Home Archive by category Fresh News (Page 373)

ಭೂಕಂಪದ ತೀವ್ರತೆ : ಸಾವು ನೋವುಗಳ ಮಧ್ಯೆ ಟರ್ಕಿ

ಇಸ್ತಾಂಬುಲ್ : ಟರ್ಕಿ ಮತ್ತು ಸಿರಿಯಾದಲ್ಲಿ, ಪ್ರಬಲ ಭೂಕಂಪ ಸಂಭವಿಸಿದಾಗ ಜನರು ಮಲಗಿದ್ದರು ಮತ್ತು ಕಟ್ಟಡಗಳು ಕುಸಿದವು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಜನ ಅವಶೇಷಗಳಡಿ ಸಿಲುಕಿಕೊಂಡರು. ಸೋಮವಾರ ಮುಂಜಾನೆ 4.17 ರ ಸುಮಾರಿಗೆ ಉಭಯ ದೇಶಗಳಲ್ಲಿ ಮೊದಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ 7.8 ರಷ್ಟಿತ್ತು. ತಕ್ಷಣವೇ ಹದಿನೆಂಟು ಭೂಕಂಪಗಳು ಸಂಭವಿಸಿದವು. ಎರಡೂ

ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸರಿಂದ ಕಿರುಕುಳ : ಕಬೀರ್ ಉಳ್ಳಾಲ್ ಆರೋಪ

ಮಂಗಳೂರು ಪೊಲೀಸ್ ಕಮೀಷನರ್, ಉಳ್ಳಾಲ ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕಬೀರ್ ಉಳ್ಳಾಲ್ ಆರೋಪಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಪ್ರಕರಣಗಳ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ಉಳ್ಳಾಲ ಪೊಲೀಸ್ ಇನ್

ಎಂಎಫ್‍ಸಿ ಸಂಸ್ಥೆಯ 8ನೇ ಶಾಖೆ ಎಂಎಫ್‍ಸಿ ಚಾಯ್ ಸ್ಟೇಷನ್ ಉದ್ಘಾಟನೆ

ಈಗಾಗಲೇ ಗ್ರಾಹಕರ ಮನಗೆದ್ದಿರುವ ಎಂಎಫ್‍ಸಿ ಸಂಸ್ಥೆಯ ಎಂಟನೇ ಶಾಖೆಯಾಗಿರುವ ಎಂಎಫ್‍ಸಿ ಚಾಯ್ ಸ್ಟೇಷನ್‍ನ ನೂತನ ಶಾಖೆಯೂ ಮಂಗಳೂರಿನ ಅತ್ತಾವರದ ರೈಲ್ವೇ ನಿಲ್ದಾಣದ ಬಳಿ ಶುಭಾರಂಭಗೊಂಡಿತ್ತು. ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ತನ್ನ ಸಂಸ್ಥೆಯನ್ನ ತೆರೆದು ಗ್ರಾಹಕರ ಗ್ರಾಹಕರ ಮನಗೆದ್ದಿರುವ ಎಂಎಫ್‍ಸಿ ಸಂಸ್ಥೆಯ ಎಂಟನೇ ಶಾಖೆಯಾಗಿರುವ ಎಂಎಫ್‍ಸಿ ಚಾಯ್ ಸ್ಟೇಷನ್‍ನ ನೂತನ ಶಾಖೆ ಮಂಗಳೂರಲ್ಲಿ ಶುಭಾರಂಭಗೊಂಡಿತ್ತು.

ಫೆ.10ರಂದು ಕರಾವಳಿಯಾದ್ಯಂತ ಪಿಲಿ ತುಳು ಸಿನಿಮಾ ಬಿಡುಗಡೆ

ಮಂಗಳೂರು: ಎನ್.ಎನ್.ಎಮ್. ಫ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ತುಳು ಚಿತ್ರ “ಪಿಲಿ” ತೆರೆಗೆ ಬರಲು ಸಿದ್ಧವಾಗಿದೆ ಎಂದು ಸಿನಿಮಾದ ಛಾಯಾಗ್ರಾಹಕ ನಿರ್ದೇಶಕ ಮಯೂರ್ ಆರ್. ಶೆಟ್ಟಿ ತಿಳಿಸಿದ್ದಾರೆ. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ದುಬೈನಲ್ಲಿ ಈಗಾಗಲೇ ಚಿತ್ರದ ಶೋ ನಡೆದಿದ್ದು, ಅಪಾರ ಜನ ಮೆಚ್ಚುಗೆ ಪಡೆದಿದೆ, ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು

ಕೂಳೂರಿನ ಮೇಲ್ಸೇತುವೆ ತಳಭಾಗ ಸುಂದರೀಕರಣ :ಫೆ.9ಕ್ಕೆ ಲೋಕಾರ್ಪಣೆ ಕಾರ್ಯಕ್ರಮ

ಸುರತ್ಕಲ್: “ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ತ್ಯಾಜ್ಯ ರಾಶಿ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ನಾವು ನಾಗರಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ತಂದು 1,100,00 ರೂ. ಖರ್ಚು ಮಾಡಿ ಫ್ಲೈ ಓವರ್ ಕೆಳಗಡೆ ಸುಂದರಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಫೆಬ್ರವರಿ 9ರಂದು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದುನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಹೇಳಿದರು.

