Home Archive by category Fresh News (Page 14)

ಎಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ : ಕೋಟ ಶ್ರೀನಿವಾಸ ಪೂಜಾರಿ

ಈ ಬಾರಿಯ ಚುನಾವಣೆ ದೇಶದ ಭದ್ರತೆ, ಬಯೋತ್ಪಾದನೆ ಹತೋಟಿ, ಆರ್ಥಿಕ ಸುಭದ್ರತೆಯನ್ನು ನೀಡಬಲ್ಲ ರಾಷ್ಟ್ರನಾಯಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಮಹತ್ತರವಾದ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬ್ರಹ್ಮಾವರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಈಗಾಗಲೆ ನಮ್ಮ

ಹೊಸ ಬದುಕು ಹುಟ್ಟುವ ಈಸ್ಟರ್ ಮೊಟ್ಟೆ

ನಲವತ್ತು ದಿನಗಳ ಉಪವಾಸದ ಬಳಿಕ ಯೇಸು ಕ್ರಿಸ್ತನ ಪುನರುತ್ಥಾನವನ್ನು ಕ್ರಿಶ್ಚಿಯನರು ಮನೆ ಮನ ತುಂಬಿಕೊಳ್ಳುವ ಹಬ್ಬ ಈಸ್ಟರ್. ಯೇಸು ಕ್ರಿಸ್ತನು ನಲವತ್ತು ದಿನಗಳ ಜಪ ತಪಗಳಲ್ಲಿ ಕಳೆದ ಉಲ್ಲೇಖ ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಇದೆ. ಬೂದಿ ಬುಧವಾರದಿಂದ ಶುಭ ಶುಕ್ರವಾರದವರೆಗೆ ಉಪವಾಸ. ಇದು ವಸಂತ ಕಾಲದಲ್ಲಿ ಬರುತ್ತದೆ. ಇದರ ಮುಖ್ಯ ಉದ್ದೇಶ ದೇಹ ದಂಡನೆ. ಆ ಮೂಲಕ ಬದುಕಿನ ತಪ್ಪುಗಳಿಂದ ತಪ್ಪಿಸಿಕೊಳ್ಳುವುದು. ಪ್ರಕೃತಿದತ್ತ ಮಿತಾಹಾರ ಸೇವೆನೆಗೆ ಆದ್ಯತೆ. ಕಾಲ

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ : ಮಾಜಿ ಸಚಿವ ಅಭಯಚಂದ್ರ ಜೈನ್

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನ ಪರ ಯೋಜನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಅಭಿವೃದ್ಧಿ, ಬಡತನ ನಿರ್ಮೂಲನೆಗೆ ಪ್ರಾಶಸ್ತ್ಯವಿತ್ತು. ಆದ್ದರಿಂದಲೇ ಬಿಜೆಪಿ ಕಾಲಘಟ್ಟದಲ್ಲಿ ಯಾವ ಯೋಜನೆಗಳೂ ಬಾರದಿದ್ದರೂ, ಭಾವನಾತ್ಮಕವಾಗಿ ಅವರು ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಈ ಬಾರಿ ಹುರುಪಿನಿಂದ

ಕುಂದಾಪುರ: ಅಡಿಕೆ ಕಳವು ಪ್ರಕರಣದ ಮೂವರ ಬಂಧನ

ಹಲವು ಕಡೆಗಳಲ್ಲಿ ನಡೆದ ಅಡಿಕೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾಪುರ ಗುಲ್ವಾಡಿ ಗ್ರಾಮದ ಅಮೀರ್ ಝೈನುದ್ದೀನ್ ಭಟ್ಕಳ ಬಿಳಲಖಂಡ ಗ್ರಾಮದ ಮುನಾವರ್,ಭಟ್ಕಳ ಉಸ್ಮಾನ್ ನಗರದ ನಿಸಾರ್ ಆಸೀಫ್ ಅನ್ನಾರ್ ಬಂಧಿತ ಆರೋಪಿಗಳು. ಇವರು ಶಂಕರನಾರಾಯಣ ವ್ಯಾಪ್ತಿಯ ಹಾಲಾಡಿ ಮತ್ತು ಕ್ರೂಡ ಬೈಲೂರು, ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ನೂಜಾಡಿ ಎಂಬಲ್ಲಿ ನಡೆದ ಅಡಿಕೆ ಕಳವು ಪ್ರಕರಣದಲ್ಲಿ

