Home Archive by category Fresh News (Page 392)

ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಿಮಾತನಾಡಿದರು.ಪರಶುರಾಮನ ಪುತ್ಥಳಿ ನಿರ್ಮಾಣ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದೆ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ : ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರ ನೇತೃತ್ವ ದಲ್ಲಿ ನಡೆಯಲಿರುವ ಗ್ರಾಮ ವಿಕಾಸಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಿಮಿಸಿರುವ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು. ದೇವಳದ ಆಡಳಿತಮಂಡಳಿ

ಉಳ್ಳಾಲ ; ಕುಮ್ಕಿ ಜಮೀನಿನಿಂದ ಮರಗಳ ಕಡಿದುಅಕ್ರಮ ಸಾಗಾಟ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. 301/3 ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ

ವಿಟ್ಲ: ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಕಳ್ಳತನಕ್ಕೆ ಯತ್ನ: ಓರ್ವ ಆರೋಪಿ ಪೊಲೀಸರ ವಶಕ್ಕೆ

ವಿಟ್ಲ: ಪಡ್ನೂರು ಗ್ರಾಮದ ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಶೆಟರ್ ಅನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿಯಲು ಪ್ರಯತ್ನಿಸಿ ರಾತ್ರಿ ಕಳವು ಮಾಡಲು ಪ್ರಯತ್ನಿಸಿದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಟಿ.ಕೆ ಅಬ್ದುಲ್ (37) ಎಂದು. ಗುರುತಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ ಹೆಚ್ .ಇ. ರವರ ಮಾರ್ಗದರ್ಶನದಂತೆ, ವಿಟ್ಲ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ

ಬಲಿಜ ಸಮುದಾಯಕ್ಕೆ ಕೂಡಲೇ ಪೂರ್ಣ ಪ್ರಮಾಣದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಿ : ಬಲಿಜ ಸಂಕಲ್ಪ ಸಭೆಯಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ ಒತ್ತಾಯ

ಬೆಂಗಳೂರು, ಜ, 27; ಬಲಿಜ ಸಮುದಾಯಕ್ಕೆ ರಾಜ್ಯ ಸರ್ಕಾರ ಕೂಡಲೇ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಆರ್. ಸೀತಾರಾಂ ಒತ್ತಾಯಿಸಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಬೃಹತ್ “ಬಲಿಜ ಸಂಕಲ್ಪ ಸಭೆ”ಯಲ್ಲಿ ಬಲಿಜ ಸಮುದಾಯದ ಹಕ್ಕೊತ್ತಾಯಗಳನ್ನು ಬೆಂಬಲಿಸಿ ಮಾತನಾಡಿದ ಅವರು, ಬಲಿಜ ಸಮುದಾಯಕ್ಕೆ 2ಎ ಪ್ರವರ್ಗದಡಿ ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ಸೌಲಭ್ಯವಿದ್ದು, ಸರ್ಕಾರಿ

ಪತ್ರಕರ್ತ ನವೀನ್ ಸೂರಿಂಜೆ ಕೃತಿ ‘ಕುತ್ಲೂರು ಕಥನ’ ಬಿಡುಗಡೆ

ಮಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಬರೆದ ಕೃತಿ ಕುತ್ಲೂರು ಕಥನವನ್ನು ಖ್ಯಾತ ಚಿಂತಕ ಹರ್ಷ ಮಂದರ್ ಬಿಡುಗಡೆಗೊಳಿಸಿದರು. ಬಿಜ್ಜೋಡಿಯ ಶಾಂತಿ ಕಿರಣ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೃತಿಯ ಅನವಾರಣಗೊಳಿಸಿದ ಹರ್ಷ ಮಂದರ್ ಅವರು ಈ ಕೃತಿಯನ್ನು ಭಾಷಾ ಸಮಸ್ಯೆ ಕಾರಣದಿಂದಾಗಿ ಓದಲು ಸಾಧ್ಯವಾಗದೆ ಇರುವುದಕ್ಕೆ ಬೇಸರ ಇದೆ. ಆದರೆ ಇದರಲ್ಲಿರುವ ವಿಷಯಗಳನ್ನು ಅರಿತುಕೊಂಡಿದ್ದೇನೆ. ಈ ಕೃತಿ  ಸಂವಿಧಾನ ರಕ್ಷಣೆಗೆ ಸಹಾಯಕವಾಗಿದೆ ಎಂದು ಹೇಳಿದರು. ಒಂದು ಊರಿನ

ಉರ್ವಶೆ 2023- ಕೆಎಂಸಿ, ಮಣಿಪಾಲದಲ್ಲಿ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ

ಮಣಿಪಾಲ, 27ನೇ ಜನವರಿ 2023:ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಉಪವಿಭಾಗವಾಗಿರುವ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಭಾಗವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 2023 ರ ಜನವರಿ 21 – 22 ರಂದು ಮೊದಲ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ (ಉರ್ವಶೆ 2023 )ವನ್ನು ಆಯೋಜಿಸಿತ್ತು. ತಂಡವು ಆಯೋಜಿಸಿದ ದೇಶದ ವಿವಿಧ ಭಾಗಗಳಿಂದ ಸ್ತ್ರೀ ಶ್ರೋಣಿಯ (ಸ್ತ್ರೀ ಪೆಲ್ವಿಕ್) ಮೆಡಿಸಿನ್ ಮತ್ತು ಪುನರ್ನಿರ್ಮಾಣ

