Home ಕರಾವಳಿ Archive by category ಮಂಗಳೂರು (Page 210)

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿಯ ರೂವಾರಿ ರಥಬೀದಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ

ಮಂಗಳೂರು ರಥಬೀದಿ ವೆಂಕಟರಮಣ ದೇವಸ್ಥಾನ, ಆಚಾರ್ಯಮಠ ವಠಾರದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಪತ್ನಿ ಸಮೇತರಾಗಿ ಭೇಟಿ ನೀಡಿ ಶಾರದೆಯ ದರ್ಶನ ಪಡೆದರು. ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್

ಕರ್ನಾಟಕ ರಾಜ್ಯ ರೈತಸಂಘ ಪಾಣೆಮಂಗಳೂರು ನೂತನ ಗ್ರಾಮ ಘಟಕ ರಚನೆ ಹಾಗೂ ವಿಚಾರ ಸಂಕೀರಣ

ಮೇಲ್ಕಾರಿನ ಬಿರ್ವ ಸಂಕೀರ್ಣ ದಲ್ಲಿ ರಾಜ್ಯ ರೈತ ಸಂಘದ ನೂತನ ಪಾಣೆ ಮಂಗಳೂರು ಗ್ರಾಮ ಘಟಕದ ಉದ್ಘಾಟನೆ ಹಾಗೂ ವಿಚಾರ ಸಂಕೀರಣದ ಉದ್ಘಾಟನೆ ಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಉದ್ಘಾಟಿಸಿ ರೈತರ ಮುಂದಿರುವ ಸವಾಲುಗಳು ಎದುರಿಸಲು ಸಂಘಟಿತ ಹೋರಾಟ ಅಗತ್ಯ ಅಲ್ಲದೇ ಎಲ್ಲಾ ಕ್ಷೇತ್ರದಲ್ಲಿರುವವರಿಗೆ ಅವರದ್ದೆ ಆದ ಸಂಘಟನೆಗಳಿವೆ ಆದರೇ ಸಮಾಜದ ದೊಡ್ಡ ಸಮೂಹವಾದ ರೈತ ಸಂಘಟನೆಗಳು ರಾಜಕೀಯವಾಗಿ ಹಾಗೂ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಒಂದಾಗದಿರುವುದು

ಕಸದ ರಾಶಿಯಲ್ಲಿ ರೈಲ್ವೇ ಲೋಗೋ ಇರುವ ಗಾಂಧೀಜಿಯ ಭಾವಚಿತ್ರ ವೀಡಿಯೋ ವೈರಲ್

ದೇಶಾದ್ಯಂತ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಆದರೆ ಇದೀಗ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶ ಭಾಗದ ಸಿಕ್‍ಲೈನ್ ರಿಕ್ಷಾ ನಿಲ್ದಾಣದ ಸಮೀಪದಲ್ಲಿ ಕಸದ ರಾಶಿಯಲ್ಲಿ ರೈಲ್ವೇ ಲೋಗೋ ಇರುವ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರ ಕಸದ ರಾಶಿಯಲ್ಲಿ ಇದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಶ್ರದ್ದಾ ಭಕ್ತಿ ಪೂರ್ವಕ ನಡೆದ ಸಾಮೂಹಿಕ ಕುಂಕುಮಾರ್ಚನೆ

ಮಂಗಳೂರು ನಗರದ ರಥಬೀದಿಯಲ್ಲಿ 100 ನೇ ವರ್ಷಾಚರಣೆ ಸಂಭ್ರಮ ಆಚರಿಸುತ್ತಿರುವ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಸಹಸ್ರ ಚಂಡಿಕಾ ಮಹಾ ಯಾಗ ಅಂಗವಾಗಿ ಸಾಮೂಹಿಕ ಕುಂಕುಮಾರ್ಚನೆ ಆಯೋಜಿಸಲಾಗಿದ್ದು ನೂರಾರು ಮಾತೃವರ್ಗ ಶ್ರದ್ದಾ ಭಕ್ತಿ ಪೂರ್ವಕ ಸಾಮೂಹಿಕ ಕುಂಕುಮಾರ್ಚನೆ ಯಲ್ಲಿ ಪಾಲ್ಗೊಂಡರು .

ತುಳು ಭಾಷೆ ತುಳಿದು ಕನ್ನಡ ಹೇರಿಕೆ ಆರೋಪಿಸಿ ಪ್ರತಿಭಟನೆ

ಮಂಗಳೂರು: ತುಳುನಾಡಿನಲ್ಲಿ ತುಳು ಭಾಷೆಯನ್ನು ತುಳಿದು ಕನ್ನಡ ಹೇರಿಕೆ ಮಾಡಲಾಗ್ತಿದೆ ಎಂದು ಆರೋಪಿಸಿ ಮಂಗಳೂರು ನಗರದ ಕ್ಲಾಕ್‌ ಟವರ್ ಬಳಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ಇಂದು ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಚುನಾವಣಾ

ಶ್ರೀ ಮಂಗಳಾದೇವಿ ದೇವಸ್ಥಾನ : ದಸರಾ ಕವಿ ಸಂಭ್ರಮ ಸಾಧಕರಿಗೆ ಸನ್ಮಾನ

ದಸರಾ ಸಂಭ್ರಮಾಚರಣೆಯ ಅಂಗವಾಗಿ ಆಸಕ್ತಿ ಮಂಗಳೂರು, ಕಲಾಸಕ್ತರ ಬಳಗ ಹಾಗೂ ಚುಟುಕು ಸಾಹಿತ್ಯ ಪರಿಷತ್ ಅವರು ಆಯೋಜನೆ ಮಾಡಿದಂತಹ ಕವಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಆಕಾಶ್ ಬೈಜೂಸ್ ಸಂಸ್ಥೆಯಿಂದ ಎನ್‍ಇಇಟಿ, ಜೆಇಇ ಕೋಚಿಂಗ್

ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಸಬಲೀಕರಣಗೊಳ್ಳಬೇಕು ಎಂಬ ಕಾರಣಕ್ಕೆ ಆಕಾಶ್ ಬೈಜೂಸ್ ಎಲ್ಲರಿಗೂ ಶಿಕ್ಷಣವನ್ನು ಪ್ರಾರಂಭಿಸಿದೆ. ಎಎನ್‍ಟಿಎಚ್‍ಇ 2022ರ ಭಾಗವಾಗಿ ಸುಮಾರು 2,000 ಹಿಂದುಳಿದ ವಿದ್ಯಾರ್ಥಿನಿಯರಿಗೆ ಉಚಿತ ಎನ್‍ಇಇಟಿ ಮತ್ತು ಜೆಇಇ ಕೋಚಿಂಗ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದ್ದು, ಅದಕ್ಕಾಗಿಯೇ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಿದೆ ಎಂದು ಆಕಾಶ್ ಬೈಜೂಸ್

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ : ಲಲಿತಾ ಪಂಚಮಿ ಆಚರಣೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ನವರಾತ್ರಿ ಉತ್ಸವಕ್ಕೆ ಪ್ರಸಿದ್ಧಿ ಪಡೆದಿದೆ. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕಟೀಲು ದೇವಳಕ್ಕೆ ಲಕ್ಷಾಂತರ ಮಂದಿ ಭಕ್ತರು ಬೇಟಿ ನೀಡುತ್ತಿದ್ದಾರೆ. ಬೇರೆ ದೇವಸ್ಥಾನಗಳಲ್ಲಿನ ನವರಾತ್ರಿ ಉತ್ಸವಕ್ಕಿಂತ ಇಲ್ಲಿನ ಆಚರಣೆ ಭಿನ್ನವಾಗಿರುತ್ತದೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಹುಲಿ ವೇಷ ಮೆರವಣಿಗೆ ಬರುವುದು ಇಲ್ಲಿನ ವಿಶೇಷ. ನವರಾತ್ರಿಯ ಲಲಿತಾ ಪಂಚಮಿಯ ದಿನ ಕಟೀಲು ಗ್ರಾಮ, ಕೊಡೆತ್ತೂರು, ಮೂಲ

ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಕರಾವಳಿ ಉತ್ಸವ ಹಮ್ಮಿಕೊಳ್ಳುವ ಬಗ್ಗೆ ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು. ಅವರು ಸೆ.27ರ ಮಂಗಳವಾರ ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಗರದ

ಶಾಂತಿ ಸಾಮರಸ್ಯ ಹದಗೆಡುವ ಸಂಘಟನೆಗಳ ವಿರುದ್ದ ಕ್ರಮಕೈಗೊಳ್ಳಲಿ : ಯು.ಟಿ.ಖಾದರ್

ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಯಾವುದೇ ಸಂಘಟನೆ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಲಿ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ದ ಕ್ರಮ ಕೈಗೊಳ್ಳಲಿ. ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ವಹಿಸಲಿ. ಒಂದು ಕ್ರಮದ ಮೂಲಕ ಸಮಾಜದಲ್ಲಿ ಅಶಾಂತಿ ಕಡಿಮೆಯಾಗಬೇಕು. ಉತ್ತಮ ಸಮಾಜ