ಹುತಾತ್ಮ ದಿನಾಚರಣೆಯ ಅಂಗವಾಗಿ ಐತಿಹಾಸಿಕ ನರಗುಂದ ಬಂಡಾಯದ ಹೋರಾಟ ಮುಗಿಸಿ ವಾಪಸ್ ಹಾಸನಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ ಮತ್ತು ಚನ್ನಪಟ್ಟಣ ರಾಮಣ್ಣನವರು ನಿಧನರಾಗಿದ್ದಾರೆ. ಚಿಕ್ಕಮಗಳೂರು ಬಳಿ ಅಪಘಾತ ಸಂಭವಿಸಿದ್ದು ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು
ಗುಂಡ್ಯ: ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ಭೂಕುಸಿತವಾಗಿದೆ. ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರಸಿದ್ದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ, ಸೌತ್ತಡ್ಕ ಕ್ಷೇತ್ರಕ್ಕೆ ಭೇಟಿ ನೀಡುವ ವಾಹನದ ಚಾಲಕರು ಪರಾಡುತ್ತಿರುವ ಮಾಹಿತಿ ಲಭಿಸಿದೆ. ಇನ್ನು ಮುಂಜಾಗೃತವಾಗಿ ಗುಂಡ್ಯ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳಿಗೆ ತಡೆ
ಕಾರ್ಕಳ: ಮಲಬಾರ್ ಗೋಲ್ಡ್ ವತಿಯಿಂದ ಕಾರ್ಕಳದ ಶಾಸಕರ ಭವನದಲ್ಲಿ ತಾಲೂಕಿನ ಅರ್ಹ ಬಡ ವರ್ಗದವರಿಗೆ ರೇಷನ್ ಕಿಟ್ ಗಳನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿತರಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ಮ್ಯಾನೇಜರ್ ರಾಘವೇಂದ್ರ ನಾಯಕ್ ಅಜೆಕಾರ್ ಅವರು ಬಡ ಜನತೆಗೆ ಇರುವ ಮಲಬಾರ್ ಗೋಲ್ಡ್ ನ ಸಾಮಾಜಿಕ ಸೌಲಭ್ಯಗಳ ಬಗ್ಗೆ ವಿವರಣೆಗಳನ್ನು ನೀಡಿದರು.ಕಾರ್ಕಳ ನಗರ ಬಿಜೆಪಿ ಅಧ್ಯಕ್ಷರು ಮಹಾವೀರ್ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷರು ಮಾಲಿನಿ ಜೆ ಶೆಟ್ಟಿ,
ಕೊನೆಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ರಾಜೀನಾಮೆಯ ಸುಳಿವು ನೀಡಿದ್ದಾರೆ. ಕೇಂದ್ರದ ವರಿಷ್ಠರು ನೀಡುವ ಆದೇಶವನ್ನು ಚಾಚು ತಪ್ಪದೆ ಪಾಲಿಸುತ್ತೇನೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದಾರೆ. ಇಡೀ
ಮಂಗಳೂರು: ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಭಜನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ಆಗಮಿಸಿರುವ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ
ನಿರಂತರವಾಗಿ ಜನರಿಗೆ ತೊಂದರೆ ನೀಡುತ್ತಾ ಬಂದಿರುವ ಯುಪಿಸಿಎಲ್ ಕಂಪನಿಯ ಅವಾಂತರದಿಂದಾಗಿ ಕೃಷಿ ಚಟುವಟಿಕೆ ನಡೆಸಿದ ಗದ್ದೆಯಲ್ಲಿ ನೀರು ನಿಂತು ಕೃಷಿ ನಾಶವಾಗುತ್ತಿದ್ದು, ಈ ಬಗ್ಗೆ ಸ್ಥಳೀಯಾಢಳಿತ ಸಹಿತ ಯುಪಿಸಿಎಲ್ ಕಂಪನಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆ ನಿಟ್ಟಿನಲ್ಲಿ ನಮ್ಮ ಬದುಕಿಗಾಗಿ ಪ್ರತಿಭಟಿಸುವುದು ಅನಿವಾರ್ಯ ಎಂಬುದಾಗಿ ಉಚ್ಚಿಲ ಬಡಾ ಗ್ರಾಮದ ಸಂತ್ರಸ್ಥ ರೈತರು ಎಚ್ಚರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆಕ್ರೋಶ ವ್ಯಕ್ತ ಪಡಿಸಿದ