ಪ್ರಚಂಡ ಬಹುಮತದಿಂದ ಬಿ. ವೈ ರಾಘವೇಂದ್ರ ಗೆಲುವು ನಿಶ್ಚಿತ : ಶಾಸಕ ಗುರುರಾಜ್ ಗಂಟಿಹೊಳೆ ವಿಶ್ವಾಸ

ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ. ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ. ಸಂಘರ್ಷದ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಬೈಂದೂರು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಣ್ಣ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು ಒತ್ತಡ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಏವಿಯೇಷನ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ

ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಏವಿಯೇಷನ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದರು. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ವಿಮಾನ ಹಾರಾಟ, ನಿಲ್ದಾಣದ ವೀಕ್ಷಣೆ, ಅಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಮಾಹಿತಿಯನ್ನು ಪಡೆದರು. ವಿದ್ಯಾರ್ಥಿಗಳೊಂದಿಗೆ , ಉಪನ್ಯಾಸಕಿಯರಾದ ಸವಿತಾ ಮತ್ತು ವೈಷ್ಣವಿ ಉಪಸ್ಥಿತರಿದ್ದರು.

ಬೆಳ್ಳಾರೆ ಚರ್ಚ್‌ಗೆ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಭೇಟಿ

ಕ್ರೈಸ್ತರ ಕಪ್ಪು ದಿನ ಆಚರಣೆಯ ಸಮಯದಲ್ಲಿ ಪವಿತ್ರ ವಾರದ ಗುರುವಾರದಂದು ಯೇಸು ಕ್ರಿಸ್ತ ತನ್ನ 12 ಶಿಷ್ಯರ ಪಾದ ತೊಳೆಯುವ ಮೂಲಕ ಸರಳತೆಯನ್ನು ಮೆರೆದರು ಎನ್ನುವ ವಿಚಾರದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಸುಳ್ಯ ತಾಲೂಕಿನ ಬೆಳ್ಳಾರೆಯ ಹೋಲಿಕ್ರಾಸ್ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆಗಳಿಗೆ ಚಾಲನೆ ನೀಡಿದರು. ಯೇಸು ಸ್ವಾಮಿ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಲೋಕಕ್ಕೆ ಪ್ರೀತಿ, ಮಾನವೀಯತೆ,

ನಗರದತ್ತ ಮುಖ ಮಾಡಿ ಮೋಸ ಹೋದವರು

ಹಣ ನಗರಗಳಲ್ಲಿ ರಾಶಿ ಬಿದ್ದಿದೆಯೆಂದು ನಗರದತ್ತ ಮುಖ ಮಾಡಿರುವವರ ಸಂಖ್ಯೆ ಈಗ ಒಂದೇ ಸಮನೆ ಏರುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ನಗರದತ್ತ ಜನರ ವಲಸೆ ಕ್ರಿಸ್ತ ಪೂರ್ವದಿಂದಲೇ ಆರಂಭವಾಗಿದೆ. ಏಥನ್ಸ್, ರೋಮ್ ಇತ್ಯಾದಿ ನಗರಗಳು ಆ ಪಟ್ಟಿಯಲ್ಲಿ ಇವೆ. ಏಶಿಯಾದಲ್ಲಿ ಬ್ಯಾಬಿಲೋನ್, ಜೆರೂಸಲೇಮ್, ಆಫ್ರಿಕಾದಲ್ಲಿ ಕೈರೋ ಮೊದಲಾದ ನಗರಗಳು ಕ್ರಿಸ್ತಪೂರ್ವದಲ್ಲೇ ಜನ ವಲಸೆಯ ಇತಿಹಾಸ ಹೊಂದಿದವುಗಳಾಗಿವೆ. ಚೀನಾದಲ್ಲಿ ಬೀಜಿಂಗ್ ಸಹಿತ ಹಲವು ನಗರಗಳು ಈ ಪಟ್ಟಿಯಲ್ಲಿ ಬರುತ್ತವೆ.

