Home Archive by category Fresh News (Page 249)

ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಬೈಂದೂರು ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಕೌಶಲ್ಯಗಳ ಕಲಿಕೆಗೆ ಪೂರಕ ವ್ಯವಸ್ಥೆ ಮಾಡಬೇಕು, ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯವಿರುವ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಅರುಣ್ ಕುಮಾರ್ ಪುತ್ತಿಲ ಅವರು ತ್ರಿವಿಧ ದಾಸೋಹಿ ಮಠ ಎಂದೇ ಖ್ಯಾತವಾದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಗದ್ದುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಿದ್ದಗಂಗಾ ಮಠದಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಹಾಗು ಕಿರಿಯ ಶ್ರೀ ಗಳಾದ ಪೂಜ್ಯ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳವರ ಆಶೀರ್ವಾದ ಪಡೆದರು. ಮಠದಾಧ್ಯಕ್ಷರು ಅರುಣ್ ಕುಮಾರ್ ಪುತ್ತಿಲರವರ ಜೊತೆ ರಾಜಕೀಯ ಹಾಗೂ

ಉಡುಪಿಯ ಯಕ್ಷಗಾನ ಕಲಾರಂಗ : ಯಕ್ಷನಿಧಿ ಕಲಾವಿದರ ಸಮಾವೇಶ

ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷನಿಧಿ ಕಲಾವಿದರ 2023ರ ಸಮಾವೇಶವು ಜೂನ್ 1 ರ ಗುರುವಾರದಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾವೇಶವನ್ನು ಖ್ಯಾತ ಕಥಕ್ ಕಲಾವಿದೆ ವಿದುಷಿ ಮಧು ನಟರಾಜ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅದಮಾರು ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಡಾ. ಎ. ಪಿ. ಭಟ್, ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೊಂಡದಕುಳಿ ರಾಮಚಂದ್ರ ಹೆಗಡೆ,

ಸೋಮೇಶ್ವರದಲ್ಲಿ ನೈತಿಕ ಪೊಲೀಸ್ ಗಿರಿ : ನಾಲ್ವರ ವಶ

ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದವರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮೇಶ್ವರ ಸಮುದ್ರ ತೀರಕ್ಕೆ ನಿನ್ನೆ ಸಂಜೆ ಆಗಮಿಸಿದ್ದರು. ಅನ್ಯಧರ್ಮಕ್ಕೆ ಸೇರಿದ ಯುವಕರು ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದಾರೆಂಬ ಕಾರಣಕ್ಕೆ ತಂಡವೊಂದು ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಕೇರಳ ಚೆರ್ಕಳದ ಜಾಫರ್ ಶರೀಫ್

ಮನೋರಂಜನಾ ಕ್ಷೇತ್ರದಲ್ಲಿ ಬೆಳೆಯಲು ವಿಪುಲ ಅವಕಾಶಗಳಿವೆ: ಚರಿಷ್ಮಾ ಚೋಂದಮ್ಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ “ಮನೋರಂಜನೆ ಮಾಧ್ಯಮದ ವ್ಯಾಪ್ತಿ ಮತ್ತು ಉದ್ಯೋಗಾವಕಾಶಗಳು” ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಫ್ರೀಲಾನ್ಸ್ ಕಂಟೆಂಟ್ ರೈಟರ್ ಹಾಗೂ ಎಸ್‌ಡಿಎಂಇ ಸೊಸೈಟಿಯ ಸೋಶಿಯಲ್ ಮೀಡಿಯಾ ಹೆಡ್ ಚರಿಷ್ಮಾ ಚೋಂದಮ್ಮ, ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ

ಎಸ್.ಡಿ.ಎಂ. ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ – ‘ಎಸ್.ಡಿ.ಎಂ. ನೆನಪಿನಂಗಳ’

