Home Archive by category Fresh News (Page 248)

ತೂಫಾನ್ ವೇಗದಲ್ಲಿ ಪ್ರಾಣಕ್ಕೆ ಕಂಟಕ ತರುವ ಎಚ್ಚರಗೇಡಿ ಪ್ರಯಾಣ

ಉಡುಪಿ ಜಿಲ್ಲೆಯ ಮೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಪ್ರವಾಸಿಗರು ತೂಫಾನ್ ವಾಹನದಲ್ಲಿ ನೇತಾಡಿಕೊಂಡು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ವಾಹನದ ಒಳಗೆ ಭರ್ತಿ ಜನರನ್ನು ತುಂಬಿಸಿಕೊಂಡು, ಜೀವಕ್ಕೆ ಅಪಾಯ ತರುವಂತೆ ವಾಹನದ ಮೇಲ್ಭಾಗದಲ್ಲಿ ಮತ್ತು ಸ್ಪೇರ್ ಟೈರ್ ಮೇಲೆ ಕುಳಿತು ನೇತಾಡುತ್ತಾ ನಿರ್ಲಕ್ಷ್ಯವಾಗಿ ವಾಹನದಲ್ಲಿ ಸಾಗುತ್ತಿರುವ ವೀಡಿಯೋ ಸಾಮಾಜಿಕ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 13ನೇ ನೂತನ ಶಾಖೆಯು ಬಂಟ್ವಾಳ ತಾಲೂಕಿನ ಪೆರ್ನೆ ಚಂದ್ರ ಆರ್ಕೇಡ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ಜೂನ್ 4ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪರಮಪೂಜ್ಯ ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಹಾಗೂ ಅಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಚೇರಿ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಭದ್ರತಾ ಕೊಠಡಿ

ಗೋ ಶಾಲೆಯು ವೃದ್ಧಾಶ್ರಮ, ಆಸ್ಪತ್ರೆಯಂತಾಗದಿರಲಿ : ಅದಮಾರು ಶ್ರೀ

ಗೋ ಶಾಲೆ ಎಂಬುದು ನೋಡುಗರಿಗೆ ನಾವು ಕೂಡಾ ಎರಡು ದನಗಳನ್ನು ಸಾಕಿ ಅದರಿಂದ ಪ್ರಯೋಜನವನ್ನು ಪಡೆಯಬೇಕು. ಮತ್ತೊಬ್ಬರಿಗೆ ದನಗಳನ್ನು ಸಾಕುವುದಕ್ಕೆ ಪ್ರಚೋದನೆ ನೀಡುವಂತ್ತಿರ ಬೇಕೇ ವಿನಃ ವೃದ್ಧಾಶ್ರಮ ಸಹಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಂತಾಗಬಾರದು ಎಂದು ಅದಮಾರು ಮಠದ ಕಿರಿಯ ಶ್ರೀಗಳಾದ ಈಶ ಪ್ರಿಯ ತೀರ್ಥರು ಹೇಳಿದ್ದಾರೆ. ಅವರು ಎಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೇತ್ರತ್ವದಲ್ಲಿ ನಡೆದ ಗೋವು ಪೂಜೆ ಹಾಗೂ ಗೋವು

ಎರ್ಮಾಳ್ : ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆ ವಿಭಾಜಕಕ್ಕೆ ಢಿಕ್ಕಿ

ಕಾಂಜರಕಟ್ಟೆಯಿಂದ ಜಲ್ಲಿಕಲ್ಲು ಹೇರಿಕೊಂಡು ಉಡುಪಿ ಕಡೆಗೆ ಹೋಗುತ್ತಿದ್ದ ಟಿಪ್ಪರೊಂದು ಬಡ ಎರ್ಮಾಳು ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ತಡೆಬೇಲಿಗಳನ್ನು ತುಂಡರಿಸಿಕೊಂಡು ಸಾಗಿ ಮಧ್ಯದಲ್ಲೇ ಸಿಲುಕಿಕೊಂಡಿದೆ. ಯಾವುದೋ ವಾಹನವೊಂದು ಅಡ್ಡ ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಟಿಪ್ಪರ್ ಚಾಲಕ, ಅದೃಷ್ಟವಶಾತ್ ಯಾವುದೇ ವಾಹನಗಳಾಗಲೀ ಪಾದಚಾರಿಗಳಾಗಲೀ ಆ ಭಾಗದಲ್ಲಿ ಸಂಚರಿಸದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಜಲ್ಲಿಕಲ್ಲುಗಳು ಹೆದ್ದಾರಿ ಎಲ್ಲೆಡೆ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಶಾಸಕ ಅಶೋಕ್ ಕುಮಾರ್ ರೈ ಸಭೆ

ಪುತ್ತೂರು: ಕಿಡ್ನಿ ರೋಗಿಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 6 ಡಯಾಲಿಸಿಸ್ ಮೆಷಿನ್ ಕಾರ್ಯಾಚರಿಸುತ್ತಿದ್ದು, ಮುಂದಿನ ವಾರದಲ್ಲಿ ಆರು ಡಯಾಲಿಸಿಸ್ ಮೆಷಿನ್ ರೋಟರಿ ಮೂಲಕ ಸರಕಾರಿ ಆಸ್ಪತ್ರೆಗೆ ಬರಲಿದೆ ಎಂದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಕಡಬದಲ್ಲಿ ಮೂರು ಮೆಷಿನ್ ಇದ್ದು ಸರಿಯಾಗಿ

NSUI ಜಿಲ್ಲಾ ಅಧ್ಯಕ್ಷರಾಗಿ ಸುಹಾನ್ ಆಳ್ವ ನೇಮಕ

ನೂತನ NSUI ಜಿಲ್ಲಾ ಅಧ್ಯಕ್ಷರಾಗಿ ನೇಮಕ ಗೊಂಡಂತಹ ಸುಹಾನ್ ಆಳ್ವ ರವರು ಜೂನ್ 01 ರಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ರವರ ಸಮ್ಮುಖದಲ್ಲಿ ಅಧಿಕಾರ ವನ್ನು ಸ್ವೀಕರಿಸಿದ್ದಾರೆ. ಸುಹಾನ್ ಆಳ್ವ ರವರು NSUI ರಾಜ್ಯ ಪ್ರದಾನ ಕಾರ್ಯದರ್ಶಿ ಯಾಗಿ ತುಮಕೂರು,ಉತ್ತರಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಸ್ತುವಾರಿಯಾಗಿ ಸೇವೆ ಯನ್ನು ಸಲ್ಲಿಸಿರುತ್ತಾರೆ. NSUI ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ವಿದ್ಯಾರ್ಥಿ ಕಾಂಗ್ರೆಸ್

ಕಡಬ :ಮನೆಯ ಮೇಲ್ಚಾವಣಿಯಿಂದ ಕೆಳಗೆ ಬಿದ್ದ ಕಾರ್ಮಿಕ ಮೃತ್ಯು

ಕಡಬ: ಮನೆಯ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರದಂದು ನೆಟ್ಟಣದಲ್ಲಿ ನಡೆದಿದೆ. ಮೃತರನ್ನು ಅಲಂಕಾರು ಗ್ರಾಮದ ಶರವೂರು ನಿವಾಸಿ ಪದ್ಮನಾಭ ಎಂಬವರ ಪುತ್ರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ನೆಟ್ಟಣದ ಮೇರೊಂಜಿ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಮೇಲ್ಛಾವಣಿಯಿಂದ ಹರಿಪ್ರಸಾದ್ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ನೆಟ್ಟಣದ ಪ್ರಕಾಶ್ ಎಂಬವರ ಜೀಪಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ

ಕಡಬ : ಲೈನ್ ಮ್ಯಾನ್ ಮೃತಪಟ್ಟ ಪ್ರಕರಣ: ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಕಡಬ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ಬಾಗಲಕೋಟೆ ಮೂಲದ ದ್ಯಾವಣ್ಣ ದೊಡ್ಡಮನಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದರು. ಮೃತ ಲೈನ್ ಮ್ಯಾನ್ ಜೊತೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಕಳುಹಿಸದೇ ಹಾಗೂ

ಹಠಾತ್ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಕಡಬ: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬಳು ಹಠಾತ್ ಅನಾರೋಗ್ಯದಿಂದ ನಿಧನ ಹೊಂದಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನಿಡ್ಮೇರು ಎಂಬಲ್ಲಿ ನಡೆದಿದೆ. ರೆಂಜಿಲಾಡಿಯ ನಿಡ್ಮೇರು‌ ನಿವಾಸಿ ರವೀಂದ್ರ ಅವರ ಪುತ್ರಿ ಕು.ರಶ್ಮಿತಾ‌ (18) ಮೃತ ವಿದ್ಯಾರ್ಥಿನಿ. ಮೃತ ರಶ್ಮಿತಾ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ

ವಕೀಲರ ಸಂಘ (ರಿ ) ಬಂಟ್ವಾಳ : ಪದಗ್ರಹಣ ಕಾರ್ಯಕ್ರಮ

ವಕೀಲರ ಸಂಘ (ರಿ ) ಬಂಟ್ವಾಳ ಇದರ 2023-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರ ಬಿ.ಸಿ. ರೋಡ್ ನಲ್ಲಿ ಇಂದು ಮದ್ಯಾಹ್ನ 12.30ಕ್ಕೆ ನಡೆಯಿತು. 2023-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಯುತ ರಿಚರ್ಡ್ ಕೊಸ್ತಾ ಎಂ, ಉಪಾಧ್ಯಕ್ಷರಾಗಿ ರಾಜೇಶ್ ಬೊಳ್ಳುಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಡಿ ಬೈರಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸುನಿತಾ ಕೆ ಕೆ, ಕೋಶಾಧಿಕಾರಿಯಾಗಿ ಶ್ರೀಮತಿ ನಿರ್ಮಲ ಶೆಟ್ಟಿಯವರು ಪ್ರಮಾಣವಚನ