ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆದಿಂಜೆ-ಮಂಜರಪಲ್ಕೆಇದರ 14 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಕೆದಿಂಜೆ ಶ್ರೀ ವಿಠೋಭ ಭಜನಾ ಮಂದಿರದಲ್ಲಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್, ಅಧ್ಯಕ್ಷರಾದ ಸುಧಾಕರ ಸಾಲ್ಯಾನ್ ಕಾರ್ಯದರ್ಶಿ ದಯಾನಂದ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರ್ವ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಿರ್ವ – ಮಂಚಕಲ್ ಬಸ್ ನಿಲ್ದಾಣ ಬಳಿಯ ವೇದಿಕೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಜರುಗಿತು. ಆ ಪ್ರಯುಕ್ತ ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿಠಲ ಬಿ. ಅಂಚನ್ ಉಪಾಧ್ಯಕ್ಷರಾದ ಗೋವಿಂದ ಜಿ. ಕುಂದರ್, ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ಜತೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಲಿಮಾರು ಇದರ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಫಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಗಣೇಶ ಮಂಟಪದಲ್ಲಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಕರುಣಾಕರ ಶೆಟ್ಟಿ , ಅಧ್ಯಕ್ಷರಾದ ಯೊಗೀಶ್ ಕೆ.ಸುವರ್ಣ ಉಪಾಧ್ಯಕ್ಷರಾದ ಭವಾನಿ ಶಂಕರ್ ರಾವ್ ಫಲಿಮಾರು, ಚಂದ್ರಶೇಖರ್ ಶೆಟ್ಟಿ ಕರ್ನಿರೆ, ಹರೀಶ್ ಶೆಟ್ಟಿ ನಂದಿಮನೆ, ದಿನೇಶ್ ಫಲಿಮಾರು, ಜಗದೀಶ್ ಪಾವಂಜೆ ಫಲಿಮಾರು, ಗೌರವ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ನರ್ಪಾಡಿ ಕಿನ್ನಿಮೂಲ್ಕಿ ಉಡುಪಿ ಇದರ 19 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಶಂಕರ್ ಪದ್ಮಶಾಲಿ ಕಿನ್ನಿಮೂಲ್ಕಿ, ಅಧ್ಯಕ್ಷರಾದ ನಾರಾಯಣ ರಾವ್ ಕನ್ನರ್ಪಾಡಿ, ಕಾರ್ಯಾಧ್ಯಕ್ಷ ಸಂಜೀವ ಎ, ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ,
ಕಟಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 40ನೇಯ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವವು ವೇದಮೂರ್ತಿ ಶ್ರೀ ಪುರುಷೋತ್ತಮ ಆಚಾರ್ಯ ಅಗಳಿಮಠ ಇವರ ಪೌರೋಹಿತ್ಯದಲ್ಲಿ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದಡಾ| ಎ. ರವೀಂದ್ರನಾಥ ಶೆಟ್ಟಿ,ಶ್ರೀ ನಾರಾಯಣ ಭಟ್ ಅರ್ಚಕರು,ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ, ಕೋಶಾಧಿಕಾರಿ ಶ್ರೀ ಕಾಮ್ ರಾಜ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಮಹೇಶ್
ಗಣೇಶ ಚತುರ್ಥಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮರುಳ ಶಿಲ್ಪ ಕಲಾವಿದರು ಕಾಪು ಕಡಲ ಕಿನಾರೆಯಲ್ಲಿ ವಿಭಿನ್ನವಾಗಿ ಗಣಪತಿಯನ್ನು ಚಿತ್ರಿಸಿದ್ದಾರೆ. ಸ್ಯಾಂಡ್ ಥೀಂ ನ ಮೂರು ಜನ ಕಲಾವಿದರಾದ ಹರೀಶ್ ಸಾಗ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ಈ ಗಣಪತಿಯ ಬೃಹತ್ ಮರಳು ಶಿಲ್ಪವನ್ನು ರಚಿಸಿದ್ದಾರೆ. ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರನ್ನು ಈ ಕಲಾಕೃತಿ ಸೆಳೆದಿದೆ. ಗಜಾನನ ಹೆಸರಿನ ಮರಳು ಶಿಲ್ಪ, ಪ್ಲಾಸ್ಟಿಕ್- ಪರಿಸರಕ್ಕೆ ಮಾರಕವಾದ
ಬ್ರಹ್ಮಾವರ :ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ ಶಿಕ್ಷಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ, ಮನೋರಂಜನೆ ಕಾರ್ಯಕ್ರಮವನ್ನು ನೀಡಿದರು. ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ. ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಕಾರ್ಯಕ್ರಮ ಆಯೋಜನೆ ಕುರಿತು
ಕರ್ನಾಟಕ ಬ್ಯಾಂಕಿನ ಸಿ.ಎಸ್.ಆರ್. ನಿಧಿಯಡಿ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕೊಡಮಾಡಿದ 5,20,750ರೂ. ವೆಚ್ಚದ 6 ಆಸನಗಳ ವಿದ್ಯುತ್ ಚಾಲಿತ ವಾಹನವನ್ನು ಬ್ಯಾಂಕಿನ ಅಧಿಕಾರಿಗಳು ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರಿಗೆ ಹಸ್ತಾಂತರಿಸಿದರು. ವಾಹನವನ್ನು ಸ್ವೀಕರಿಸಿದ ನಾಡೋಜ ಡಾ| ಜಿ. ಶಂಕರ್ ಮಾತನಾಡಿ, ದ.ಕ. ಮೊಗವೀರ ಮಹಾಜನ ಸಂಘ ಮತ್ತು ಕ್ಷೇತ್ರಾಡಳಿತ ಮಂಡಳಿ ಮೂಲಕ ನಾವು ಮಾಡಿಕೊಂಡಿರುವ ಮನವಿಗೆ
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಇವರ ಜಂಟಿ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10 ನೇ ತೋಕೂರು, ಹಳೆಯಂಗಡಿ ಇವರ ಪ್ರಾಯೋಜಕತ್ವದಲ್ಲಿ ಭಾರತ ರತ್ನ ದಿ. ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಫೇಮಸ್
ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಳನ್ನು ಬಿಂಬಿಸುವ ಹಾಗೂ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮತ್ತು ಜಾಗತಿ ಮಟ್ಟದಲ್ಲಿ ಗುರತಿಸುವ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಜನರಿಗೆ ಬೈಂದೂರು ಕ್ಷೇತ್ರದ ಬಗ್ಗೆ ಹೊಸ ಚಿಂತನೆಯನ್ನು ಸೃಷ್ಟಿಸುವ ಸಲುವಾಗಿ ಬೈಂದೂರು ಉತ್ಸವ ಆಚರಿಸಲು ಚಿಂತಿಸಲಾಗಿದೆ ಎಂದು ಶಾಸಕ ಗುರುರಾಜ್ ಗಟಿಹೊಳೆ ಹೇಳಿದರು. ಅವರು ಉಪ್ಪುಂದ




