ಲಾರಿಯಿಂದ ಮೀನಿನ ತ್ಯಾಜ್ಯ ನೀರು ; ಸರಣಿ ಅಪಘಾತ, ಟ್ಯಾಂಕರ್ ತಡೆದು ಪ್ರತಿಭಟಿಸಿದ ಸ್ಥಳೀಯರು

ಉಳ್ಳಾಲ: ಫಿಸ್ ಮಿಲ್ ತ್ಯಾಜ್ಯಯುಕ್ತ ನೀರು ಟ್ಯಾಂಕರಿನಿAದ ರಸ್ತೆಯುದ್ದಕ್ಕೂ ಹರಿದು, ಸ್ಥಳೀಯರು ಟ್ಯಾಂಕರ್ ಳಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ಉಳ್ಳಾಲದಲ್ಲಿ ಇಂದು ನಡೆದಿದೆ. ಫಿಶ್ ಮೀಲ್ ತ್ಯಾಜ್ಯ ಹೊತ್ತಿದ್ದ ಟ್ಯಾಂಕರ್ ಒಂದು ಇಂದು ಬೆಳಿಗ್ಗೆ ಉಳ್ಳಾಲ ಕೋಟೆಪುರದ ಫ್ಯಾಕ್ಟರಿ ಕಡೆ ಸಾಗುತ್ತಿದ್ದ ವೇಳೆ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ಣದವರೆಗೆ ರಸ್ತೆಯುದ್ದಕ್ಕೂ ದುರ್ನಾತ ಬೀರುವ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನ ಚೆಲ್ಲುತ್ತಾ ಸಾಗಿದೆ.ಪರಿಣಾಮ

ವಿಧಾನ ಪರಿಷತ್ ಸದಸ್ಯರ ನೇತ್ರತ್ವದಲ್ಲಿ ವರಹಮೂರ್ತಿಗೆ ನೇಮ

ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ರವರ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಮನೆಯಲ್ಲಿ ವರಹಮೂರ್ತಿ ಹಾಗೂ ವಾರ್ತಾಳಿ ದೈವಗಳ ಹರಕೆಯ ನೇಮೋತ್ಸವ ಬಹಳ ಅದ್ಧೂರಿಯಾಗಿ ಜರಗಿತು. ಕಾಪು ತಾಲೂಕಿನ ಪಡುಬಿದ್ರಿ ಯುಪಿಸಿಎಲ್ ಕಾಲೋನಿ ಪ್ರದೇಶದ ಲಕ್ಷ್ಮೀ ವೆಂಕಟೇಶ ನಿಲಯದಲ್ಲಿ ಕುಟುಂಬದ ಹಿರಿಯರು ಆರಾಧಿಸಿಕೊಂಡು ಬಂದಿರುವ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೇಮೋತ್ಸವ ವಿಧ್ಯುಕ್ತವಾಗಿ ನೆರವೇರಿದೆ. ಸಂಜೆ ಹೊತ್ತಿಗೆ ಹಿರಿಯರ ಮಾರ್ಗದರ್ಶನದಂತೆ ಭಂಡಾರ ಹೊರಟು

ಜೂಲಿಯಟ್-2 ಸಿನಿಮಾ ತುಳುನಾಡಿನ ಹೊಸ ಭರವಸೆ

ಕನ್ನಡದಲ್ಲಿ ಕರಾವಳಿ ಕಂಟೆಂಟ್ ಇರುವ ಚಿತ್ರಗಳು ಹೆಚ್ಚು ಜನಪ್ರೀಯತೆ ಪಡೆಯುತ್ತಿವೆ. ಈ ಮೂಲಕ ಸಿನಿಪ್ರಿಯರ ಅಭಿರುಚಿ ಕೂಡ ಬದಲಾಗುತ್ತಿದೆ. ಇದೀಗ ತುಳುನಾಡಿನ ಹೊಸ ಭರವಸೆಯೊಂದಿಗೆ ಜೂಲಿಯಟ್-2 ಕನ್ನಡ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಹೊಸ ರೀತಿಯ ಕಥೆಯೊಂದಿಗೆ ಮನರಂಜಿಸುತ್ತಿರುವ ಕರಾವಳಿ ಕಡೆಯ ಕಥೆಗಳಲ್ಲಿ ಜೂಲಿಯಟ್-2 ಟೀಸರ್ ಹೆಚ್ಚು ಗಮನಸೆಳೆಯುತ್ತಿದೆ. ಜೂಲಿಯಟ್-2 ಸಿನಿಮಾ ಹೆಸರೇ ಹೇಳುವಂತೆ ಮಹಿಳಾ ಪ್ರಧಾನ ಚಿತ್ರ ಆಗಿದೆ. ಇಲ್ಲಿ ಹೆಚ್ಚು ಮಕ್ಕಳು ಎಷ್ಟು