Home Archive by category Fresh News (Page 375)

ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವರ್ಣ ಬಿಂದು ಪ್ರಶಾನ

ಮಂಗಳೂರಿನ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ವತಿಯಿಂದ ಫೆ.5ರಂದು ಬೆಳಿಗ್ಗೆ 7 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಸ್ವರ್ಣ ಬಿಂದು ಪ್ರಾಶನವನ್ನು ನೀಡಲಾಗುತ್ತಿದೆ. ನಗರದ ವೆಲೇನ್ಸಿಯಾ ಮತ್ತು ಕದ್ರಿ ಶಾಖೆಯಲ್ಲಿ ಸ್ವರ್ಣ ಬಿಂದು ಪ್ರಾಶನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಕ್ಕಳಿಗಾಗಿ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಉದಯರಾಗದೊಂದಿಗೆ ಎರಡನೇ ದಿನ ಆರಂಭ

ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯುತ್ತಿರುವ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವು ಉದಯರಾಗದೊಂದಿಗೆ ಆರಂಭಗೊಂಡಿತು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಲಾವಿದರು ಕರ್ನಾಟಕ ಸಂಗೀತದ ರಸಧಾರೆಯೊಂದಿಗೆ ಭಕ್ತಿಸುಧೆಯನ್ನು ಹರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧವಾಗಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೂಂಡ ಕೃತಿಗಳನ್ನು ಆಧರಿಸಿ ಬೆಂಗಳೂರಿನ ಅದಿತಿ ಪ್ರಹ್ಲಾದ ಹಾಗೂ ಮಂಗಳೂರಿನ ಮೇಧಾ ಉಡುಪ ಗಾಯನ

ಧಾರ್ಮಿಕತೆ, ಸಾಂಸ್ಕೃತಿಕತೆ ತುಳುಜನರ ಉಸಿರು: ಕೆ.ಕೆ. ಪೇಜಾವರ

ಉಜಿರೆ: ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾ.ರಾ. ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ 25ನೆಯ ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ‘ದೈವಾರಾಧನೆ ಮತ್ತು ತುಳುನಾಡು’ ಎಂಬ ವಿಷಯದ ಕುರಿತು ತುಳು ಜಾನಪದ ವಿದ್ವಾಂಸ ಮತ್ತು ವಿಜ್ಞಾನ ಶಿಕ್ಷಕ ಕೆ.ಕೆ. ಪೇಜಾವರ ಅವರು ವಿಶೇಷ ಉಪನ್ಯಾಸ ನೀಡಿದರು. ದ್ರಾವಿಡ ಭಾಷಾ ವರ್ಗಗಳಲ್ಲಿ ತುಳು ಪ್ರಮುಖ ಭಾಷೆಯಾಗಿದೆ. ಇಂದಿನ ಕಾಲದಲ್ಲಿ ತುಳು ಭಾಷೆ ಮಹತ್ತರ ಭಾಷೆಯಾಗಿ ಬೆಳೆದು ಬಂದಿದೆ.

“ಸಾಮಾಜಿಕ ಕ್ರಾಂತಿಯ ನಂದಾದೀಪ ಬಸವಣ್ಣ”

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ‘ಹರಿಕಥೆ’ ನೆರೆದಿದ್ದವರ ಗಮನ ಸೆಳೆಯಿತು. ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದವರು ‘ಜಗಜ್ಯೋತಿ ಬಸವಣ್ಣ’ ಕಥಾಕೀರ್ತನ ಪ್ರಸ್ತುತಪಡಿಸಿದರು. ಬಸವಣ್ಣನವರ

ಸಂವೇದನೆಯಿಂದ ಸಾಹಿತ್ಯದ ಸೃಷ್ಟಿ: ಅರವಿಂದ ಚೊಕ್ಕಾಡಿ

ಉಜಿರೆ, ಫೆ.4: ಸಂವೇದನಾಶೀಲತೆಯಿಲ್ಲದೆ ಸಾಹಿತ್ಯವಿಲ್ಲ. ವೇದನೆಗಳು ಸಾಹಿತ್ಯದಲ್ಲಿ ಸಂವೇದನೆಯನ್ನು ಸೃಷ್ಟಿ ಮಾಡುತ್ತವೆ. ಈ ಸಂವೇದನೆಗಳು ಸಾಹಿತ್ಯ ಹಾಗೂ ಕಾವ್ಯಗಳ ಸೃಷ್ಟಿ ಮಾಡುತ್ತವೆ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು. ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಮಟ್ಟದ 25ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಜಿಲ್ಲೆಯ ಸಾಹಿತ್ಯ ಪರಂಪರೆ’ ಕುರಿತ ಗೋಷ್ಠಿಯಲ್ಲಿ ಲೌಕಿಕ

