ನಗರದ ಮೋರ್ಗನ್ ಗೇಟ್ ಬಳಿ ಶೂಟೌಟ್ ನಡೆದಿದ್ದು, ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಮಗನಿಗೇ ಆಕಸ್ಮಿಕವಾಗಿ ಬಿದ್ದು ಅವಾಂತರಕ್ಕೆ ಕಾರಣವಾಗಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ. ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರ ಜಟಾಪಟಿ ನಡೆದಿದೆ ಎನ್ನಲಾಗಿದೆ. ರಾಜೇಶ್ ಪ್ರಭು ಸಿಟ್ಟಿನಿಂದ
ಉಳ್ಳಾಲ: ಮಂಗಳೂರಿನ ನಂತೂರಿನಲ್ಲಿ ಕಾರ್ಯಚರಿಸುತ್ತಿರುವ ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸೋಮೇಶ್ವರ ಕಡಲ ಕಿನಾರೆಯ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಶಾಸಕ ಯು.ಟಿ ಖಾದರ್ ಸ್ವಚ್ಛ ಭಾರತ ಅಭಿಯಾನ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಾಲೇಜಿನಲ್ಲಿ ಕಲಿತ ಪಾಠಗಳು ಆತನ ವ್ಯಕ್ತಿತ್ವ ರೂಪಿಸುತ್ತದೆ. ಅಲ್ಲಿ ಪಡೆದ ಶಿಕ್ಷಣವೇ ಅವರ ಮುಂದಿನ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆಯಾಗಬಲ್ಲದು.
ದಕ್ಷಿಣ ಕನ್ನಡ ಜಿಲ್ಲೆಯ ತುಳು ಅಧಿಕೃತ ಭಾಷೆ ಪೊರಂಬಾಟ್ ಸಮಿತಿ ವತಿಯಿಂದ ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವು. ಆದರೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರಿಂದ ಪ್ರತಿಭಟನೆಯನ್ನು ರದ್ದುಮಾಡಬೇಕಿತ್ತು. ರಾಜಕೀಯ ಕಾರ್ಯಕ್ರಮ, ರಾಜಕೀಯ ಪ್ರತಿಭಟನೆಗೆ ಅವಕಾಶ ಕೊಡುತ್ತಾರೆ. ಆದರೆ ನಮ್ಮ ತುಳುವರ ಶಾಂತಿಯುತ ಪ್ರತಿಭಟನೆಗೆ ಯಾಕೆ ಅವಕಾಶ ನೀಡಿಲ್ಲ ಎಂದು ಯೋಗೀಶ್ ಶೆಟ್ಟಿ ಜೆಪ್ಪು ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿ
ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 7 ರಿಂದ ಅಕ್ಟೋಬರ್ 16ರ ವರೆಗೆ ನಡೆಯಲಿದೆ. ನವರಾತ್ರಿಯ ಸಂದರ್ಭ ಪ್ರತಿದಿನ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪಿ ರಾಮನಾಥ ಹೆಗ್ಡೆ ರಘುರಾಮ ಉಪಾದ್ಯಾಯ, ಅರುಣ ಐತಾಳ್ ರಾಮನಾಯ್ಕ ಉಪಸ್ಥಿತರಿದ್ದರು.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ ಮೂರು ಜನ ರೈತರ ಹತ್ಯೆ ಮಾಡಿರುವುದನ್ನು ಖಂಡಿಸಿ ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ರೈತ, ದಲಿತ, ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ ಮಾತನಾಡಿದ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ
ಮೂಡಬಿದ್ರೆ ಬೆಳುವಾಯಿ ಗ್ರಾಮದ ತರುಣಿಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾಂತ ಇದೀಗ ತನ್ನ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2017ರ ಜೂನ್ 18ರಂದು ಮೂಡಬಿದ್ರೆಯ ತರುಣಿಯನ್ನು ಬೆಂಗಳೂರಿ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ
SRINIVAS UNIVERSITY || CHARLES K C CREATED A WORLD RECORD AS LARGEST PATROITIC PORTRAIT BY SCREW ART
AN UNDERGRADUATE STUDENT CHARLES K C, STUDYING BBA PORT, SHIPPING MANAGEMENT & LOGISTICS AT SRINIVAS UNIVERSITY PANDESHWAR, HAS CREATED A WORLD RECORD AS LARGEST PATROITIC PORTRAIT BY SCREW ART . CHARLES KC (BORN ON 6TH FEBRUARY 2001) A CREATIVE ARTIST OF MANGALORE, KARNATAKA. MADE A PORTRAIT OF FREEDOM FIGHTER SWAMI VIVEKANANDA MEASURING 4 FEET […]
ಮಂಗಳೂರಿನ ಸೃಜನಶೀಲ ಕಲಾವಿದ ಚಾರ್ಲ್ಸ್ ಕೆ.ಸಿ ಅವರು ಸ್ಕ್ರೂಗಳನ್ನು ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಬಿಡಿಸಿ ವಿಶ್ವ ದಾಖಲೆ ಸೃಷ್ಠಿಸಿದ್ದಾರೆ. ಅವರು 2,768 ಸ್ಕ್ರೂಗಳನ್ನು ಬಳಸಿ ಸ್ವಾಮಿ ವಿವೇಕಾನಂದ ಕಲಾಕೃತಿಯನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ. ಡಾ. ಸೋನಿಯಾ ನೊರೊಹ್ನಾ ಹಾಗೂ ಕಾಲೇಜಿನ ಡೀನ್ ಪ್ರೊ. ಕೀರ್ತನ್ ರಾಜ್ ಅವರ ಮಾರ್ಗದರ್ಶನದಲ್ಲಿ ಚಾರ್ಲ್ಸ್ ಅವರು ಈ ಒಂದು ಕಲಾಕೃತಿಯನ್ನು ರಚಿಸಿದ್ದಾರೆ. ಚಾರ್ಲ್ಸ್ ಅವರ ಈ ಕಲಾಕೃತಿಗೆ ವ್ಯಾಪಕ
ಇ ಕಾಮರ್ಸ್ ಸಂಸ್ಥೆಯಾದ ಅಮೆಝಾನ್‌ನ ಕಾನೂನು ಸಲಹೆಗಾರರು ಭಾರತದ ಸರಕಾರದ ಅಧಿಕಾರಿಗಳಿಗೆ ನೀಡಿದ್ದಾರೆನ್ನುವ ೮,೫೪೬ ಕೋಟಿ ರೂ.ಗಳು ಲಂಚ ಪ್ರಕರಣವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟ ಪಡಿಸಬೇಕು ಎಂದು ಎಐಸಿಸಿ ವಕ್ತಾರೆ, ರಾಜ್ಯಸಭಾ ಸದಸ್ಯೆ ಡಾ. ಅಮೀ ಯಜ್ಞಿಕ್ ಆಗ್ರಹಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದೊಂದು ಬಹುದೊಡ್ಡ ಹಗರಣವಾಗಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ದೇರೆಬೈಲು ಕೊಂಚಾಡಿ ಶ್ರೀ ಮಹಾಂಕಾಳಿ ದೈವಸ್ಥಾನದ ಬಳಿ ನಡೆದ ಕಾರ್ಯಕಾರಿಣಿ ಸಭೆಯನ್ನು ಶಾಸಕ ಡಾ. ವೈ.ಭರತ್ ಶೆಟ್ಟಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಂಡಲ ಎ ಸ್ ಸಿ ಮೋರ್ಚಾ ಅಧ್ಯಕ್ಷ ಆನಂದ ಪಾಂಗಳ, ಮೋರ್ಚಾ ಜಿಲ್ಲಾ ಅಧ್ಯಕ್ಷ ವಿನಯ ನೇತ್ರ ,ಮಂಡಲ ಪ್ರದಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಮ.ನ.ಪಾ ಸದಸ್ಯೆಯರಾದ ರಂಜಿನಿ


















