ನಾನು ಇಂಧನ ಸಚಿವನಾಗಿದ್ದ ಸಂದರ್ಭ ವ್ಯಕ್ತಿಯೋರ್ವ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ಅಧಿಕಾರಿಗಳು ದೂರು ದಾಖಲಿಸಿದ್ದರು. ಆತ ಅಧಿಕಾರಿಗಳನ್ನೂ ನಿಂದನೆ ಮಾಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದ್ದು, ಹೀಗಾಗಿ ನ್ಯಾಯಾಲಯಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಸುಳ್ಯ ತಾಲೂಕಿನ ಗುತ್ತಿಗಾರು ವಳಲಂಬೆಯ ಹೊಸೋಳಿಕೆ ಗಿರಿಯಪ್ಪ ಗೌಡ ಅವರ ಧರ್ಮ ಪತ್ನಿ ಶ್ರೀಮತಿ ಗಂಗಮ್ಮ ಅವರು ಸೆಪ್ಟಂಬರ್ 6ರಂದು ಅಸೌಖ್ಯದಿಂದ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಇಂದು ಹೊಸೊಳಿಕೆಯ ತಮ್ಮ ಸ್ವ ಗೃಹದಲ್ಲಿ ನೆರವೇರಿತ್ತು.ಈ ಸಂದರ್ಭದಲ್ಲಿ ಮೃತರ ಪತಿ ಗಿರಿಯಪ್ಪ ಗೌಡ ಹೊಸೊಳಿಕೆ, ಪುತ್ರಿಯರಾದ ಶ್ರೀಮತಿ ರೇಷ್ಮಾ ಗಂಗಾಧರ್ ಕೆದ್ಕಾರ್, ಶ್ರೀಮತಿ ಪ್ರೇಮ ಕುಶಾಲಪ್ಪ ಸೋಮರ್ ಪೇಟೆ ಸೇರಿದಂತೆ ಕುಟುಂಬಸ್ಥರು ಮತ್ತು
ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ಸರಸ್ವತಿ ಕಾಮತ್ ಅವರ ಮೇಲೆ ಚುನಾವಣೆಯ ಸಂದರ್ಭದಲ್ಲಿ ಹಲ್ಲೆ ನಡೆಸಿದ ಕೇಸಿಗೆ ಒಳಗಾಗಿದ್ದ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆಯ ತೀರ್ಪು ನೀಡಿದೆ. 2013 ರ ಚುನಾವಣೆ ಸಂದರ್ಭ ಮರ್ಕಂಜದ ಕುದ್ಕುಳಿ ಎಂಬಲ್ಲಿ ಘಟನೆ ನಡೆದಿತ್ತು.ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿ,
ಸುಳ್ಯ: ಕೇರಳದಿಂದ ಕರ್ನಾಟಕಕ್ಕೆ ಬರುವವರು ಚೆಕ್‌ಪೋಸ್ಟ್ ಬಿಟ್ಟು ಇತರ ಕಾಲುದಾರಿಗಳಲ್ಲಿ ಆಗಮಿಸುತ್ತಿದ್ದು, ಇಂತವರ ಮೇಲೆ ಹೆಚ್ಚು ನಿಗಾ ಇರಿಸಬೇಕೆಂದು ಸಚಿವ ಎಸ್ ಅಂಗಾರ ತಿಳಿಸಿದ್ದಾರೆ. ಅವರು ಮಂಡೆಕೋಲು ಗ್ರಾಮದಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇತರ ತಾಲೂಕುಗಳೊಂದಿಗೆ ಸುಳ್ಯವನ್ನು ಹೋಲಿಸಿದರೆ, ಸುಳ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗಿದ್ದು ಇದಕ್ಕೆ ಇಲ್ಲಿನ ಜನರು ನೆರೆಯ ಕಾಸರಗೋಡು
ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಶೇಷಮ್ಮ ಎಂಬವರ ಸ್ವಾಧೀನದಲ್ಲಿರುವ ಜಾಗದಲ್ಲಿ ನೆಟ್ಟ ಗೇರು ಗಿಡಗಳನ್ನು ಅರಣ್ಯಾಧಿಕಾರಿ ಕಡಿದಿರುವುದಕ್ಕೆ ಸುಳ್ಯ ತಾಲೂಕಿನ ರೈತ ಸಂಘ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಅವರು, ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಶೇಷಮ್ಮ ಎಂಬವರ ಸ್ವಾಧೀನದಲ್ಲಿ ಸುಮಾರು ೫೦ ವರ್ಷಗಳಿಂದ ಇದ್ದ ಸ್ಥಳವಾಗಿರುತ್ತದೆ. ಈ ಸ್ಥಳದಲ್ಲಿ ಕಸಿ ಗೇರು ಗಿಡವನ್ನು
