Home ಕರಾವಳಿ Archive by category ಸುಳ್ಯ (Page 8)

ಸುಳ್ಯ: ಮಂಡೆಕೋಲು ಶಾಲೆಯಲ್ಲಿ ‘ಯಕ್ಷಧ್ರುವ -ಯಕ್ಷಶಿಕ್ಷಣ’ ಯಕ್ಷಗಾನ ಶಿಕ್ಷಣ ಅಭಿಯಾನಕ್ಕೆ ಚಾಲನೆ

ಸುಳ್ಯ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮ ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ

ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ: ಜೀರ್ಣೋದ್ಧಾರಿ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲ ಕ್ಯೆ ಬಂಟ ಶ್ರೀ ಕಾಚು ಕುಜುoಬ ದೈವದ ಮೂಲ ಸ್ಥಾನ ಗರಡಿ ಬೈಲ್ ನಲ್ಲಿ ನೂತನ ವಾಗಿ ನಿರ್ಮಾಣ ವಾಗುತಿರುವ ಶ್ರೀ ಕಾಚು ಕುಜುoಬ ದೈವಸ್ಥಾನದ ಜೀರ್ಣೋಧಾರ ಸಮಿತಿ ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ಗೌಡ ಬಿಳಿಮಲೆ, ಉಪಾಧ್ಯಕ್ಷರಾಗಿ ಶ್ರೀ ಉಮೇಶ್ ಬುಡೆಂಗಿ ಬಲ್ಪ ಹಾಗೂ ಕಾರ್ಯದರ್ಶಿ ಗಳಾಗಿ ಶ್ರೀ ಅನಂದ ಗೌಡ ಜಳಕದ ಹೊಳೆ ಆಯ್ಕೆಯಾದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ kanathur

ಕೆವಿಜಿ ಪಾಲಿಟೆಕ್ನಿಕ್ : ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಭಿವಿನ್ಯಾಸ ಕಾರ್ಯಕ್ರಮ

ಕುರಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ 2025- 26 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಭಿವಿನ್ಯಾಸ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎ.ಓ.ಎಲ್‌.ಇ ಕಮಿಟಿ ‘ಬಿ” ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಪೋಷಕರು ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಾವು ಬದ್ಧರಿದ್ದೇವೆ

ಸರ್ಕಾರಿ ಬಸ್ ಗಳ ನಡುವೆ ಅಪಘಾತ: ಓರ್ವ ಮಹಿಳೆ ಮೃತ್ಯು: 15ಕ್ಕೂ ಹೆಚ್ಚು ಮಂದಿಗೆ ಗಾಯ

ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕುಶಾಲನಗರ ಮೂಲದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಕೆಲವರ ಸ್ಥಿತಿ ಗಂಭೀರವಾಗಿದೆ. ಅರಂತೋಡು

ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸ್ವಸ್ಥವೃತ್ತ ವಿಭಾಗ, ಎನ್ಎಸ್ಎಸ್ ವಿಭಾಗ ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 11ನೇ ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಕೆ ವಿ ಚಿದಾನಂದ, ಅಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಸಂಸ್ಥೆಯ ವಿದ್ಯಾರ್ಥಿ

ಸುಳ್ಯ: ಅಡ್ಕಾರ್‌ನಲ್ಲಿ ಕಾರು ಅಪಘಾತ

ಸುಳ್ಯ: ಸುಳ್ಯದ ಅಡ್ಕಾರ್‌ನಲ್ಲಿ ಡಸ್ಟರ್ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ. ಕಾರು ಕೇರಳ ರಾಜ್ಯದ ನೋಂದಣಿ ಹೊಂದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಶೌರ್ಯ ಮತ್ತು ವಿಪತ್ತು ತಂಡದವರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಕುಟುಂಬಕ್ಕೆ ಶ್ರಮದಾನದ ಮುಖಾಂತರ ಸಹಾಯ

ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಮತ್ತು ನಿಂತಿಕಲ್ಲು ವಲಯದ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕದ ಸುಮಾರು 30 ಮಂದಿ ಸ್ವಯಂಸೇವಕರಿಂದ ಶ್ರಮದಾನದ ಸೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ವಲಯದಲ್ಲಿ ಮಹಾವಿಷ್ಣುಮೂರ್ತಿ ಸಂಘದ ಹಿರಿಯ ಸದಸ್ಯರು ಕಳೆದ 4 ವರ್ಷದಿಂದ ಶೌರ್ಯ ಮತ್ತು ವಿಪತ್ತು ಘಟಕದ ಸಕ್ರಿಯ ಸದಸ್ಯರಾದ ಮಠತಡ್ಕದ ಶ್ರೀ ಶೇಷಪ್ಪ ನಾಯ್ಕ ರವರ ಮನೆಗೆ ದಿನಾಂಕ 10/6/25 ರಂದು ವಿಪರೀತ ಮಳೆಯಿಂದ ಮನೆಯ

ಮುಂಬರುವ ಅಗ್ನಿಪಥ್ ಲಿಖಿತ ಮತ್ತು ದೈಹಿಕ ಸದೃಢತೆಯ ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಆಹೋರಾತ್ರಿ ತರಬೇತಿ ಪ್ರಾರಂಭ

ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ಅಗ್ನಿಪಥ್ ‘ ಯೋಜನೆಯಡಿಯಲ್ಲಿ ಪ್ರತಿ ವರ್ಷ ಅಗ್ನಿವೀರರಾಗಿ ಆಯ್ಕೆ ಮಾಡಲು ನಡೆಸಲಾಗುವ ನೇಮಕಾತಿ, ಲಿಖಿತ ಮತ್ತು ದೈಹಿಕ ಸಾಧ್ಯತೆಯ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದಿನಾಂಕ 18/06/2025 ಬುಧವಾರದಿಂದ ಆಹೋರಾತ್ರಿ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ. ತರಬೇತಿಯು ಮೂರು ವಿಭಾಗದಲ್ಲಿ

ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13.06.2025 ರಂದು ವಿಶ್ವ ಯೋಗ ದಿನದ ಅಂಗವಾಗಿ ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮವನ್ನು ಸೋಣoಗೇರಿಯಲ್ಲಿರುವ ಕೆ ವಿ ಜಿ ಆಯುರ್ವೇದ ಮೂಲಿಕಾ ಉದ್ಯಾನವನದಲ್ಲಿ ಕಾಲೇಜಿನ ದ್ರವ್ಯಗುಣ, ಸ್ವಸ್ಥವೃತ್ತ ವಿಭಾಗ ಹಾಗು ಎನ್ ಎಸ್ ಎಸ್ ವಿಭಾಗದ ಸಹಭಾಗಿತ್ವದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮಲ್ಲಿ ಕಾಲೇಜಿನ ದ್ರವ್ಯಗುಣ,

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ – ಸಿಬ್ಬಂದಿ ವರ್ಗ ದವರಿಗೆ ತರಬೇತಿ ಕಾರ್ಯಾಗಾರ

ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಯ ವತಿಯಿಂದ ದಿನಾಂಕ 12.06 2025ರಂದು ಸಿಬ್ಬಂದಿಗಳಿಗೆ ಅಗ್ನಿನಿವಾರಣೆ ಕ್ರಮ ಮತ್ತು ಅಗ್ನಿಶಮನದ ಬಗ್ಗೆ ತಮ್ಮ ಇಲಾಖೆಯಿಂದ ಒಂದು ದಿನದ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ನಡೆಸಲಾಯಿತು. ತರಬೇತಿ ಕಾರ್ಯಾಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಮಾಹಿತಿ, ಬೇರೆ ಬೇರೆ ವಿಧಗಳ ಅಗ್ನಿ ಅವಘಡಗಳು, ನಿವಾರಣಾ ಹಾಗೂ ಮುನ್ನೆಚ್ಚರಿಕಾ ಕ್ರಮ, ಪ್ರಥಮ