Home Archive by category Fresh News (Page 328)

ಸುಳ್ಯ : ಮಣ್ಣು ಕುಸಿದು ಮೂವರು ಕಾರ್ಮಿಕರು ದುರ್ಮರಣ

ಸುಳ್ಯ: ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸುಳ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸುಳ್ಯದ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಘಟನೆ ನಡೆದಿದೆ. ಖಾಸಗಿ ವ್ಯಕ್ತಿಯೋರ್ವರು ತಮ್ಮ ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪಿಲ್ಲರ್ ಕಾಮಗಾರಿ

ಕುಂಪಲ: ಯುವಕ ಆತ್ಮಹತ್ಯೆ : ಊರಲ್ಲಿ ಹೆಚ್ಚಾದ ಅಕಾಲಿಕ ಸಾವುಗಳು

ಉಳ್ಳಾಲ: ಮೊಬೈಲ್ ಷೋರೂಂ ನಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಅಕ್ಷಯ್ (25) ಎಂಬವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮ ಹತ್ಯೆಗೈದ ಮಾಡಿಕೊಂಡಿದ್ದಾರೆ‌. ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು ಕಳೆದ 20 ದಿವಸಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು.ಮೊಬೈಲ್ ಶಾಪ್

ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸ್ ದೌರ್ಜನ್ಯ: ಸಂಘದಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮಂಗಳೂರು: ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಇಬ್ಬರ ಮೇಲೆ ಬಂದರ್ ಪೊಲೀಸರು ದೌರ್ಜನ್ಯ ಎಸಗಿ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಗೊಳಿಸಿರುವ ಘಟನೆ ಶನಿವಾರ ವರದಿಯಾಗಿದೆ. ಮೈದಾನ್ ಬಳಿಯ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಬ್ದುಲ್ ಖಾಲಿದ್ ಮತ್ತು ಮುಹಮ್ಮದ್ ರಿಯಾಜ್ ಎಂಬವರನ್ನು ಅವರ ತಳ್ಳಿ ಗಾಡಿಯ ಸಹಿತ ಬಂದರ್ ಪೊಲೀಸರು ಬಂಧಿಸಿದ್ದರು. ಬಂಧಿತರು ಮಹಾ ನಗರಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯಿಂದ ಅನುಮೋದಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಾಗಿದ್ದರು. ಘಟನೆಯ

ನಾಳೆ (ಮಾ.26) ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6 : ಮಂಗಳೂರಿನ ಜನತೆ ಸಂಭ್ರಮಿಸುವ ಹೋಲಿ ಹಬ್ಬ

ಕ್ಲಬ್ ಮಂತ್ರ ವತಿಯಿಂದ ಮಂಗಳೂರಿನಲ್ಲಿ ಅತಿ ದೊಡ್ಡ ಹೋಲಿ ಹಬ್ಬವನ್ನು ಮಂಗಳೂರಿನ ಜನತೆಗಾಗಿ ನಾಳೆ ಆಯೋಜನೆ ಮಾಡಿದ್ದಾರೆ. ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6 ನಗರದ ಮರೋಳಿಯ ಸೂರ್ಯವುಡ್ಸ್‍ನಲ್ಲಿ ಅದ್ಧೂರಿಯ ಕಾರ್ಯಕ್ರಮ ನಡೆಯಲಿದೆ.ಮಂಗಳೂರಿನ ಜನತೆ ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲು ಇದೊಂದು ಅದ್ಭುತ ಅವಕಾಶ. ಇದೇ ಮಾರ್ಚ್ 26ರಂದು ಅಂದ್ರೆ ನಾಳೆ ಕ್ಲಬ್ ಮಂತ್ರ ವತಿಯಿಂದ ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6ನ್ನು ಆಯೋಜನೆ

ನಾಳೆ ಪುತ್ತೂರಿಗರ ದಶಕದ ಬೇಡಿಕೆಯಾದ ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ.