ಕಡಬ:ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ. ಈ ರಸ್ತೆಯ ಮೂಲಕ ತೆರಳುವವರು ಜಾಗ್ರತೆಯಿಂದ ಸಂಚರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಎರಡು ವಾರದ ಹಿಂದೆ ಸುರಿದ ಮಳೆಯಿಂದಾಗಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನ ಕಲ್ಪರ್ಪೆ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿದ್ದ ತ್ಯಾಜ್ಯ ತುಂಬಿದ ಚೀಲಗಳು ತೋಡಿನ ಮೂಲಕ ಬಂದು ಪಯಶ್ವಿನಿ ನದಿಯನ್ನು ಸೇರಿತ್ತು. ಈ ಬಗ್ಗೆ ಅಲ್ಲಿಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದರು. ಈ ಬಗ್ಗೆ ನಗರ ಪಂಚಾಯತ್‌ಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಇದೀಗ ಶ್ರೀ ವನದುರ್ಗಾ ದೈವಸ್ಥಾನ ಕಲ್ಚರ್ಪೆ ಸಮಿತಿಯವರು ತೋಡಿನಲ್ಲಿ
ಸುಳ್ಯ :ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ 15ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ರೂಪಾಯಿ ಮಂಜೂರಾದ ಅನುದಾನದಲ್ಲಿ ಅಂಬ್ರೋಟಿ-ಉದ್ದಂತಡ್ಕ ರಸ್ತೆ ಕಾಂಕ್ರಿಟೀಕರಣಗೊಂಡು ಸಾರ್ವಜನಿಕ ಸಂಚಾರಕ್ಕೆ ಇಂದು ಅನುವು ಮಾಡಿಕೊಡಲಾಗಿದೆ. ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಸಿಕೊಂಡ ಮಂಡೆಕೋಲು ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯವರು ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿಗೆ
ಕಡಬ :ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕುಂಡಾಜೆ ಸೇತುವೆಯಲ್ಲಿ ಮಾರುತಿ ಬೆಲೋನೊ ಹಾಗು ಅಲ್ಟೋ ಕಾರು ನಡುವೆ ಅಪಘಾತ ಸಂಭವಿಸಿದೆ. ಮಾರುತಿ ಬೆಲೋನೊ ಕಾರ್ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಳೆಯವರ ಕಾರು ಎಂದು ತಿಳಿದು ಬಂದಿದ್ದು. ಬೆಲೋನೊ ಕಾರು ಕೆ.ಎ ಎಂ.ಜೆ 4683 ಆಲಂಕಾರು ಭಾಗದಿಂದ ಕೊಯಿಲದ ಕಡೆಗೆ ಹೊಗುತ್ತಿದ್ದು. ಅಲ್ಟೋ ಕಾರು ಕೆ.ಎ 21 .ಪಿ.2263 ಉಪ್ಪಿನಂಗಡಿಯಿಂದ ಕಡಬದ ಕಡೆಗೆ
ಬೆಳ್ಳಾರೆ:-ಎಸ್.ವೈ.ಎಸ್. ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆ ಮತ್ತು ಇಸಾಬ ಟೀಂ ಹಾಗೂ ಸುಳ್ಯ ಸಹಾಯಿ ತಂಡದ ವತಿಯಿಂದ ಬೆಳ್ಳಾರೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳ್ಳಾರೆಯ ವಿವಿಧ ಕಡೆಗಳಲ್ಲಿ ಸ್ಯಾನಿಟೈಸೇಶನ್ ನಡೆಸಲಾಯಿತು. ಅಂಗಡಿ ಮುಂಗಟ್ಟುಗಳ ಮುಂಭಾಗ,ಸರಕಾರಿ ಕಛೇರಿ,ಆಸ್ಪತ್ರೆ ಪರಿಸರ,ಶಾಲಾ ವಠಾರ,ಪಂಚಾಯತ್ ಕಛೇರಿ,ಬಸ್ಸ್ಟಾಂಡ್,ಕಂಟೈನ್ ಮೆಂಟ್ ಝೋನ್ ಹಾಗೂ ಸಾರ್ವಜನಿಕರು


