ರಾಷ್ಟ್ರೀಯ ಶಿಕ್ಷಣ ನೀತಿ – 2020 : ವಿಚಾರ ಸಂಕಿರಣ ಉಪನ್ಯಾಸ ಮತ್ತು ಮುಕ್ತ ಸಂವಾದ

ಶಿಕ್ಷಣದ ಸುಧಾರಣೆಗಾಗಿ ಭಾರತ ಸರಕಾರವು 2020ರಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಳಿತನ್ನುಂಟು ಮಾಡಿದೆಯೇ? ಇದುವರೆಗಿನ ಸಾಧನೆಗಳೇನು? ಬಾಧಕಗಳೇನು? – ಇತ್ಯಾದಿ ಜಿಜ್ಞಾಸೆಗಳು ಶೈಕ್ಷಣಿ ವಲಯದಲ್ಲಿ ಮೂಡಿದ್ದು, ಇದರ ಸಲುವಾಗಿ ಚರ್ಚಿಸಲು ಉಪನ್ಯಾಸ ಮತ್ತು ಮುಕ್ತ ಸಂವಾದವನ್ನು ಮೇಲಿನ ಮೂರು ಸಂಘಟನೆಗಳ ಆಶಯದಲ್ಲಿ ಹಮ್ಮಿಕೊಳ್ಳಲಾಗಿದೆ. 5-2-2023 ಬೆಳಿಗ್ಗೆ 9-30ರಿಂದ ದಿನಪೂರ್ತಿ ಜರಗುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಣ

ಇಂದು ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳ

ಕಿನ್ನಿಗೋಳಿ: ಕಂಬಳವು ಕರಾವಳಿ ಭಾಗದ ಒಂದು ಅಚ್ಚುಮೆಚ್ಚಿನ ಜಾನಪದ ಕ್ರೀಡೆಯಾಗಿದ್ದು ಇದು ಜನರ ಜೀವನದ ಅಂಗವಾಗಿದೆ. ನಮ್ಮ ತುಳುನಾಡಿನ ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಭಾಗವಾಗಿದ್ದು ಕಂಬಳದಿಂದ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಪ್ರಾಣಿ ಪ್ರೀತಿಯೂ ಹೆಚ್ಚಾಗುತ್ತದೆ. ಎಂದು ಆಧ್ಯಾತ್ಮ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಹೇಳಿದರು. ಅವರು ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆಯುವ

ಫೆ.5 : ಕುದ್ರೋಳಿಯಲ್ಲಿ “ಶೂದ್ರ ಶಿವ” ನಾಟಕ

ಮಂಗಳೂರಿನ ರುದ್ರ ಥೇಟರ್ ಅರ್ಪಿಸುವ “ಶೂದ್ರಶಿವ” ಕನ್ನಡ ನಾಟಕ ಫೆ.5ರ ಭಾನುವಾರ ಸಂಜೆ 5.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಈ ನಾಟಕ ಸಿದ್ದಗೊಂಡಿದೆ. ಲೇಖಕ ಬಾಬು ಶಿವ ಪೂಜಾರಿ ಅವರ ‘ಶ್ರೀ ನಾರಾಯಣ ಗುರು ವಿಜಯ ದರ್ಶನ” ಪುಸ್ತಕವನ್ನು ಪ್ರೇರಣಾ ಪಠ್ಯವಾಗಿಟ್ಟುಕೊಂಡು ಜೊತೆಗೆ ನಾರಾಯಣ ಗುರುಗಳ

ಇಂದ್ರಾಳಿಯ ಹಯಗ್ರೀವ ನಗರದಲ್ಲಿ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿ ಉದ್ಘಾಟನೆ

ಉಡುಪಿಯ ಪರಿಸರದಲ್ಲೇ ಕಂಪನಿ ಸೆಕ್ರೆಟರಿ ತರಬೇತಿ ಪಡೆಯಲು ಇಚ್ಛಿಸುವವರಿಗೆ ಮತ್ತು ಉಡುಪಿಯ ಎಲ್ಲಾ ತರಹದ ಉದ್ಯಮಿಗಳಿಗೆ ಸಲಹೆ ಹಾಗೂ ಅತ್ಯುತ್ತಮ ಸೇವೆಯನ್ನು ನೀಡಲು ಚೇತನ್ ನಾಯಕ್ & ಅಸೋಸಿಯೇಟ್ಸ್ ಮತ್ತು ಸಿ ಎಸ್ ಅಪರ್ಣ ಭಟ್ ರವರ ಸಹಭಾಗಿತ್ವದಲ್ಲಿ ಉಡುಪಿಯ ಇಂದ್ರಾಳಿಯಲ್ಲಿರುವ ಹಯಗ್ರೀವ ನಗರದಲ್ಲಿ ನೂತನ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿಯನ್ನು ಉದ್ಘಾಟಿಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರು ನೂತನ

ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಆಂಟನಿ ಫೆರ್ನಾಂಡಿಸ್ ನಿಧನ

ಮಂಗಳೂರು: ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆಂಟನಿ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.1936 ರಲ್ಲಿ ಉಡುಪಿ ಜಿಲ್ಲೆಯ ಕಳತ್ತೂರಿನಲ್ಲಿ ಜನಿಸಿದ ಅವರು ಶಿರ್ವ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ವಾರಣಾಸಿ ಧರ್ಮ ಪ್ರಾಂತ್ಯಕ್ಕೆ ಸೇರ್ಪಡೆ ಹೊಂದಿದ್ದರು. ಲಕ್ನೋ ದಲ್ಲಿರುವ ಸೈಂಟ್ ಪಾವ್ಲ್ ಸೆಮಿನರಿ ಮತ್ತು