ಅಭಿನಂದನಾ ಕಾರ್ಯಕ್ರಮ,  ಹಲವು ತರಬೇತಿ ಕಾರ್ಯಕ್ರಮ, ಅಂತರಾಷ್ಟ್ರೀಯ ಯೋಗ ದಿನ, ನಿರಂತರ ಉಚಿತ ಯೋಗ ಶಿಬಿರ,

ಉದ್ಯಾವರ ಸೇತುವೆಯಲ್ಲಿ ಕಾರು ಲಾರಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಉದ್ಯಾವರ ಸೇತುವೆಯಲ್ಲಿ ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬಹಳಷ್ಟು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.   ಕಾರು ಬಹುತೇಕ ಜಖಂಗೊಂಡು ಚಲಿಸದ ಕಾರಣ ಸ್ಥಳಕ್ಕೆ ಬಂದ ಕಾಪು ಪೊಲೀಸರು ಬಾರ ಎತ್ತುವ ಯಂತ್ರ ತರಿಸಿ ಕಾರನ್ನು ಸೇತುವೆ ಮೇಲಿಂದ ತೆರವುಗೊಳಿಸಲಾಯಿತು.

ಎಸ್ ಕೆ ಪಿ ಎ ಅಯೋಜಿಸಿದ್ದ ಪ್ರತಿಷ್ಟಿತ ಛಾಯಾ ಚಿತ್ರ ಸ್ಪರ್ಧೆ:ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ಪ್ರಥಮ ಬಹುಮಾನ

ಕರಾವಳಿಯ ಎಸ್ ಕೆ ಪಿ ಎ ಛಾಯಾಗ್ರಾಹಕರ ಸಂಘಟನೆ ಎರ್ಪಡಿಸಿ ಪ್ರತಿಷ್ಠಿತ ಛಾಯಾಗ್ರಹ ಸ್ಪರ್ಧೆಯಲ್ಲಿ ಉದಯೋನ್ಮುಖ ಯುವ ಛಾಯಾಗ್ರಾಹಕ ಅಶ್ವಿನ್ ಕೊಡವೂರಿಗೆ ವೆಡ್ಡಿಂಗ್ ಮೂಂಮೆಟ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ದೊರಕಿದೆ.ಮದುವೆ ಸಂಭ್ರಮದಲ್ಲಿ ತಂದೆ ಮಗಳ‌ ಭಾನಾತ್ಮಕ ಕ್ಷಣಗಳನ್ನು ಮನಮುಟ್ಟುವಂತೆ ತನ್ನ ಕ್ಯಾಮರದಲ್ಲಿ ಸೆರೆ ಹಿಡಿದಿದ್ದು, ನಿರ್ಣಯಕರು ಮೊದಲ ಪ್ರಶಸ್ತಿಯನ್ನು ನೀಡಿದ್ದಾರೆ. ಮೂಲತಃ ಉಡುಪಿಯ ಕೊಡವೂರು ಮೂಲದವರಾಗಿರುವ ಅಶ್ವಿನ್ ಕೊಡವೂರು ತನ್ನ ವಿಭಿನ್ನ

ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಬಳಿಕ ನೀಡಿದ ಮನವಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಡೆಸಿ ಭಯೋತ್ಪಾದಕ ಚಟುವಟಿಕೆಗೆ ಬಳಸುತ್ತಿದ್ದಾರೆ. ಆದರೆ ಮುಸಲ್ಮಾನರ ಮದುವೆಯಾದ ಹಿಂದೂ ಹೆಣ್ಣು ಮಕ್ಕಳ ಸದ್ಯದ ಸ್ಥಿತಿಗೆ ಹೇಗಿದೆ ಎಂದು

ತೆಂಕ ಗ್ರಾ.ಪಂ.ನಲ್ಲಿ ಲಿಂಕ್ ರಸ್ತೆ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರಿಂದ ಒತ್ತಾಯ

ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಲಿಂಕ್ ರಸ್ತೆಗಳ ಆರಂಭಿಕ ಐವತ್ತು ಮೀಟರ್ ರಸ್ತೆ ಹೆದ್ದಾರಿ ಇಲಾಖೆ ನಡೆಸಬೇಕಾಗಿದ್ದರೂ ನಿರ್ಲಕ್ಷ್ಯ ಮಾಡಿದ ಇಲಾಖೆಯ ವಿರುದ್ಧ ಆಕ್ರೋಶ ಗೊಂಡ ಗಾ.ಪಂ. ಪ್ರತಿನಿಧಿಗಳು ಸಹಿತ ಸಾರ್ವಜನಿಕರು ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡಿ, ಲಿಂಕ್ ರೋಡ್ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯ ನಿವಾಸಿ ಸುರೇಶ್ ಪೂಜಾರಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುತ್ತಾರೆ ಎಂಬ ನಿಟ್ಟಿನಲ್ಲಿ ನಾವು