Home Archive by category ರಾಜಕೀಯ (Page 3)

ಮೂಡುಬಿದಿರೆ: ವಾಲ್ಪಾಡಿಯಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ

ಮೂಡುಬಿದಿರೆ: ಭಾರತ ಚುನಾವಣಾ ಆಯೋಗ,‌ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಹಾಗೂ ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರು ಸುಮಂಗಲಿ ಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ದುಡಿಯುತ್ತಿರುವ ಕೂಲಿಕಾರ್ಮಿಕರಿಗೆ ಗುರುವಾರ ಸಂಜೆ ಮತದಾನ ಜಾಗೃತಿ ಮೂಡಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ

ಪುತ್ತೂರು:ಪದ್ಮರಾಜ್ ಪರಿವಾರ ವಾಟ್ಸ್‌ಆಪ್ ಗ್ರೂಪ್ ವಿವಾದ: ನಾರಾಯಣ್ ಪ್ರಲಾಪಕ್ಕೆ ಅಮಳ ರಾಮಚಂದ್ರ ಕಿಡಿ

ಪುತ್ತೂರು: ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ ತಮ್ಮ ಮುಖ ಉಳಿಸಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ. “ಪದ್ಮರಾಜ್ ಪರಿವಾರ” ವಾಟ್ಸ್‌ಆಪ್ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಲ ರಾಮಚಂದ್ರ ಮಾತನಾಡಿ ನಾನು

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ

ಕೊಕ್ಕಡ: ಬಯಲು ಆಲಯ ಪ್ರಖ್ಯಾತ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ದ.ಕ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಕೊಕ್ಕಡ ಸಿಎ ಬ್ಯಾಂಕ್ ನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ವೇಣೂರು ಸಿಎ ಬ್ಯಾಂಕ್ ನ ಅಧ್ಯಕ್ಷ ಸುಂದರ ಹೆಗ್ಡೆ,

ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ : ಪೂರ್ವಭಾವಿ ಸಭೆ

ಮಂಗಳೂರು: ವಿಶ್ವ ನಾಯಕ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದೀಯವರು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಇದೇ ಏಪ್ರಿಲ್ 14 ರಂದು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಇಡೀ ದೇಶವೇ ಈಗ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಚಟುವಟಿಕೆಗಳು ಭರದಿಂದ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಕೆದಂಬಾಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆದಂಬಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಶಾಸಕರಾದ ಅಶೋಕ್ ರೈ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಮುಖಂಡರಾದ ಮುರಳೀಧರ್ ರೈ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ್ ರೈ ಮೊದಲಾದವರು ಇದ್ದರು.

ಪ್ರಣಾಳಿಕೆ ಆಶ್ವಾಸನೆಯೊಳಗೊ, ಆಶ್ವಾಸನೆಯೊಳಗೆ ಪ್ರಣಾಳಿಕೆಯೊ

ಕಾಂಗ್ರೆಸ್ ಪಕ್ಷವು 18ನೇ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಇವೆಲ್ಲ ವಿದೇಶಗಳಿಂದಲೇ ಬಂದ ಪದ್ಧತಿಗಳು. ಆದರೆ ಆಶ್ವಾಸನೆಗಳನ್ನು ನೀಡುವುದು ಮಾನವ ಸ್ವಭಾವದಲ್ಲೇ ಇದ್ದು, ಅದು ಆದಿ ಮಾನವನಿಂದಲೇ ಆರಂಭವಾಗಿದೆ. ಅದಕ್ಕೆಲ್ಲ ಖಚಿತ ದಾಖಲೆ ಕೊಡುವುದಕ್ಕಂತೂ ಸಾಧ್ಯವಿಲ್ಲ. ಮದುವೆಯಾಗುವಾಗ ನಿನ್ನನ್ನು ಚಂದ್ರ ಲೋಕಕ್ಕೆ

