ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸಿದ್ದರಾಮಯ್ಯ ಅವರನ್ನ ಬುಧವಾರ ತಡರಾತ್ರಿ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಜೊತೆಗೆ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರೇ ಮುಂದುವರಿಯಲಿದ್ದಾರೆ ಎಂದು
ಸಕಲೇಶಪುರ ಕ್ಷೇತ್ರದ ನೂತನ ಶಾಸಕ ಸಿಮೆಂಟ್ ಮಂಜುನಾಥ್ ಅವರಿಗೆ ಸಕಲೇಶಪುರ ಕ್ಷೇತ್ರದ ಕಟ್ಟಾಯ ಹೋಬಳಿ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸಿಮೆಂಟ್ ಮಂಜು ರವರ ಮನೆಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಬಿ.ಬಿ ಶಿವಪ್ಪನವರು ಬಳಸುತ್ತಿದ್ದ ಶಾಲು ಮತ್ತು ಪೆನ್ ಅನ್ನು ಉಡುಗೊರೆಯಾಗಿ ಸಿಮೆಂಟ್ ಮಂಜುನಾಥ್ ಪಡೆದರು.
ವಿಧಾನಸಭೆ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಸರಾಸರಿ ಶೇ. 72.67 ಮತದಾನ ದಾಖಲಾಗಿದೆ. ಇದರೊಂದಿಗೆ 2,615 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದಂತಾಗಿದೆ. 224 ಕ್ಷೇತ್ರಗಳ 58,545 ಮತಗಟ್ಟೆಗಳಲ್ಲೂ ಮತದಾನ ಮುಗಿದಿದೆ. ಈ ಬಾರಿ ಎಲ್ಲೂ ಮರು ಮತದಾನ ಇಲ್ಲದಿರುವುದು ವಿಶೇಷ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ
ಸಕಲೇಶಪುರ : ಧರ್ಮಸ್ಥಳದಲ್ಲಿ ಹಸೆಮಣೆ ಏರಿದ ನವ ದಂಪತಿಗಳಿಬ್ಬರು ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ಪ್ರಸಂಗ ನಡೆಯಿತು .ರೋಹಿತ್ ಎಂಬ ವರ ಸಕಲೇಶಪುರ ಶಾಪ್ ಸಿದ್ದೇಗೌಡ ಶಾಲೆಯಲ್ಲಿ ಮತ ಚಲಾಯಿಸಿದರೆ, ನಂದಿನಿ ಎಂಬ ವದು ಕುಡುಗರಹಳ್ಳಿಯಲ್ಲಿರುವ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು.
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಇಂದು 90 ವರ್ಷ ಮೇಲ್ಪಟ್ಟ ವೃದ್ದೆಯರು ಮತದಾನ ಮಾಡಿದರು.ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಹಸಗವಳ್ಳಿಯ ರಂಗನಾಥ ಪ್ರೌಡಶಾಲೆಯ ಮತಗಟ್ಟೆ ಸಂಖ್ಯೆ 135 ರಲ್ಲಿ 99 ವರ್ಷದ ವೃದ್ಧೆ ಸಿದ್ದಮ್ಮ ನೆಡೆದು ಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಯಸಳೂರು ಹೋಬಳಿಯ ಚಂಗಡಹಳ್ಳಇ ಪಂಚಾಯತಿ ವ್ಯಾಪ್ತಿಯ ಬಸ್ಕಲ್ ಗ್ರಾಮದ 99 ವರ್ಷದ ವಯೋವೃದ್ಧ ಬಿಳಿಗಮ್ಮ ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.ಹಾಗೆ 97
ಬೇಲೂರು ತಾಲೂಕಿನ ಕೋಗಿಲೆ ಮನೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಿಕ್ಕೋಲೆ ಗ್ರಾಮದ ಮತಗಟ್ಟೆ ಸಂಖ್ಯೆ 211 ರಲ್ಲಿ ಮತದಾನ ಮಾಡಿದ ಜಯಣ್ಣ ಎಂಬುವ 48 ವರ್ಷದ ವ್ಯಕ್ತಿ ಮತದಾನದ ನಂತರ ಮತದಾನ ಕೇಂದ್ರದ ಹೊರಗಡೆ ಹೃದಯಘಾತದಿಂದ ಮೃತಪಟ್ಟಿದ್ದಾರೆ
ಮತದಾನ ಮಾಡದವರಿಗೆ ರಾಜ್ಯದ ಕೆಲವು ಪ್ರವಾಸಿ ತಾಣಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮತದಾನ ದಿನದ ಮೊದಲೇ ಕೆಲವು ಸ್ಥಳಗಳಲ್ಲಿ ಮೇ 10ರಂದು ಪ್ರವೇಶವಿಲ್ಲ ಎಂಬ ಬೋರ್ಡ್ ಲಗತ್ತಿಸಲಾಗಿದ್ದು, ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆಯಿಂದಲೇ ಇಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಕುಪ್ಪಳ್ಳಿ ಯಲ್ಲಿರುವ ಕವಿಮನೆ, ಕುವೆಂಪು ಜನ್ಮಸ್ಥಳ,
ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ಗರ್ಡಾಡಿಯ ಸೈಂಟ್ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 123 ರಲ್ಲಿ ಮತ ಚಲಾಯಿಸಿದರು. ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಹಬ್ಬ ಎಂದು ಕರೆಸಿಕೊಳ್ಳುವ ಮತದಾನ ಸಂಭ್ರಮದಲ್ಲಿ ಕ್ಷೇತ್ರದ ಎಲ್ಲಾ ಮತದಾರರು ಭಾಗಿಯಾಗಬೇಕೆಂದು ಮನವಿ ಮಾಡಿದರು.
ಕೋಡಿಂಬಾಡಿಯ ಮತದಾನ ಕೇಂದ್ರದಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಮತ ಚಲಾವಣೆ.
ಬೈಂದೂರು: ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಬುಧವಾರ ಬೆಳಗ್ಗೆ ಕಂಚಿಕಾನ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು.ಚುನಾವಣೆಗೆ ಟಿಕೆಟ್ ಘೋಷಣೆಯಾದ ದಿನದಿಂದಲೂ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ಗುರುರಾಜ್ ಗಂಟಿಹೊಳೆಯವರು ಬುಧವಾರ ಬೆಳಗ್ಗೆ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಾಥಮಿಕ ಕರ್ತವ್ಯವನ್ನು ನೆರವೇರಿಸಿದರು.ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಂದು ಮತ ಚಲಾಯಿಸಿ, ಅನಂತರ ಕೈ ಬೆರಳಿನ




