ಮಂಗಳೂರು : ಮುಕುಂದ್‌ ಎಂಜಿಎಂ ರಿಯಾಲ್ಟಿ: ಕೇದಾರ್ ಹೈ ಲಿವಿಂಗ್ ಲಕ್ಷುರಿ ವಸತಿ ಸಮುಚ್ಚಯದಲ್ಲಿ ಮಾದರಿ ಫ್ಲ್ಯಾಟ್ ವೀಕ್ಷಣೆಗೆ ಸಿದ್ಧ

ಮುಕುಂದ್‌ಎಂಜಿಎಂರಿಯಾಲ್ಟಿಯವರಿಂದ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ದೇರೇಬೈಲ್‌ನಲ್ಲಿ ನಿಮಾರ್ಣಗೊಳ್ಳುತ್ತಿರುವ ‘ಕೇದಾರ್-ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ವಸತಿ ಸಮುಚ್ಚಯದಲ್ಲಿ ಗ್ರಾಹಕರ ವೀಕ್ಷಣೆಗೆ ಮಾದರಿ ಫ್ಲ್ಯಾಟ್ ಸಿದ್ಧವಾಗಿದ್ದು ಇಲ್ಲಿ ಹೈ ಲಿವಿಂಗ್ ಲಕ್ಷುರಿ ವೈಶಿಷ್ಟ್ಯಗಳಾದ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್‌ಆನ್‌ರೂಫ್‌ಟಾಪ್, ಬ್ಯಾಡ್ಮಿಂಟನ್‌ಕೋರ್ಟ್, ವಿಶಾಲವಾದಡಬಲ್ ಹೈಟ್ ಹೋಂದಿರುವ ವಿಸಿಟರ್ಸ್ ಲೋಬಿ, ಸ್ನೇಕ್ಸ್‌ಆಂಡ್ ಲ್ಯಾಡರ್ಸ್

ಲಾಲಾ ರಸ ಎಂಬ ಜೀವ ದ್ರವ್ಯ

ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ ಅಥವಾ ಲಾಲಾರಸ ಎಂದು ಕರೆಯುತ್ತಾರೆ. ಈ ಜೊಲ್ಲುರಸದಲ್ಲಿ ಶೇಖಡಾ 99 ರಷ್ಟು ಬರೀ ನೀರು ಇರುತ್ತದೆ. ಮನುಷ್ಯ ಮಾತ್ರವಲ್ಲದೆ ಹೆಚ್ಚಿನ ಎಲ್ಲಾ ಪ್ರಾಣಿಗಳಲ್ಲಿಯೂ ಈ ಲಾಲಾರಸ ಸ್ರವಿಸಲ್ಪಡುತ್ತದೆ. ಕುತ್ತಿಗೆಯ ಸುತ್ತ ಇರುವ ಜೊಲ್ಲುರಸ ಗ್ರಂಥಿಗಳಿಂದ ಈ ಜೊಲ್ಲುರಸ ಸ್ರವಿಸಲ್ಪಡುತ್ತದೆ. ಸಬ್ ಮ್ಯಾಂಡಿಬುಲಾರ್ ಸಬ್‍ಲಿಂಗ್ರ್ವಲ್ ಮತ್ತು ಪೆರೋಟಿಡ್ ಎಂಬ ಮೂರು ಜೊತೆ ದೊಡ್ಡದಾದ ಜೊಲ್ಲು