ಬಿಜೆಪಿಗೆ ನನ್ನನ್ನು ಕೊಳ್ಳುವ ತಾಕತ್ತು ಇಲ್ಲ : ಪ್ರಕಾಶ್ ರಾಜ್

ಜಾಲ ತಾಣಗಳಲ್ಲಿ ಕೆಲವು ಬಿಜೆಪಿಗರು ನಟ ಪ್ರಕಾಶ್‌ರಾಜ್ ಬಿಜೆಪಿ ಸೇರುವುದಾಗಿ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಉತ್ತರಿಸಿರುವ ಪ್ರಕಾಶ್ ರಾಜ್ ಅವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕ ಸಿರಿವಂತಿಕೆ ಹೊಂದಿಲ್ಲ ಎಂದು ಉತ್ತರಿಸಿದ್ದಾರೆ. ಬಿಜೆಪಿಯ ಖರೀದಿ ರಾಜಕಾರಣ ನಡೆಯಬಹುದು. ನನ್ನನ್ನು ಕೊಂಡುಕೊಳ್ಳುವ ಯೋಗ್ಯತೆ ಆ ಕಡೆ ಇಲ್ಲ ಎಂದೂ ಪ್ರಕಾಶ್ ರಾಜ್ ಹೇಳಿದ್ದಾರೆ. ನಟ ರಾಜಕಾರಣಿ ಪ್ರಕಾಶ್ ರಾಜ್ ಸದ್ಯ ತೆಲುಗಿನ ಪಾರ್ಟ್ ಒನ್, ಪುಷ್ಪ ಪಾರ್ಟ್ ಟು, ಓಜಿ

ಮತ ಗರ್ಜನೆಯ ಗೃಹಿಣಿ

ಹದಿನೆಂಟನೆಯ ಲೋಕ ಸಭೆಗೆ ಚುನಾವಣೆ ಪ್ರಕ್ರಿಯೆ ಮುಂದುವರಿದಿದೆ. ಭಾರತದಲ್ಲಿ ಚುನಾವ್ ಎಂದರೆ ಆಯ್ಕೆ ಎಂಬ ಶಬ್ದದಿಂದ ಈ ಚುನಾವಣೆ ಎಂಬ ಶಬ್ದವನ್ನು ಕನ್ನಡದವರು ಎರವಲು ಪಡೆದುಕೊಂಡಿದ್ದಾರೆ. ಆಯ್ಕೆ, ಅಜಪು, ತೇರ್ವು, ತೇರ್ಗಡೆ ಮೊದಲಾದ ದ್ರಾವಿಡ ನುಡಿಗಳಿದ್ದು ಅವುಗಳಿಂದಲೇ ತಮ್ಮ ನುಡಿ ಟಂಕಿಸಿಕೊಳ್ಳಲಾಗದ ಶಬ್ದ ಬ್ರಹ್ಮರೆಲ್ಲ ಕನ್ನಡದಲ್ಲಿ ಬಂದು ಹೋಗಿದ್ದಾರೆ. ಅದು ಅಲ್ಲೇ ಇರಲಿ ಈ ಚುನಾವಣೆ ಎಲ್ಲಿ, ಯಾವಾಗ ಆರಂಭವಾಯಿತು; ಏಕೆ ಆರಂಭವಾಯಿತು ಎಂದು ತಿಳಿಯುವುದು

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಅವರು ಪೂಜೆ ಸಲ್ಲಿಸಿದರು. ಬಳಿಕ ಬಂಟ್ಸ್ ಹಾಸ್ಟೆಲ್ ನ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಗೆ ಸಾಗಿಬಂತು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುರಭವನದ ಹೊರಭಾಗದಲ್ಲಿ ಬಿಜೆಪಿ ಪ್ರಚಾರ

ನಾಮಪತ್ರ ಸಲ್ಲಿಕೆಗೆ ಮುನ್ನ ಕ್ಯಾ. ಬೃಜೇಶ್ ಚೌಟರಿಗೆ ಹರಸಿದ ‘ನಾರೀಶಕ್ತಿ’

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬೃಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಮಹಿಳೆಯರು, ತಾಯಂದಿರ ಬೆಂಬಲದ ಸಂಕೇತವಾಗಿ ಚುನಾವಣಾ ಠೇವಣಿಯ ಮೊತ್ತಕ್ಕೆ ಕಿರು ದೇಣಿಗೆಗಳನ್ನು ಸಲ್ಲಿಸಲಾಯಿತು. ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕ್ಯಾ. ಚೌಟರಿಗೆ ಮಹಿಳೆಯರು ಆರತಿ ಎತ್ತಿ, ತಿಲಕವಿಟ್ಟು, ದೇಣಿಗೆ ನೀಡಿ ಗೆದ್ದು ಬರುವಂತೆ ಹರಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು,