ಸುರತ್ಕಲ್‌ನ ಕುಳಾಯಿ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾದ ಪ್ರಕರಣ ಬಗ್ಗೆ ಸಿಸಿಟಿ ಪೂಟೇಜ್ ಹಾಗೂ
ಹಾಸನ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಹಾಸನ ಸಕಲೇಶಪುರದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಇಂದು ಕಂದಾಯ ಸಚಿವ ಆರ್ ಆಶೋಕ್ ಮತ್ತು ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಭೇಟಿ ನೀಡಿ ಅತಿವೃಷ್ಠಿ ಪ್ರದೇಶವನ್ನು ಪರಿಶೀಲಿಸಿದರು. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್ 75 ರಲ್ಲಿ ಆಗಿರುವ ಭೂ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಆದಷ್ಟು ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸುವಂತೆ ಸೂಚಿಸಿದರು. ಅತೀವೃಷ್ಠಿ
ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಆಸ್ಕರ್ ಅವರ ಆರೋಗ್ಯ ವಿಚಾರಿಸಿದ ಹೆಗ್ಗಡೆಯವರು ಮಂಜುನಾಥ ಸ್ವಾಮಿಯ ಪ್ರಸಾದ ಹಾಕಿದರು. ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದರು. ಅಲ್ಲದೆ ಕೆಲ ಕಾಲ ಆಸ್ಪತ್ರೆಯ ವೈದ್ಯರ ಜೊತೆ ಮಾತುಕತೆ
ದಕ್ಷಿಣ ಕನ್ನಡ ಜಿಲ್ಲಾ ಸಂಸದರ ಧ್ವನಿಯನ್ನು ಗುರುತಿಸಲಾಗದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವರೇ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತಮ್ಮ ಸೇಹಿತರ ಜತೆ ಮಾತನಾಡುತ್ತಾ ಮುಖ್ಯಮಂತ್ರಿ ಬದಲಾವಣೆಯ ಕುರಿತಾದ ಹೇಳಿಕೆ ನೀಡಿರುವಂತಹ ಆಡಿಯೋ ಧ್ವನಿ ನಳಿನ್ ಕುಮಾರ್ ಕಟೀಲ್ ಅವರದ್ದು. ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೂ ಹೇಳಿಕೊಂಡಿದ್ದಾರೆ ಎಂದು ಅವರು
ಕಾವೂರು: ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ಇದರ ಕಾರ್ಯಕಾರಿಣಿ ಸಭೆ ಕಾವೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ಜರಗಿತು. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕಾರ್ಯಕಾರಿಣಿ ಉದ್ಘಾಟಿಸಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಅವಕಾಶ ಲಭಿಸುತ್ತದೆ. ಪಕ್ಷದ ಮೇಲೆ ನಿಷ್ಟೆಯಿಟ್ಟು ನಾವು ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದಾಗ ನಾಯಕರು ಇದನ್ನು ಗುರುತಿಸಿ ಪಕ್ಷ ಸಂಘಟನೆ ಜವಾಬ್ದಾರಿ ಜತೆಗೆ ಸ್ಥಳೀಯ ಚುನಾವಣಾ ಕಣಕ್ಕೂ ಇಳಿಸಲು ಸೂಚಿಸಬಹುದು.ಬಿಜೆಪಿ ಇತರ
ಪೀಠ ಕ್ರಿಯೇಷನ್ ವತಿಯಿಂದ ’ವಿವಾಸ್ವತ’ ಕನ್ನಡ ಕಿರುಚಿತ್ರದ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ್ ನೀರ್‌ಮಾರ್ಗ ಅವರು ’ವಿವಾಸ್ವತ’ ಕನ್ನಡ ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪೀಠ ಕ್ರಿಯೇಶನ್‌ನವರು ವಿವಾಸ್ವತ ಎಂಬ ಕಿರುಚಿತ್ರವನ್ನು ಹೊರತಂದಿದೆ. ಸಮಾಜಕ್ಕೆ ಕನ್ನಡಿ ಹಿಡಿದು ಸಮಾಜವನ್ನು ತಿದ್ದುವ ಕೆಲಸ ಇವರ ಕಿರುಚಿತ್ರ
ಆಲೂರು: ಆಲೂರು ತಾಲೂಕಿನಾದ್ಯಂತ ವರುಣ ಆರ್ಭಟಿಸಿ ಬೊಬ್ಬಿರಿಯುತ್ತಿದ್ದು ತಾಲೂಕು ಪಾಳ್ಯ ಚಂದ್ರಶೇಖರ್ ಎಂಬುವವರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಶಂಕುತೀರ್ಥ ಹೊಳೆಯ ನೀರು ದಿಡೀರನೆ ನುಗ್ಗಿದ ಪರಿಣಾಮವಾಗಿ ಶುಂಠಿ ಬೆಳೆಯುವ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ ಅಲ್ಲದೆ ಭತ್ತದ ನಾಟಿಗಾಗಿ ಸಿದ್ದಪಡಿಸಿದ್ದ ಸಸಿ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಸಂಗ ತಾಲೂಕಿನಲ್ಲಿ ನಡೆದಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ
ನಾಗಮಂಗಲ: ಪ್ರತಿಯೊಬ್ಬರು ಸಮಾಜದಲ್ಲಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರೂ ಆರೋಗ್ಯದಿಂದ ಎಚ್ಚರಿಕೆಯಿಂದ ಇರುವಂತೆ ಶಾಸಕ ಸುರೇಶಗೌಡ ಕರೆ ನೀಡಿದರು. ಅವರಿಂದು ನಾಗಮಂಗಲ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸುತ್ತ ಕರೋನಾ ಮಹಾಮಾರಿಯ ಕಡಿಮೆ ಯಾಗಿದೆ ಎಂದು ಎಚ್ಚರ ತಪ್ಪಿದರೆ ಅಪಾಯ ಆದ್ದರಿಂದ ಸಾಮಾಜಿಕ ಅಂತರದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಈ
ಸುರತ್ಕಲ್ ಭಾಗದಲ್ಲಿ ಹಲವು ಸಮಯಗಳಿಂದ ಭಿಕ್ಷಾಟನೆಯ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದ್ದು ಇದರ ಬಗ್ಗೆ ಹಲವಾರು ಬಾರಿ ಆಪತ್ಭಾಂಧವ ಸಮಾಜ ಸೇವಾ ಸಂಘ(ರಿ.) ಸುರತ್ಕಲ್ ವಿವಿಧ ಇಲಾಖೆಗಳ ಗಮನಕ್ಕೆ ತಂದಿದ್ದರೂ ಅದರ ಬಗ್ಗೆ ಯಾವುದೇ ತರಹದ ಕ್ರಮ ಕೈಗೊಂಡಿಲ್ಲ. ಸುರತ್ಕಲ್ ನಲ್ಲಿ ಹಲವಾರು ದಾನಿಗಳ ನೆರವಿನಿಂದ ಫ್ಲೈ ಓವರ್ ಅಡಿಯನ್ನು ಸ್ವಚ್ಛ ಭಾರತದ ಯೋಜನೆಯಡಿಯಲ್ಲಿ ಸ್ವಚ್ಛ ಸುರತ್ಕಲ್ ಎಂಬ ಯೋಜನೆಯೊಂದಿಗೆ ನಿರ್ಮಿಸಲಾಗಿದ್ದ ಫ್ಲೈ ಓವರ್ ಅಡಿಯಲ್ಲಿ
ಒಲಿಂಪಿಕ್ಸ್‌ನ ಮೊದಲ ದಿನದಂದು ಪದಕದ ಬೇಟೆ ಆರಂಭಿಸಿದೆ. ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರು. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೀನಾದ ಝಿಹುಯಿ ಸ್ನ್ಯಾಚ್ ಹಾಗೂ ಕ್ಲೀನ್ ಮತ್ತು ಜೆರ್ಕ್ ಎರಡರಲ್ಲೂ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಕ್ಲೀನ್ ಹಾಗೂ ಜರ್ಕ್ ನಲ್ಲಿ ಒಟ್ಟು 110 ಕೆಜಿ ಎತ್ತಿ ಹಿಡಿದಿರುವ ಭಾರತದ


