ಉಜಿರೆ: ಜ್ಞಾನ, ಧನಾತ್ಮಕ ಮನೋಧೋರಣೆ ಹಾಗೂ ಕೌಶಲದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು. ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮೇ 31ರಂದು ನಡೆದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ‘ಎಸ್.ಡಿ.ಎಂ. ನೆನಪಿನಂಗಳ’ದ ನಾಲ್ಕನೆಯ ಕಂತಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

kadaba : ಕಾಡಾನೆ ದಂತದಿಂದ ತಿವಿದು ಬಸ್‌ಗೆ ಹಾನಿ

ಕಡಬ : ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ಸೊಂದಕ್ಕೆ ಕಾಡಾನೆ ದಂತದಿಂದ ತಿವಿದು ಬಸ್‌ಗೆ ಹಾನಿಯಾದ ಘಟನೆ ಕುಕ್ಕೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯದ ಮೂಲಕ ಬೆಂಗಳೂರಿಗೆ ಬಸ್ ತೆರಳುತ್ತಿದ್ದ ಸಂದರ್ಭದಲ್ಲಿ ಅನಿಲ ಎಂಬಲ್ಲಿ ರಸ್ತೆ ಬದಿ ಕಾಡಾನೆ ನಿಂತಿತ್ತು. ಆನೆಯನ್ನು ನೋಡಿದ ಬಸ್ ಚಾಲಕ ಅನಾಹುತ ತಪ್ಪಿಸಲು ಯತ್ನಿಸಿದ್ದಾರೆ.

ಉಳ್ಳಾಲ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಬಳ್ಳಾರಿಯಲ್ಲಿ ಪತ್ತೆ

ಉಳ್ಳಾಲ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಹರೇಕಳ ಪಂಜಿಲಗುಳಿ ನಿವಾಸಿ ಜಯರಾಜ್ (35) ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದ್ದು, ಸಂಬಂಧಿಕರು ಬಳ್ಳಾರಿಗೆ ತೆರಳಿದ್ದಾರೆ. ಮೇ 30 ರಂದು ಗರ್ಭಿಣಿ ಪತ್ನಿ ಯನ್ನು ತವರು ಮನೆಯಲ್ಲಿ ಬಿಟ್ಟು ಬಲ್ಮಠದಲ್ಲಿನ ಸ್ಕ್ಯಾನಿಂಗ್ ಸೆಂಟರ್ ನ ಕೆಲಸಕ್ಕೆ ತೆರಳಿದ್ದ ಜಯರಾಜ್, ಅಲ್ಲಿ ಹಾಜರು ದಾಖಲುಪಡಿಸಿದ್ದಾರೆ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು. ಈ ಕುರಿತು

ವಿದ್ಯುತ್ ಸ್ಪರ್ಶ : ನವಿಲ ರಕ್ಷಣೆಗೆ ಬಂತು ಆಂಬುಲೆನ್ಸ್

ಉಡುಪಿ : ವಿದ್ಯುತ್ ಸ್ಪರ್ಶಿಸಿ ರಾಷ್ಟ್ರಪಕ್ಷಿ ನವಿಲೊಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ ಬಳಿ ನಡೆದಿದೆ. ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ನವಿಲನ್ನು ಕಂಡ ಸ್ಥಳೀಯರು ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ನವಿಲನ್ನು ಆ್ಯಂಬುಲೆನ್ಸ್ ನ ಮೂಲಕ ಉದ್ಯಾವರದ ಪಶುವೈದ್ಯ ಸಂದೀಪ್ ಶೆಟ್ಟಿ ಅವರ ಬಳಿ ಕೊಂಡೊಯ್ದು ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ, ನವಿಲನ್ನು ಪರೀಕ್ಷಿಸಿದ

ಶಾಲಾ ಪ್ರಾರಂಭೋತ್ಸವದಲ್ಲಿ ಉಡುಪಿ ಡಿಸಿ ಕೂರ್ಮಾರಾವ್ ಎಂ. ಭಾಗಿ

ಉಡುಪಿ : ಉಡುಪಿಯಲ್ಲಿ ಮೇ 29 ರಿಂದ ಶಾಲೆಗಳು ತೆರೆದುಕೊಂಡಿದ್ದು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳು ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಿದರು. ಮೇ 31 ರಂದು ತರಗತಿಗಳು ಆರಂಭಗೊಂಡು, ಬೇಸಿಗೆ ರಜೆಯನ್ನು ಮುಗಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಗಿತ್ತು. ವಿಶೇಷವೆಂಬಂತೆ ಜಿಲ್ಲೆಯ ಹಲವು ಶಾಲೆಗಳಲ್ಲಿ ತೋರಣ, ರಂಗೋಲಿ ಹಾಕಿ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