ಪುತ್ತೂರು: ಮಾ. 26 : ಪುತ್ತೂರಿನ ಜನರ ಬಹು ವರ್ಷದ ಕಾಲದ ಬೇಡಿಕೆಯಾದ ಎಪಿಎಂಸಿ ರಸ್ತೆಯಲ್ಲಿ 14 ಕೋಟಿ ವೆಚ್ಚದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣಗೊಂಡಿದೆ. ಇದರ ಲೋಕಾರ್ಪಣಾ ಕಾರ್ಯಕ್ರಮವು ಮಾರ್ಚ್ 26ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ರೈಲ್ವೆ ಮತ್ತು ಎಪಿಎಂಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 4

ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ಮತ್ತು ಬಿಜೆಪಿಯು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಲಾಲ್‍ಭಾಗ್ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ, ಬಿಜೆಪಿಯಿಂದ ಪ್ರಜಾಪ್ರಭುತ್ವ ಕೊಲೆಯಾಗಿದ್ದು, ಅದು

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸಿದೆ.ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರ ಕ್ಷೇತ್ರದಿಂದ ಡಿಕೆಶಿ ಅವರು ಸ್ಪರ್ಧಿಸಲಿ. ಮೊದಲ ಹಂತದ

ಜಾಹಿರಾತು ಫಲಕ ತೆರವು ನಡೆಸದ ನವಯುಗ್ ಕಂಪನಿಗೆ ಕೋಟಿ ಮೊತ್ತದ ದಂಡ

ಹೆದ್ದಾರಿ ಅಂಚಿನಲ್ಲಿರುವ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದ ನವಯುಗ್ ಕಂಪನಿಗೆ ಹೆದ್ದಾರಿ ಇಲಾಖಾ ಅಧಿಕಾರಿಗಳು ಕೋಟಿ ಮೊತ್ತದಲ್ಲಿ ದಂಡ ವಿಧಿಸಿದ್ದಾರೆ. ಡೆಲ್ಲಿಯಿಂದ ಪರಿಶೀಲನೆಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಆರ್.ಓ. ವಿವೇಕ್ ಜೈಸ್ವಾಲ್ ಪರಿಶೀಲಿಸಿ ಹೆದ್ದಾರಿ ಅಂಚಿನಲ್ಲಿ ಬೇಕಾಬಿಟ್ಟಿ ಜಾಹೀರಾತು ಫಲಕಗಳನ್ನು ಗಮನಿಸಿ ಈ ದಂಡ ವಿಧಿಸಿ ತಕ್ಷಣದಿಂದಲೇ ಅದನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಅವರ ಆದೇಶಕ್ಕೆ ಬೆದರಿದ

ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ವಯನಾಡು ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಗುಜರಾತ್‍ನ ನ್ಯಾಯಾಲಯವು 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ. 2019ರ ಲೋಕಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್

ವಿವಿಧ ಬೇಡಿಕೆಗೆ ಆಗ್ರಹಿಸಿ ಪಡುಬಿದ್ರಿ ರೈಲು ನಿಲ್ದಾಣಕ್ಕೆ ಸಾರ್ವಜನಿಕರ ಮುತ್ತಿಗೆ

ತಡೆ ರಹಿತ ರೈಲು ನಿಲುಗಡೆ, ಅಂಡರ್ ಪಾಸ್ ವ್ಯವಸ್ಥೆ, ಪಕ್ಕದ ರಸ್ತೆ ದುರಸ್ಥಿ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಗಾರರು ತಪ್ಪಿದ್ದಲ್ಲಿ ರೈಲು ರೋಕೋ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಬೆಳಪು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಹ ಸಹಿತ ಸುತ್ತಲ ಗ್ರಾಮದ ನೂರಾರು ಮಂದಿ ಪುರುಷರು ಮಹಿಳೆಯರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಬೆಳಪು ದೇವಿಪ್ರಸಾದ್