ಶಕ್ತಿನಗರದ ನರ್ಸಿಂಗ್ ಹಾಸ್ಟೆಲ್‍ನಲ್ಲಿ ಆಹಾರ ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥ

ಊಟ ಸೇವಿಸಿದ ಬಳಿಕ 137 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿರುವ ನರ್ಸಿಂಗ್ ಹಾಸ್ಟೆಲ್ ನಲ್ಲಿ ನಡೆದಿದೆ. ಮಂಗಳೂರಿನ ಶಕ್ತಿನಗರದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ನಲ್ಲಿ ಫುಡ್ ಪಾಯಿಸನ್ ನಿಂದಾಗಿ 137 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ವಿದ್ಯಾರ್ಥಿನಿಯರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಮಂಗಳೂರು ಪೆÇಲೀಸ್

ತುಳುನಾಡಿನಲ್ಲೊಂದು ಅಪರೂಪದ ನವಗುಳಿಗ ದೈವದ ಗಗ್ಗರ ಸೇವೆ…!

ಬೆಳ್ತಂಗಡಿ : ದೈವಸ್ಥಾನಗಳಲ್ಲಿಕ್ಷೇತ್ರಪಾಲ ದೈವವಾಗಿ ಒಂದು ಅಥವಾ ಎರಡು ಗುಳಿಗ ದೈವದ ಸಾನಿಧ್ಯವಿರುವುದು ಮಾಮೂಲಿ. ಗುಳಿಗ ನೀಚನೂ, ಉಗ್ರನೂ ಆದ ದೈವ. ಇಂತಹ ಗುಳಿಗನ ಕೋಲ ನೋಡಲೆಂದು ಭಾರೀ ಜನಸ್ತೋಮವೇ ಸೇರುತ್ತದೆ. ಆದರೆ ಇಲ್ಲೊಂದು ಕಡೆಗಳಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರೀ ಕೋಲ ನಡೆಯುತ್ತದೆ. ಏನಿದರ ವಿಶೇಷವೆಂದು ನೋಡಲು ಈ ಸ್ಟೋರಿ ನೋಡಿ ಹೌದು.. ದೇವಿಯ ದೂತನಾಗಿರುವ ಗುಳಿಗನಿಗೆ ದೇವಿ ಆಲಯಗಳಲ್ಲಿ ಪ್ರತ್ಯೇಕ ಸಾನಿಧ್ಯವಿರುತ್ತದೆ. ಆದರೆ ದಕ್ಷಿಣ

`ಭಾರತ ಶಕ್ತಿಶಾಲಿಯಾದಾಗ ಜಗತ್ತಿನಲ್ಲಿ ಶಾಂತಿ’ : ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್

ಮಂಗಳೂರು: ಭಾರತ ದೇಶ ಅತ್ಯಂತ ಶಕ್ತಿಶಾಲಿಯಾದಾಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ನಮ್ಮ ದೇವಸ್ಥಾನ, ಪದ್ಧತಿ, ಪರಂಪರೆಗಳು ಉಳಿಯಬೇಕಾದರೆ ಮೊದಲು ದೇಶ ಉಳಿಯಬೇಕು ಎಂದು ಹೊಸದಿಗಂತ ಪತ್ರಿಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಹೇಳಿದರು.ನಗರದ ಕದ್ರಿಯಲ್ಲಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ

ಸಾಹಿತ್ಯ ಸಮ್ಮೇಳನದಲ್ಲಿ ಜನಮನ ರಂಜಿಸಿದ ಯಕ್ಷ ‘ಗಾನ’ ವೈಭವ

ಉಜಿರೆ, ಫೆ.6: ‌ದಕ್ಷಿಣ ಕನ್ನಡ ಜಿಲ್ಲಾ 25ನೆಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ರವಿವಾರ ಮಧ್ಯಾಹ್ನ ನಡೆದ ಯಕ್ಷ ‘ಗಾನ’ ವೈಭವ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಯಕ್ಷಗಾನ ಪ್ರಿಯರ ಚಪ್ಪಾಳೆಯ ಮೆಚ್ಚುಗೆ ಗಳಿಸಿದರು. ತಂಡದ ನಿರ್ದೇಶಕ (ಪುತ್ತೂರು ವಿವೇಕಾನಂದ ಕಾಲೇಜಿನ ಸಹ ಪ್ರಾಧ್ಯಾಪಕರು) ರಾದ ವರ್ಷಿತ್ ಕಿಜಕ್ಕಾರ್ ಅವರ ಚೆಂಡೆಯ ನಾದ ಹಾಗೂ ಕಿಶನ್ ರಾವ್ ಅವರ ಚಕ್ರತಾಳ ದನಿಯೊಂದಿಗೆ ವಿದ್ಯಾರ್ಥಿನಿಯರಾದ ಹೇಮಾ,

ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ತಾಯಿಗೆ ಸ್ವರಾಭಿಷೇಕಗೈದ ‘ಸುಮಧುರ ಗೀತೆಗಳ ಗಾಯನ’

ಉಜಿರೆ, ಫೆ 6: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಘಟ್ಟದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಸುಮಧುರ ಗೀತೆಗಳ ಗಾಯನದ ಮೂಲಕ ಸ್ವರಾಭಿಷೇಕವೇ ನಡೆಯಿತು. ಆ ಮೂಲಕ ಮೂರು ದಿನಗಳ ಅಕ್ಷರ ಜಾತ್ರೆ ಪೂರ್ಣ ಮುಕ್ತಾಯ ಕಂಡಿತು. “ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು..” “ಕರುನಾಡ ತಾಯಿ ಸದಾ ಚಿನ್ಮಯಿ..” ಮುಂತಾದ ಗೀತೆಗಳ ಮೂಲಕ ಸ