ನರಗುಂದ ನವಲಗುಂದ ರೈತ ಬಂಡಾಯದ 41 ನೇ ವರ್ಷಾಚರಣೆ ಹಾಗೂ ರೈತ ಹುತಾತ್ಮರ ದಿನಾಚಣೆ ಹಾಗೂ ರೈತ ಸಮಾವೇಶ ಗದಗ ಜಿಲ್ಲೆಯ ನರಗುಂದದಲ್ಲಿ ನಡೆಯಿತು. ಇಲ್ಲಿನ ರೈತ ಸಂಪರ್ಕ ಕೇಂದ್ರದ ಸಮೀಪ , ರೈತ ನಾಯಕ ದಿವಂಗತ ಬಾಬಾ ಗೌಡ ಪಾಟೀಲ್ ವೇದಿಕೆಯಲ್ಲಿ ಸಮಾವೇಶ ನಡೆಯಿತು. ಸಮಾವೇಶಕ್ಕಿಂತ ಮೊದಲು ಹುತಾತ್ಮ ರೈತ ಹೋರಾಟಗಾರರ ಪ್ರತಿಮೆಗೆ ರೈತ ಮುಖಂಡರು ಗೌರವ ಸಲ್ಲಿಸಿದರು. ಬಳಿಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೈತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ದಿಲ್ಲಿ ರೈತ ಹೋರಾಟದ
ಚೀನಾದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಇದುವರೆಗೂ 12 ಮಂದಿ ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಹೆನ್ನಾನ್ ಪ್ರಾಂತ್ಯದ ಝೆಂಗ್ಜು ಪ್ರದೇಶದಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ 201.9 ಮಿ,ಮೀ ಮಳೆಯಾಗಿದೆ. ಝೆಂಗ್ಜು ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ಹರಿಯುತ್ತಿದ್ದು, ನೂರಾರು ಮನೆ ಮಠಗಳು ನಾಶವಾಗಿವೆ. ಇದುವರೆಗೂ 12 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಮುಂಜಾಗೃತಾ
ಉಡುಪಿ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಒಂದೇ ವಾರದಲ್ಲಿ ಬೇಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯ ಜೊತೆಯಲ್ಲಿದ್ದಾಗಲೇ ಪತಿ ರಾಮಕೃಷ್ಣ ವಿಶಾಲ ಗಾಣಿಗ ಹತ್ಯೆಗೆ ಸುಫಾರಿ ಕೊಟ್ಟಿದ್ದ. ಅಲ್ಲದೇ ಮನೆಗೆ ಹಣದ ಪಾರ್ಸೆಲ್ ಕಳುಹಿಸಿ ಪತ್ನಿಯನ್ನು ಕೊಂದು ಮುಗಿಸಿದ್ದಾನೆ. ಉಡುಪಿ ಜಿಲ್ಲೆಯ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜುಲೈ 12ರಂದು ಕೊಲೆಯಾಗಿದ್ದ ವಿಶಾಲ ಗಾಣಿಗ ಕೊಲೆಯನ್ನು ಪತಿಯೇ
ಗಾಂಧಿ ಪಥ ಗ್ರಾಮ ಪಥ (ನಮ್ಮ ಗ್ರಾಮ ನಮ್ಮ ರಸ್ತೆ) ಯೋಜನೆಯಡಿಯಲ್ಲಿ ಕಾಪು ತಾಲೂಕಿನ ಪಲಿಮಾರು ಅವರಾಲು ಮಟ್ಟುವಿನಿಂದ ಮುಲ್ಕಿಗೆ ಸಂಪರ್ಕ ಹೊಂದಿರುವ ಸೇತುವೆಯಲ್ಲಿ ಉದ್ಘಾಟನೆಗೆ ಮುನ್ನವೇ ಬಿರುಕು ಕಾಣಿಸಿದ್ದು, ಬಾಲಗ್ರಹ ಪೀಡೆಗೆ ಒಳಗಾಗಿದೆ. ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಸ್ಥಳೀಯ ಪಲಿಮಾರು ಗ್ರಾ.ಪಂ. ಸದಸ್ಯ ಶಿವರಾಮ್ ಎಂಬವರು, ಜನರ ಬಲು ಬೇಡಿಕೆಯ ಸೇತುವೆ ಇದಾಗಿದ್ದು, ಇದರ ಉಸ್ತುವಾರಿಯನ್ನು ಪಂಚಾಯತ್ ರಾಜ್ಯ ಇಂಜಿನಿಯರ್ ಇಲಾಖೆ, ಉಡುಪಿ.


















