ಎಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ : ಕೋಟ ಶ್ರೀನಿವಾಸ ಪೂಜಾರಿ
ಈ ಬಾರಿಯ ಚುನಾವಣೆ ದೇಶದ ಭದ್ರತೆ, ಬಯೋತ್ಪಾದನೆ ಹತೋಟಿ, ಆರ್ಥಿಕ ಸುಭದ್ರತೆಯನ್ನು ನೀಡಬಲ್ಲ ರಾಷ್ಟ್ರನಾಯಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಮಹತ್ತರವಾದ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬ್ರಹ್ಮಾವರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಈಗಾಗಲೆ ನಮ್ಮ ಮತಕ್ಷೇತ್ರ ವ್ಯಾಪ್ತಿಯ 1850 ಮತಗಟ್ಟೆ ಮತ್ತು ಮತದಾರರ ಒಂದು ಸುತ್ತಿನ ಬೇಟಿ ಮಾಡಿ ಏಪ್ರಿಲ್ ೩ನೇ ತಾರೀಕು ನಾಮಪತ್ರ ಸಲ್ಲಿಸಲಿದ್ದೇನೆ. ಗ್ರಾಮ ಪಂಚಾಯತಿ ಮಟ್ಟದಿಂದ ರಾಜ್ಯ ಸರಕಾರದಲ್ಲಿ 3 ಬಾರಿ ಸಚಿವ 4 ಬಾರಿ ವಿಧಾನಪರಿಷತ್ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕನಾಗಿದ್ದ ಅನುಭವದಿಂದ ಬಿಜೆಪಿ ಪಕ್ಷ ನೀಡಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತದಾರರಲ್ಲಿ ಮತಯಾಚನೆ ಮಾಡಲಿದ್ದೇನೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬಿಜೆಪಿ ಪ್ರಮುಖರಾದ ರಾಜೀವ್ ಕುಲಾಲ್, ನಿಶಾನ್ ರೈ,ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು.